ಭಾರತೀಯ ಸೇನೆಗೆ AI-ಚಾಲಿತ ನೆಗೆವ್ ಮೆಷಿನ್ ಗನ್

ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಉಪಕ್ರಮಗಳ ಅಡಿಯಲ್ಲಿ ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠ ಮಾಡುತ್ತಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದ್ದು, ಇಂದು AI-ಚಾಲಿತ ಮೆಷಿನ್ ಗನ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಡೆಹ್ರಾಡೂನ್ ಮೂಲದ ರಕ್ಷಣಾ ಸಂಸ್ಥೆ ಬಿಎಸ್‌ಎಸ್ ಮೆಟೀರಿಯಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದ, AI-ಚಾಲಿತ ನೆಗೆವ್ ಮೆಷಿನ್ ಗನ್‌ಅನ್ನು ಭಾರತೀಯ ಸೇನೆಯ ಸಹಯೋಗದೊಂದಿಗೆ 14,000 ಅಡಿ ಎತ್ತರದಲ್ಲಿ ಪರೀಕ್ಷಿಸಲಾಗಿದೆ.
ಕೃತಕ ಬುದ್ಧಿಮತ್ತೆಯ ಸಹಾಯದೊಂದಿಗೆ ಕಾರ್ಯನಿರ್ವಹಿಸರುವ ಈ ಶಸ್ತ್ರಾಸ್ತ್ರವು ಮಾನವ ರಹಿತವಾಗಿ ಶತ್ರುಗಳನ್ನು ಗುರುತಿಸಿ, ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಿಕೊಂಡು ಶತ್ರುಗಳನ್ನು ಹಿಮ್ಮೆಟ್ಟಿಸಲಿದೆ. ಈ AI-ಚಾಲಿತ ನೆಗೆವ್ ವ್ಯವಸ್ಥೆಯನ್ನು ಹೆಚ್ಚಿನ ಅಪಾಯ ಇರುವ ಕಡೆಗಳಲ್ಲಿ ನಿಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಶತ್ರುಗಳ ಬೆದರಿಕೆಗೆ ತ್ವರಿತ ಪ್ರತಿಕ್ರಿಯೆ ಅಗತ್ಯವಿರುವ ಕಡೆಯಲ್ಲಿ ಇವುಗಳನ್ನು ನಿಯೋಜಿಸಬಹುದಾಗಿದೆ.