Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉದ್ಯೋಗಿಗಳಿಗೆ ಮುದ್ದಾದ ಟ್ರೀಟ್: ಶ್ವಾನ ನೇಮಕ ಮಾಡಿದ ಸಂಸ್ಥೆ ವೈರಲ್

Spread the love

ಹೈದರಾಬಾದ್:‌ ಸಾಮಾನ್ಯವಾಗಿ ಈಗ ಎಲ್ಲರಿಗೂ ಕೆಲಸದ ಒತ್ತಡ ಹೆಚ್ಚಿರುತ್ತದೆ. ಈ ಒತ್ತಡ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಕೆಲವರು ಒತ್ತಡವನ್ನು ಕಡಿಮೆಗೊಳಿಸಲು ಟ್ರಿಪ್‌, ಸಾಕುಪ್ರಾಣಿಯ ಜೊತೆ ಸಮಯ ಕಳೆಯುವುದು ಮಾಡುತ್ತಾರೆ.
ಆದರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳ ಮನಸ್ಸನ್ನು ಖುಷಿಯಾಗಿಡಲು ಶ್ವಾನವೊಂದನ್ನು ನೇಮಿಸಿಕೊಂಡಿದೆಯಂತೆ. ಹೈದರಾಬಾದ್ ಮೂಲದ ರೊಬೊಟಿಕ್ಸ್ ಸಂಸ್ಥೆಯೊಂದು ಡೆನ್ವರ್ ಎಂಬ ಗೋಲ್ಡನ್ ರಿಟ್ರೈವರ್ ಅನ್ನು ತನ್ನ ಚೀಪ್ ಹ್ಯಾಪಿನೆಸ್ ಆಫೀಸರ್ (CHO) ಆಗಿ ನೇಮಿಸಿಕೊಂಡಿದೆಯಂತೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಕಂಪನಿಯ ಸಹ-ಸಂಸ್ಥಾಪಕ ರಾಹುಲ್ ಅರೆಪ್ಕಾ, ಡೆನ್ವರ್ ತನ್ನ ನ್ಯೂ ಟೈಟಲ್ ಬ್ಯಾಡ್ಜ್ ಅನ್ನು ಖುಷಿಯಿಂದ ಹಾಕಿಕೊಂಡ ಪೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದಾರೆ. ಇದು 11,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆಯಂತೆ. ನೆಟ್ಟಿಗರೊಬ್ಬರು “ಹೊಸ ಆಲೋಚನೆಗಳು, ಹೊಸ ಆಲೋಚನಾ ಪ್ರಕ್ರಿಯೆಗೆ ಶುಭವಾಗಲಿ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಉತ್ತಮ ನಿರ್ಧಾರ. ನಿಜವಾಗಿ ಒತ್ತಡವನ್ನು ನಿವಾರಿಸುವುದರಿಂದ ಉದ್ಯೋಗಿಗಳಿಗೆ ಸಹಾಯವಾಗುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ, ಹೆಚ್ಚುತ್ತಿರುವ ಸ್ಟಾರ್ಟ್‌ಅಪ್ ಮತ್ತು ಸಂಸ್ಥೆಗಳು ಈಗ ಸಾಕುಪ್ರಾಣಿಗಳನ್ನು ಕಂಪನಿಗಳಲ್ಲಿ ನೇಮಿಸಿಕೊಳ್ಳುವತ್ತ ಒಲವು ಹೊಂದಿದ್ದಾರಂತೆ.

ಕೆಲಸದ ಸ್ಥಳದಲ್ಲಿ ಸಾಕುಪ್ರಾಣಿಗಳು ಇರುವುದರಿಂದ ಕೆಲಸ ಮಾಡುವ ಆಸಕ್ತಿ ಹೆಚ್ಚುತ್ತದೆ.ಉದ್ಯೋಗಿಗಳ ಗೈರುಹಾಜರಿಯನ್ನು ಕಡಿಮೆ ಮಾಡುತ್ತದೆ ಮತ್ತು ತಂಡದ ಕೆಲಸವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಅಲ್ಲದೇ ಕೆಲಸದ ಸ್ಥಳದಲ್ಲಿ ಪ್ರಾಣಿಗಳು ಮನಸ್ಸಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಕೊಡುಗೆ ನೀಡಬಹುದು ಎಂದು ತಜ್ಞರು ಸೂಚಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *