ಆಪರೇಷನ್ ಸಿಂಧೂರ್ ಬಳಿಕ ಇದೀಗ ‘ಆಪರೇಷನ್ ಕಿಲ್ಲರ್’ – ಮೂವರು ಉಗ್ರರ ಹತ್ಯೆ

ನವದೆಹಲಿ:ಆಪರೇಷನ್ ಸಿಂಧೂರ್ ಯಶಸ್ಸಿನಿಂದಾಗಿ ಭಾರತೀಯ ಸೇನೆಯ ನೈತಿಕ ಸ್ಥೈರ್ಯ ಹೆಚ್ಚಾಗಿದೆ. ಸೇನೆಯು ಈಗ ಭಯೋತ್ಪಾದನೆ ವಿರುದ್ಧ ಹೊಸ ಕಾರ್ಯಾಚರಣೆಯನ್ನು ಆರಂಭಿಸಿದೆ ಅದಕ್ಕೆ ‘ಆಪರೇಷನ್ ಕಿಲ್ಲರ್’ಎಂದು ಹೆಸರಿಡಲಾಗಿದೆ. ಮಂಗಳವಾರ ಭಾರತೀಯ ಸೇನೆಯು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕೆಲ್ಲರ್ ದಡ್ಡ ಅರಣ್ಯ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರನ್ನು ಸದೆಬಡಿದಿದೆ. ಹೀಗಾಗಿ ಈ ಪ್ರದೇಶದ ಹೆಸರನ್ನೇ ನಾಮಕರಣ ಮಾಡಲಾಗಿದೆ. ಈ ಹಿಂದೆ ಶೋಕಲ್ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಬಗ್ಗೆ ರಾಷ್ಟ್ರೀಯ ರೈಫಲ್ಸ್ ಘಟಕವು ನಿಖರವಾದ ಗುಪ್ತಚರ ಮಾಹಿತಿಯನ್ನು ನೀಡಿತ್ತು. ಅದರ ನಂತರ ಸೇನೆಯು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಸಾಮಾಜಿಕ ಮಾಧ್ಯಮದಲ್ಲಿ ಸೇನೆಯು ಕಾರ್ಯಾಚರಣೆ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದೆ. ಪೋಸ್ಟ್ನಲ್ಲಿ ಆಪರೇಷನ್ ಕೆಲ್ಲರ್ ಮೇ 13 2025ರಂದು ರಾಷ್ಟ್ರೀಯ ರೈಫಲ್ಸ್ ಘಟಕದ ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಆಧರಿಸಿ, ಭಾರತೀಯ ಸೇನೆಯು ಶೋಪಿಯಾನ್ನ ಶೋಕಲ್ ಕೆಲ್ಲರ್ನಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಬರೆಯಲಾಗಿದೆ.
ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರು ಭಾರೀ ಗುಂಡು ಹಾರಿಸಿದರು, ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಯಿತು ಎಂದು ಸೇನೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಮೂವರು ಕಟ್ಟಾ ಭಯೋತ್ಪಾದಕರು ಸಾವನ್ನಪ್ಪಿದರು. ಮತ್ತು ಈ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ಹತ್ಯೆ ವರದಿಗಳ ಪ್ರಕಾರ, ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಆದಾಗ್ಯೂ, ನಂತರ ಭಯೋತ್ಪಾದಕರು ಶೋಪಿಯಾನ್ನಲ್ಲಿಯೂ ಗುಂಡು ಹಾರಿಸಲು ಪ್ರಾರಂಭಿಸಿದರು. ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಯು ಅಂತಿಮವಾಗಿ ಭಯೋತ್ಪಾದಕರನ್ನು ಕೊಂದಿತು.
ಈ ಸಮಯದಲ್ಲಿ ಶಾಹಿದ್ ಕುಟ್ಟೆ, ಅದ್ನಾನ್ ಶಫಿ ದಾರ್ ಮತ್ತು ಹರಿಸ್ ನಜೀರ್ ಎಂಬ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಇವರೆಲ್ಲರೂ ಪಾಕಿಸ್ತಾನ ಬೆಂಬಲಿತ ಲಷ್ಕರ್-ಎ-ತೈಬಾ (ಎಲ್ಇಟಿ) ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು.