Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇ-ಆಟೋ, ಟ್ಯಾಕ್ಸಿಗಳಿಗೆ ಪರ್ಮಿಟ್ ಕಡ್ಡಾಯ: ರಾಜ್ಯ ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ!

Spread the love

ಮಂಗಳೂರು: ರಾಜ್ಯಾದ್ಯಂತ ಬ್ಯಾಟರಿ ಚಾಲಿತ ಆಟೋ, ಟ್ಯಾಕ್ಸಿ ಸಹಿತ ವಾಣಿಜ್ಯ ಉದ್ದೇಶದ ಇ-ವಾಹನಗಳಿಗೆ ಪರ್ಮಿಟ್‌ನ ನಿಯಂತ್ರಣ ಹೇರಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.

2022ರಿಂದ ಇದುವರೆಗೆ ಇ-ವಾಹನ ಗಳಿಗೆ ಪರ್ಮಿಟ್‌ಗಳ ಕಿರಿಕಿರಿ ಇರಲಿಲ್ಲ, ಇದ ರಿಂದಾಗಿ ಇ-ಆಟೋ ಮತ್ತು ಟ್ಯಾಕ್ಸಿಯವರು ಎಲ್ಲೆಂದರಲ್ಲಿಗೆ ಬಾಡಿಗೆ ಮಾಡುವುದು ಸಾಧ್ಯವಾಗಿತ್ತು.

ಇದರ ವಿರುದ್ಧ ಮುಖ್ಯವಾಗಿ ಕರಾವಳಿಯಲ್ಲಿ ಆಟೋ ಚಾಲಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.

ಸಾರಿಗೆ ಇಲಾಖೆಯು ಪ್ರಸ್ತುತ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ರಾಜ್ಯದಲ್ಲಿ ಬ್ಯಾಟರಿ ಚಾಲಿತ ಹಾಗೂ ಮೆಥನಾಲ್‌ ಮತ್ತು ಇಥನಾಲ್‌ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ರಹದಾರಿ ಪಡೆಯುವುದರಿಂದ ವಿನಾಯಿತಿ ನೀಡಿ ಹೊರಡಿಸಲಾಗಿದ್ದ 20-01-2022ರ ಆದೇಶವನ್ನು ಹಿಂಪಡೆಯಲಾಗಿದೆ. ಅಲ್ಲದೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸದಾಗಿ ನೋಂದಣಿಯಾಗುವ ಹಾಗೂ ಈಗಾಗಲೇ ನೋಂದಣಿಯಾಗಿ ರಹದಾರಿ ಇಲ್ಲದೆ ಸಂಚರಿಸುತ್ತಿರುವ ಇಂಥ ಎಲ್ಲ ವಾಹನಗಳು “ಶುಲ್ಕರಹಿತ’ವಾಗಿ ರಹದಾರಿ ಪಡೆಯಬೇಕಿದೆ.

ಕರಾವಳಿಯಲ್ಲೇ ಅಧಿಕ ಪ್ರತಿರೋಧ
ಇ- ಆಟೋಗಳು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿವೆ, ಇದರಿಂದಾಗಿ ನ್ಯಾಯಬದ್ಧವಾಗಿ ಪರ್ಮಿಟ್‌ ಶುಲ್ಕ ಪಾವತಿಸಿ, ಎಲ್ಲ ನಿಬಂಧನೆಗಳೊಂದಿಗೆ ಆಟೋ ಓಡಿಸುವವರು ನಷ್ಟಕ್ಕೊಳಗಾಗುತ್ತಿದ್ದಾರೆ ಎನ್ನುವುದು ಆಟೋ ಸಂಘಟನೆಗಳ ದೂರಾಗಿತ್ತು. ಇದು ಪದೇ ಪದೆ ಸಾರಿಗೆ ಅಧಿಕಾರಿಗಳ ಮುಂದೆ ಬರುತ್ತಿತ್ತು.

ರಾಜ್ಯದಲ್ಲಿ ಅತ್ಯಧಿಕ ದೂರುಗಳು ಮಂಗಳೂರಿನಿಂದಲೇ ಬರುತ್ತಿದ್ದವು, ಹಾಗಾಗಿ ಬ್ಯಾಟರಿ ಚಾಲಿತ ಪರ್ಮಿಟ್‌ ಇಲ್ಲದ ಇ-ಆಟೋಗಳನ್ನು ನಿಯಂತ್ರಣಕ್ಕೆ ತರಲು ಹೊಸ ನಿಯಮ ಜಾರಿಗೆ ಬರುತ್ತಿದೆ ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು.

ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ಚಾಲಿತ ಬಾಡಿಗೆ ವಾಹನಗಳಿಗೆ ಐದು ವರ್ಷಕ್ಕೊಮ್ಮೆ ಪರ್ಮಿಟ್‌ ನವೀಕರಿಸಲಾಗುತ್ತದೆ. ಇದಕ್ಕೆ 600 ರೂ. ಶುಲ್ಕ ತಗಲುತ್ತದೆ. ಇವಿ, ಎಥನಾಲ್‌ ವಾಹನಗಳಿಗೆ ಈ ಶುಲ್ಕ ಇರದು. ಆದರೆ ಪರ್ಮಿಟ್‌ ಪಡೆಯಲೇಬೇಕು ಎಂಬುದು ಹೊಸ ನಿಯಮ.

ಶೀಘ್ರ ಮಾರ್ಗಸೂಚಿ
ಈ ಹೊಸ ನಿಯಮ ಅನುಷ್ಠಾನ ಸಂಬಂಧ ಶೀಘ್ರವೇ ಶೀಘ್ರದಲ್ಲೇ ಸಾರಿಗೆ ಆಯುಕ್ತರಿಂದ ಮಾರ್ಗಸೂಚಿ ಬರಲಿದೆ. ಬಳಿಕ ಹೊಸ ಹಾಗೂ ಈಗಾಗಲೇ ನೋಂದಣಿಯಾದ ಪರಿಸರ ಸ್ನೇಹಿ ವಾಹನಗಳಿಗೆ ಶುಲ್ಕರಹಿತವಾಗಿ ಪರ್ಮಿಟ್‌ ನೀಡುವ ಪ್ರಕ್ರಿಯೆ ಆರಂಭವಾಗಲಿದೆ.

ಕರ್ನಾಟಕದಲ್ಲಿ ಮಾತ್ರ?
2018ರ ಅಕ್ಟೋಬರ್‌ ತಿಂಗಳಿನಲ್ಲಿ ಕೇಂದ್ರ ಭೂಸಾರಿಗೆ ಸಚಿವಾಲಯವು ಬಯೋ ಇಂಧನ, ಬ್ಯಾಟರಿ ಚಾಲಿತ ವಾಹನಗಳಿಗೆ ಪರ್ಮಿಟ್‌ ಪಡೆಯುವುದರಿಂದ ವಿನಾಯಿತಿ ನೀಡಿತ್ತು. 2022ರ ಜ. 1ರಿಂದ ಇದನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂತು. ಪರಿಸರಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

ಬದಲಾವಣೆ ಏನಾಗಲಿದೆ?
ಈ ಕಾನೂನು ಬಂದರೆ ಟ್ಯಾಕ್ಸಿಗಳ ಕಾರ್ಯನಿರ್ವಹಣ ವಿಧಾನದಲ್ಲಿ ದೊಡ್ಡ ಬದಲಾವಣೆಯಾಗದು. ಯಾಕೆಂದರೆ ಇ- ಟ್ಯಾಕ್ಸಿ ಸಂಖ್ಯೆ ಹೆಚ್ಚೇನಿಲ್ಲ. ಆದರೆ ಇ-ಆಟೋಗಳ ಸಂಖ್ಯೆ ಬಹಳಷ್ಟಿದೆ. ಆಟೋಗಳಿಗೆ ಪರ್ಮಿಟ್‌ ಕೊಟ್ಟರೆ ರಹದಾರಿ ಇರುವ ವಲಯದಲ್ಲಿ ಮಾತ್ರ ಕಾರ್ಯಾಚರಿಸಬೇಕು ಎನ್ನುತ್ತಾರೆ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಮಲ್ಲಾಡ್‌. ಸರಕಾರದ ಈ ಕ್ರಮವನ್ನು ಟೀಕಿಸುವ ಇ- ಆಟೋ ರಿಕ್ಷಾ ಚಾಲಕ ಪ್ರಜೇಶ್‌, ತಮಿಳುನಾಡು ಮಾದರಿಯನ್ನು ಇಲ್ಲಿ ಅನುಷ್ಠಾನ ಮಾಡಲು ರಾಜ್ಯ ಸರಕಾರ ಹೊರಟಂತಿದೆ. ಪರ್ಮಿಟ್‌ ವಿಧಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಬ್ಯಾಟರಿ ಚಾಲಿತ, ಎಥನಾಲ್‌, ಮೆಥನಾಲ್‌ ಚಾಲಿತ ವಾಹನಗಳಿಗೂ ಪರ್ಮಿಟ್‌ ಕಡ್ಡಾಯಗೊಳಿಸಲಾಗಿದೆ. ಇದರ ಮಾರ್ಗಸೂಚಿ ಶೀಘ್ರ ಬರಲಿದೆ. ಕರಾವಳಿ ಭಾಗದಿಂದ ಬಹಳಷ್ಟು ದೂರು ಬರುತ್ತಿತ್ತು, ಪೆಟ್ರೋಲ್‌/ಡೀಸೆಲ್‌ ಆಟೋದವರು ತಮಗೆ ಮಾತ್ರ ನಿರ್ಬಂಧ ಇದೆ, ಇ- ಆಟೊದವರಿಗೆ ಯಾವುದೇ ನಿಯಂತ್ರಣ ಇಲ್ಲ ಎಂದು ದೂರುತ್ತಿದ್ದರು. ಹೊಸ ಆದೇಶದಿಂದ ಇವಿ ಬಾಡಿಗೆ ವಾಹನಗಳಿಗೂ ಪರ್ಮಿಟ್‌ ಬರಲಿದೆ.


Spread the love
Share:

administrator

Leave a Reply

Your email address will not be published. Required fields are marked *