ವಿಮಾನ ನಿಲ್ದಾಣದ ಬಳಿ ಇರುವ ಮನೆ ಕಟ್ಟಡಗಳಿಗೆ ಹೊಸ ರೂಲ್ಸ್

ನವದೆಹಲಿ:ಕಳೆದ ವಾರ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತದ ಹೊಡೆತಕ್ಕೆ ಭಾರತದ ವಾಯುಯಾನ ವಲಯ ತತ್ತರಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು ಪ್ರಯಾಣಿಕರ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಿ ಎಂದಿದ್ದಾರೆ.

ಇದರ ಮಧ್ಯೆ ಸಾಮಾನ್ಯವಾಗಿ ವಿಮಾನ ನಿಲ್ದಾಣಗಳ ಸಮೀಪ ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಅವಕಾಶವೇ ಸಿಗುವುದಿಲ್ಲ. ಏರ್ಪೋರ್ಟ್ ಅಥಾರಿಟಿಯ ಅನುಮತಿ ಪಡದೇ ಕಟ್ಟಡ ನಿರ್ಮಿಸಬೇಕು. ಇದೀಗ ಏರ್ಪೋರ್ಟ್ ಆಸುಪಾಸಿನಲ್ಲಿರುವ, ವಿಮಾನಗಳಿಗೆ ಅಪಾಯ ತಂದೊಡ್ಡಬಹುದಾದ ಕಟ್ಟಡ ಒಡೆಯಲು ಮತ್ತು ಎತ್ತರದ ಮರಗಳನ್ನು ಕತ್ತರಿಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ನಿಯಮ ಜಾರಿಗೆ ಬರಲಿದೆ.
ಇನ್ಮುಂದೆ ಏರ್ಪೋರ್ಟ್ ಆಸುಪಾಸಿನಲ್ಲಿ ನಿಯಮಗಳನ್ನು ಮೀರಿ ಎತ್ತರವಾಗಿ ಕಟ್ಟಿಸಿದ ಕಟ್ಟಡಗಳನ್ನು ಕೆಡವಲಾಗುತ್ತದೆ. ವಿಮಾನಗಳಿಗೆ ಅಪಾಯ ತಂದೊಡ್ಡಬಹುದಾದ ಮರಗಳನ್ನು ಕತ್ತರಿಸಲಾಗುತ್ತದೆ.

ಡಿಜಿಸಿಎ ಹೊರಡಿಸಿದ ನಿಯಮದಲ್ಲೇನಿದೆ?
ಅಧಿಕಾರಿಗಳು ಮೊದಲು ಎತ್ತರದ ಕಟ್ಟಡಗಳನ್ನು ಗುರುತಿಸಿ, ನಿಯಮ ಮೀರಿರುವ ಕಟ್ಟಡಗಳ ಪರಿಶೀಲನೆ ಮಾಡುತ್ತಾರೆ. ಅದಕ್ಕೂ ಮೊದಲು ಮಾಲೀಕರಿಗೆ ತಿಳಿಸುತ್ತಾರೆ. ಮಾಲೀಕರು ಅಸಹಕಾರ ತೋರಿದರೆ ಅಧಿಕಾರಿಗಳು ಕ್ರಮಕೈಗೊಳ್ಳಬಹುದು. ಒಂದು ವೇಳೆ ಕಟ್ಟಡ ನಿಯಮ ಮೀರಿ ಕಟ್ಟಿದ್ದು ಗೊತ್ತಾದರೆ, ಅದನ್ನು ಕೆಡವುವ ಹಕ್ಕು ಅಧಿಕಾರಿಗಳಿಗೆ ಸಿಗುತ್ತದೆ.

ಅಧಿಕಾರಿಗಳು ಏನು ಮಾಡುತ್ತಾರೆ ಗೊತ್ತಾ?
ಒಂದು ವೇಳೆ ನಿಯಮ ಮೀರಿ ಎತ್ತರದ ಕಟ್ಟದ ನಿರ್ಮಿಸಿದ್ದರೆ, ಅಂಥಾ ಕಟ್ಟಡಗಳನ್ನು ಗುರುತಿಸಿ ವಿಮಾನ ನಿಲ್ದಾಣದ ಉಸ್ತುವಾರಿ ಅಧಿಕಾರಿ ನೋಟಿಸ್ ನೀಡುತ್ತಾರೆ. ಆ ನೋಟಿಸ್ಗೆ ಕಟ್ಟಡದ ಮಾಲೀಕರು ಕಡ್ಡಾಯವಾಗಿ 60 ದಿನಗಳ ಒಳಗೆ ಉತ್ತರ ಕೊಡಲೇಬೇಕು. ಒಂದು ವೇಳೆ ಮಾಲೀಕರು ಮಾಹಿತಿ ನೀಡದಿದ್ದರೆ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಕಟ್ಟಡಗಳ ಮಾಲೀಕರು ನಿಯಮ ಮೀರಿದ್ದರೆ, ಆ ಕಟ್ಟಡವನ್ನು ಕೆಡವಲು ಆದೇಶ ಹೊರಡಿಸುತ್ತಾರೆ.
