Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇರಳ ಅಗ್ನಿಶಾಮಕ ದಳದ ಶಾಜು ನಾಯಿಗೆ ಭಾವುಕ ವಿದಾಯ: ಕೊನೆಯ ಬೀಳ್ಕೊಡುಗೆ ಕ್ಷಣಗಳು ವೈರಲ್

Spread the love

ಕೇರಳ : ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸಿದ ನಾಯಿಗೆ ಅಲ್ಲಿನ ಸಿಬ್ಬಂದಿಗಳು ಭಾವುಕ ವಿದಾಯ ಹೇಳಿದ ಘಟನೆ ಕೇರಳದಲ್ಲಿ ನಡೆದಿದೆ
ನಾಯಿಯನ್ನು ಮಿಲಿಟರಿ, ಪೊಲೀಸ್, ಅಗ್ನಿಶಾಮಕ ದಳಗಳು ತರಬೇತಿ ನೀಡಿ ತಮ್ಮ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಾರೆ.

ಸಿಬ್ಬಂದಿಗಳಂತೆ ನಾಯಿಯೂ ಕೂಡ ಇಲಾಖೆಯಲ್ಲಿ ಸೇವೆಗೆ ಸೇರುವಾಗ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಸಿಬ್ಬಂದಿಗಳ ರೀತಿಯಂತೆಯೇ ಇಂತಿಷ್ಟು ವರ್ಷಗಳ ಸೇವೆಯ ನಂತರ ಅವುಗಳು ಕೂಡ ನಿವೃತ್ತಿಯಾಗುತ್ತವೆ.

ಅಂತೆಯೇ ತರಬೇತಿ ಪಡೆದ ನಾಯಿಗಳು ತಮ್ಮ ಕೆಲಸದಲ್ಲಿ ನಿಷ್ಠೆ ಮತ್ತು ಧೈರ್ಯದಿಂದ ಇರುತ್ತವೆ. ಅದೇ ರೀತಿ ಕೇರಳದ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸಿದ ನಾಯಿ ಶಾಜುದ ನಿವೃತ್ತಿ ದಿನ ಅಲ್ಲಿನ ಸಿಬ್ಬಂದಿಗಳು ಭಾವುದ ವಿದಾಯ ಹೇಳಿದ ಹೃದಯಸ್ಪರ್ಶಿ ಘಟನೆ ನಡೆದಿದೆ. ಬೀಳ್ಗೊಡುಗೆ ದಿನ ಫೈರ್ ಫೈಟರ್ ಶಾಜು ನಾಯಿ ಸಿಬ್ಬಂದಿಗಳನ್ನು ಬಿಗಿದಪ್ಪಿ ಮುದ್ದಾಡಿತ್ತು, ಎಲ್ಲಾ ಸಿಬ್ಬಂದಿಗಳ ಕಣ್ಣಲ್ಲಿ ನೀರುತುಂಬಿ ಭಾವುಕರಾಗಿದ್ದಾರೆ.

ಗೌರವಯುತ ಬೀಳ್ಕೊಡುಗೆ
ಈ ವಿಡಿಯೋವನ್ನು ಸ್ಟ್ರೀಟ್ ಡಾಗ್ ಬಾಂಬೆ ಇನ್‌ಸ್ಟಾಗ್ರಾಂ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಕೇರಳ ಅಗ್ನಿಶಾಮಕ ದಳದಲ್ಲಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಶಾಜು ಎಂದರೆ ಅಲ್ಲಿನ ಸಿಬ್ಬಂದಿಗಳಿಗೆ ಅಚ್ಚುಮೆಚ್ಚು. ನಾಯಿ ಶಾಜುವನ್ನು ಅಗ್ನಿಶಾಮಕ ಸಿಬ್ಬಂದಿ ರಾಜು ನೋಡಿಕೊಳ್ಳುತ್ತಿದ್ದರು. ಕೇರಳ ಅಗ್ನಿಶಾಮಕ ದಳದ ಎಲ್ಲಾ ಕಾರ್ಯಾಚರಣೆಯಲ್ಲಿಯೂ ಈ ನಾಯಿಯೂ ಮುಂಚೂಣಿಯಲ್ಲಿ ನಿಲ್ಲುತ್ತಿತ್ತು. ಜೊತೆಗೆ ಅಲ್ಲಿನ ಸಿಬ್ಬಂದಿಗಳು ಕೂಡ ನಾಯಿಯನ್ನು ಮುದ್ದಾಗಿ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇಲ್ಲಿಯವರೆಗೂ ಜೊತೆಗಿದ್ದು ಇಲಾಖೆಗೆ ಸೇವೆ ಸಲ್ಲಿಸಿದ ಶಾಜು ನಾಯಿಗೆ ಸಿಬ್ಬಂದಿಗಳು ಗೌರವಪೂರ್ಣ ವಿದಾಯ ಹೇಳಿದ್ದಾರೆ.

ಇಲ್ಲಿದೆ ವಿಡಿಯೋ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಸಾಮಾಜಿಕ ಮಾಧ್ಯಮ ಬಳಕೆದಾರರ ಕಣ್ಣಲ್ಲಿ ನೀರು ತರಿಸಿದೆ. ಒಬ್ಬ ನೆಟ್ಟಿಗ ಈ ವಿಡಿಯೋಗೆ ‘ಎಂತಹ ಸುಂದರವಾದ ಹೃದಯಸ್ಪರ್ಶಿ ಬಂಧ. ಅವನು ತನ್ನ ನಾಲ್ಕು ಕಾಲಿನ ಗೆಳೆಯನನ್ನು ಭೇಟಿಯಾಗಲು ಹಿಂತಿರುಗುತ್ತಲೇ ಇರುತ್ತಾನೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ನನ್ನನ್ನು ಅಳುವಂತೆ ಮಾಡುತ್ತಿದೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *