Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: BBMP ನಿರ್ಲಕ್ಷ್ಯಕ್ಕೆ ಯುವಕ ಸಾವು-ಬದುಕಿನ ಮಧ್ಯೆ ಹೋರಾಟ; FIR ದಾಖಲು

Spread the love

BBMP ಅಧಿಕಾರಿಗಳ ನಿರ್ಲಕ್ಷ್ಯ: ಸಾವು ಬದುಕಿನ ಹೋರಾಟದಲ್ಲಿ ಯುವಕ- ಅಂತದ್ದೇನಾಯ್ತು?

ಬೆಂಗಳೂರು:– BBMP ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಬಿಬಿಎಂಪಿ ಅಗೆದ ರಸ್ತೆಯಿಂದ ಸಂಭವಿಸಿದ ಅಪಘಾತದಿಂದ ಯುವಕನ ಸ್ಥಿತಿ ಗಂಭೀರವಾಗಿದೆ.

ಘಟನೆ ಬೆನ್ನಲ್ಲೇ ಯುವಕನ ತಂದೆ ಕೊಟ್ಟ ದೂರಿನ ಅನ್ವಯ ಬಿಬಿಎಂಪಿ , ಜಲಮಂಡಳಿ ಜಾಗೂ ಗುತ್ತಿಗೆದಾರನ ವಿರುದ್ಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಜೂನ್ 8ರ ಮಧ್ಯರಾತ್ರಿ 1.30ರ ಸುಮಾರಿಗೆ ರಾಜ್ ಕುಮಾರ್ ರಸ್ತೆಯ ಕಾಫಿ ಡೇ ಮುಂಭಾಗ ಬಿಬಿಎಂಪಿ ಕಾಮಗಾರಿಯಿಂದ ಈ ಅನಾಹುತ ಸಂಭವಿಸಿತ್ತು.

ರಸ್ತೆ ಪಕ್ಕದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಪಾಲಿಕೆ ಕಾಮಗಾರಿ ಮಾಡಿದ್ದರಿಂದ ಅನಾಹುತ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮಂಜುನಾಥ್ ಬಿ.ಜಿ (28) ಎಂಬ ಯುವಕ ಬೈಕ್ ನಲ್ಲಿ ಬರುವಾಗ ಅಪಘಾತ ಸಂಭವಿಸಿತ್ತು. ಅಪಘಾತ ಹಿನ್ನೆಲೆ ಖಾಸಗಿ ಆಸ್ಪತ್ರೆಯ ತೀರ್ವ ನಿಘ ಘಟಕದಲ್ಲಿ ಮಂಜುನಾಥ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಮಂಜುನಾಥ್ ಬಿ.ಜಿ ಅವರ ತಂದೆಯಿಂದ ದೂರು ನೀಡಲಾಗಿದೆ.

ಈ ಬಗ್ಗೆ ಬಿಬಿಎಂಪಿ ಕಮಿಷನರ್ ಗೂ ಮಂಜುನಾಥ್ ತಂದೆ ಗಣೇಶ್ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *