Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಸಸುರಲ್ ಸಿಮರ್ ಕಾ’ ಖ್ಯಾತ ನಟಿ ದೀಪಿಕಾ ಕಾಕರ್‌ಗೆ ಕ್ಯಾನ್ಸರ್ ಶಾಕ್!

Spread the love

Dipika Kakar to return as Simar in Sasural Simar Ka 2, promo out now!

ಮುಂಬಯಿ: ಖ್ಯಾತ ಕಿರುತೆರೆ ತಾವು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದಾರೆ.

ಜನಪ್ರಿಯ ಕಿರುತೆರೆ ನಟಿ ದೀಪಿಕಾ ಕಾಕರ್ ತನಗೆ ಸೆಕೆಂಡ್‌ ಸ್ಟೇಜ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
‘ಸಸುರಲ್ ಸಿಮರ್ ಕಾ’ ಮೂಲಕ ಕಿರುತೆರೆ ಲೋಕದಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ದೀಪಿಕಾ ಅವರು ತನಗೆ ಕ್ಯಾನ್ಸರ್‌ ಇರುವ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.

“ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವಾರಗಳು ನಮಗೆ ತುಂಬಾ ಕಷ್ಟಕರವಾಗಿತ್ತು. ನನ್ನ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಯಕೃತ್ತಿನಲ್ಲಿ ಟೆನ್ನಿಸ್ ಚೆಂಡಿನ ಗಾತ್ರದ ಗೆಡ್ಡೆ ಇರುವುದು ಕಂಡು ಬಂದಿದೆ. ನಂತರ ಗೆಡ್ಡೆ ಎರಡನೇ ಹಂತದ ಕ್ಯಾನ್ಸರ್‌ ಎನ್ನುವುದು ಗೊತ್ತಾಗಿದೆ. ಇದು ಅತ್ಯಂತ ಕಷ್ಟಕರ ಸಮಯಗಳಲ್ಲಿ ಒಂದಾಗಿದೆ” ಎಂದು ದೀಪಿಕಾ ಬರೆದುಕೊಂಡಿದ್ದಾರೆ.

“ನಾನು ಇದನ್ನು ಎದುರಿಸಲು ಸಿದ್ಧಳಾಗಿದ್ದೇನೆ. ಇದರಿಂದ ಹೊರಬರಲು ದೃಢನಿಶ್ಚಯ ಹೊಂದಿದ್ದೇನೆ. ಇನ್ಶಾ ಅಲ್ಲಾಹ್! ನನ್ನ ಇಡೀ ಕುಟುಂಬ ನನ್ನ ಪಕ್ಕದಲ್ಲಿದೆ ಮತ್ತು ನಿಮ್ಮೆಲ್ಲರಿಂದ ಬರುತ್ತಿರುವ ಎಲ್ಲಾ ಪ್ರೀತಿ ಮತ್ತು ಪ್ರಾರ್ಥನೆಗಳೊಂದಿಗೆ, ನಾನು ಗುಣಮುಖವಾಗಿ ಬರುತ್ತೇನೆ” ಎಂದಿದ್ದಾರೆ.

ದೀಪಿಕಾ ಕಾಕರ್ ‘ಸಸುರಲ್ ಸಿಮರ್ ಕಾ’ ಸೀರಿಯಲ್‌ ಮೂಲಕ ಜನರಿಗೆ ಪರಿಚಯವಾದವರು. ʼಬಿಗ್‌ ಬಾಸ್‌ -12ʼ ವಿಜೇತರಾದ ಅವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವಿವಾಹವಾಗಿದ್ದಾರೆ ಈ ದಂಪತಿಗೆ 2023 ರಲ್ಲಿ ಮಗು ಜನಿಸಿದೆ.

ಅಭಿಮಾನಿಗಳು, ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ದೀಪಿಕಾ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *