Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಶ್ವ ಕ್ರಿಕೆಟ್‌ನ ‘ಕಿಂಗ್’ ಟೆಸ್ಟ್‌ಗೆ ವಿದಾಯ: ಕೊಹ್ಲಿಯ ನಿರ್ಧಾರಕ್ಕೆ 2 ಪ್ರಮುಖ ಕಾರಣ?

Spread the love

ಬೆಂಗಳೂರು:ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದಿದ್ದಾರೆ. ಅಧಿಕೃತವಾಗಿ ಪ್ರಕಟ ಕೂಡ ಮಾಡಿದ್ದು ಟೆಸ್ಟ್ ಕ್ರಿಕೆಟ್ ಅಂದ್ರೆ ನನ್ನ ಫೇವರಿಟ್ ಫಾರ್ಮಟ್ ಅಂತಿದ್ದ ಕೊಹ್ಲಿ ಮನಸ್ಸಿನಲ್ಲಿ ಇದಕ್ಕಿದ್ದಂತೆ ನಿವೃತ್ತಿಯ ಯೋಚನೆ ಬಂದಿದ್ದೇಕೆ?. ಕೊಹ್ಲಿಯ ಈ ನಿರ್ಧಾರಕ್ಕೆ ಆ 2 ವಿಷಯಗಳು ಕಾರಣವಾದವಾ?. ಫಾರ್ಮ್ ವಿಚಾರದಲ್ಲಿ ಬೇಸರಗೊಂಡು ಗುಡ್ಬೈ ಹೇಳಿದ್ರಾ, ಇಲ್ಲ ತಂಡದ ಭವಿಷ್ಯದ ಯೋಚನೆಗೆ ದೃಢ ನಿರ್ಧಾರ ಮಾಡಿದ್ರಾ?.

ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ನ ಅಗ್ರಜ. ಈತನ ರೌದ್ರವತಾರಕ್ಕೆ ಚಿಂದಿಯಾದ ದಾಖಲೆಗಳು ಲೆಕ್ಕಕ್ಕಿಲ್ಲ. ಈತನ ಬೆಂಕಿ ಬ್ಯಾಟಿಂಗ್ ಜ್ವಾಲೆಗೆ ಮರೆಯಾದ ಬೌಲರ್ಗಳು ಒಂದಿಬ್ಬರಲ್ಲ. ಟೆಸ್ಟ್ ಫಾರ್ಮೆಟ್ ಅಂತ ಬಂದ್ರೆ ಕೊಹ್ಲಿ ಹಸಿದ ಹುಲಿ. ಟಫೆಸ್ಟ್ ಫಾರ್ಮೆಟ್ನಲ್ಲಿ ಕ್ರೀಸ್ನಲ್ಲಿರುವಷ್ಟು ಹೊತ್ತು ಎದುರಾಳಿಗಳನ್ನ ಸಿಂಹಸ್ವಪ್ನವಾಗಿ ಕಾಡುವ ಬೇಟೆಗಾರ ವಿರಾಟ್. ಇಂತಾ ಕೊಹ್ಲಿ ಇದೀಗ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.2011 ಟು 2019.. ಇದು ವಿರಾಟ್ ಕೊಹ್ಲಿ ಕರಿಯರ್ನ ಉತ್ತುಂಗದ ದಿನಗಳು. ಸಾಮಾನ್ಯ ಕೊಹ್ಲಿ, ಕಿಂಗ್ ಕೊಹ್ಲಿಯಾಗಿ ವಿಶ್ವ ಕ್ರಿಕೆಟ್ನ ದೊರೆಯಾಗಿ ಆಳಿದ ದಿನಗಳು. ಈ ಅವಧಿಯಲ್ಲಿ ವಿರಾಟ್ ಮುಟ್ಟಿದೆಲ್ಲ ಚಿನ್ನವಾಗಿತ್ತು. ಎದುರಾಳಿ ಪಾಲಿಗೆ ಸಿಂಹಸ್ವಪ್ನಾರಾಗಿದ್ದ ವಿರಾಟ್, ಟೆಸ್ಟ್ ಕ್ರಿಕೆಟ್ನ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಆಗಿ ಮೆರೆದಾಡಿದ್ದರು. ಟನ್ ಗಟ್ಟಲೇ ರನ್ ಕೊಳ್ಳೆ ಹೊಡೆದು ರೆಡ್ ಬಾಲ್ ಕ್ರಿಕೆಟ್ನ ಚಕ್ರಾಧಿಪತಿಯಾಗಿ ಕ್ರಿಕೆಟ್ ಲೋಕವನ್ನು ಆಳಿದ್ದರು. ಈ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್ನ ನಂ.1 ಬ್ಯಾಟರ್ ಆಗಿ ಅಧಿಪತ್ಯ ಸಾಧಿಸಿದ್ದ ವಿರಾಟ್ಗೆ ವಿರಾಟ್ ಮಾತ್ರವೇ ಸರಿಸಾಟಿಯಾಗಿದ್ದರು.2011ರಿಂದ 2019ರ ಅವಧಿಯಲ್ಲಿ ಆಡಿದ್ದ 141 ಇನ್ನಿಂಗ್ಸ್ಗಳಿಂದ 7,202 ರನ್ ಕೊಳ್ಳೆ ಹೊಡೆದಿದ್ದ ವಿರಾಟ್, 54.97ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಕಲೆಹಾಕಿದ್ದರು. ಬರೋಬ್ಬರಿ 27 ಶತಕ ಸಿಡಿಸಿದ್ದರು. ಅಂದ್ರೆ, ಪ್ರತಿ 5.2 ಇನ್ನಿಂಗ್ಸ್ಗೊಮ್ಮೆ ಶತಕ ವಿರಾಟ್ ಬ್ಯಾಟ್ನಿಂದ ಬರುತ್ತಿತ್ತು. 2019 ದಾಟಿದ್ದೇ ದಾಟಿದ್ದು. ಅದೇನಾಯ್ತೋ ಗೊತ್ತಿಲ್ಲ. ಆ ಹಳೇ ಕೊಹ್ಲಿ ಮಾಯವಾಗಿದ್ದಾರೆ. ಇನ್ಕನ್ಸಿಸ್ಟೆನ್ಸಿ ಕೊಹ್ಲಿಯನ್ನ ಕಾಡ್ತಿದೆ. ಇದೇ ವಿಚಾರವಾಗೇ ಆಸ್ಟ್ರೇಲಿಯನ್ ಮಾಜಿ ಕ್ರಿಕೆಟರ್ ಮಾಕ್ ಟೇಲರ್, ಹೇಳಿಕೆಯೊಂದನ್ನು ನೀಡಿದ್ದಾರೆ.

ವಿರಾಟ್ಗೆ ಈಗ 36 ವರ್ಷ. ನಿಜವಾಗಿಯೂ ಮೂರ್ನಾಲ್ಕು ವರ್ಷದಿಂದ ಉತ್ತಮವಾಗಿಲ್ಲ. ಬಹುಶಃ ಐದು ವರ್ಷದಿಂದ 3 ಶತಕ ಸಿಡಿಸಿರಬೇಕು. ವಿರಾಟ್ ಫಾರ್ಮ್ನಲ್ಲಿ ಇಲ್ಲ. ಹಿಂದಿನ 10 ವರ್ಷ ವಿರಾಟ್, ಈ ಯುಗದ ದಿ ಬೆಸ್ಟ್ ಟೆಸ್ಟ್ ಬ್ಯಾಟರ್ ಅನ್ನೋದ್ರಲ್ಲಿ ಸಂಶಯವಿಲ್ಲ.

ಮಾಕ್ ಟೇಲರ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ನ ಮಾತು ಅಕ್ಷರಶಃ ನಿಜ. ಕಳೆದ ಬಾಂಗ್ಲಾದೇಶ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಮಾತ್ರವಲ್ಲ. 2019ರ ಬಳಿಕ ಕೊಹ್ಲಿ ಆಟದ ವೈಖರಿಯೇ ಬದಲಾಗಿದೆ. ಕೊಹ್ಲಿ ದಿಢೀರ್ ನಿವೃತ್ತಿ ನಿರ್ಧಾರಕ್ಕೂ ಇದೇ ಕಾರಣ ಎನ್ನಲಾಗ್ತಿದೆ.2020ರ ಆರಂಭದಿಂದ ಕೊಹ್ಲಿಯನ್ನ ಇನ್ಕನ್ಸಿಸ್ಟೆನ್ಸಿ ಕಾಡಿದೆ. ಹಿಂದೆ ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ, ಎದುರಾಳಿಗಳ ಮೇಲೆ ವಿರಾಟ ರೂಪ ಪ್ರದರ್ಶಿಸುತ್ತಿದ್ದ ವಿರಾಟ್, ವೀರಾವೇಶ ತಣ್ಣಗಾಗಿದೆ. ಫಾರ್ಮ್ ಪಾತಾಳಕ್ಕೆ ಕುಸಿದಿದೆ. ಈ ಹಿಂದೆ ಐದಾರು ಇನ್ನಿಂಗ್ಸ್ಗೆ ಶತಕ ಸಿಡಿಸ್ತಿದ್ದ ವಿರಾಟ್, ಈಗ 2 ವರ್ಷಕ್ಕೊಂದು ಶತಕ ಸಿಡಿಸುವ ಸ್ಥಿತಿ ತಲುಪಿದ್ದಾರೆ.2020ರಿಂದ ಇದುವರೆಗೆ 69 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್, 2028 ರನ್ ಗಳಿಸಿದ್ದಾರೆ. ಕೇವಲ 30.72ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಕಲೆಹಾಕಿರುವ ಕೊಹ್ಲಿ, 69 ಇನ್ನಿಂಗ್ಸ್ಗಳಿಂದ ಮೂರಂಕಿ ಗಡಿ ತಲುಪಿದ್ದು ಜಸ್ಟ್ ಮೂರೇ 3 ಬಾರಿ ಮಾತ್ರ.

ಅಂದ್ರೆ, ಕಳೆದ 6 ವರ್ಷಗಳಿಂದ ವಿರಾಟ್, 23 ಇನ್ನಿಂಗ್ಸ್ಗಳಿಗೊಮ್ಮೆ ಶತಕ ಸಿಡಿಸ್ತಿದ್ದಾರೆ. ಇದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ವೈಫಲ್ಯವೇ ವಿರಾಟ್ ಕೊಹ್ಲಿ, ನಿವೃತ್ತಿಗೆ ಕಾರಣ ಎನ್ನಲಾಗಿದೆ. ಭವಿಷ್ಯದ ಟೀಮ್ ಇಂಡಿಯಾ ಬಲಿಷ್ಠವಾಗಿರಲು ಯುವಕರಿಗೆ ಅವಕಾಶ ನೀಡೋ ನಿರ್ಧಾರ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *