Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಲ್ಲಿ ಜಿಎಸ್‌ಟಿ ದಾಖಲೆ: ಏಪ್ರಿಲ್‌ನಲ್ಲಿ ಇತಿಹಾಸದಲ್ಲೇ ಅತಿಹೆಚ್ಚು 2.37 ಲಕ್ಷ ಕೋಟಿ ಸಂಗ್ರಹ

Spread the love

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 2025ರ ಏಪ್ರಿಲ್ ತಿಂಗಳಲ್ಲಿ 2.37 ಲಕ್ಷ ಕೋಟಿ ರೂನಷ್ಟಾಗಿರುವುದು ತಿಳಿದುಬಂದಿದೆ. ಇಲ್ಲಿಯವರೆಗೆ ಯಾವುದೇ ತಿಂಗಳಲ್ಲಿ ಕಂಡ ಅತಿಹೆಚ್ಚು ತೆರಿಗೆ ಸಂಗ್ರಹ ಇದಾಗಿದೆ. ಆ ಮಟ್ಟಿಗೆ ಇದು ಹೊಸ ದಾಖಲೆ. ಹಿಂದಿನ ತಿಂಗಳಲ್ಲಿ (2025ರ ಮಾರ್ಚ್) 1.96 ಲಕ್ಷ ರೂ ಜಿಎಸ್​​ಟಿ ಸಂಗ್ರಹವಾಗಿತ್ತು. ಹಿಂದಿನ ವರ್ಷದ ಏಪ್ರಿಲ್​​​ನಲ್ಲಿ (2024ರದ್ದು) 2.10 ಲಕ್ಷ ರೂ ಜಿಎಸ್​​ಟಿ ಸಿಕ್ಕಿತ್ತು. ಈ ಬಾರಿ ಎಲ್ಲಾ ದಾಖಲೆ ಧೂಳೀಪಟವಾಗಿದೆ. ರೀಫಂಡ್ ಕಳೆದು 2.09 ಲಕ್ಷ ಕೋಟಿ ರೂ ನಿವ್ವಳ ಜಿಎಸ್​​ಟಿ ಹರಿದುಬಂದಿದೆ.

ಕಳೆದ ಆರೇಳು ತಿಂಗಳಿಂದ ಜಿಎಸ್​​ಟಿ ಸಂಗ್ರಹ ಗಣನೀಯವಾಗಿ ಏರಿಕೆ ಆಗುತ್ತಾ ಬಂದಿದೆ. ಅಕ್ಟೋಬರ್​​​ನಿಂದ ಮಾರ್ಚ್​​ವರೆಗಿನ ಆರು ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ಪ್ರತೀ ತಿಂಗಳೂ 1.73 ಲಕ್ಷ ಕೋಟಿ ರೂನಿಂದ 1.96 ಲಕ್ಷ ಕೋಟಿ ರೂವರೆಗೆ ಆಗಿರುವುದು ಅಂಕಿ ಅಂಶದಿಂದ ಗೊತ್ತಾಗುತ್ತದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯ ತಿಂಗಳು ಹಾಗೂ ಆರಂಭಿಕ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ಹೆಚ್ಚಿರುತ್ತದೆ.

2025 ಏಪ್ರಿಲ್​​ನಲ್ಲಿ ಅತಿಹೆಚ್ಚು ಜಿಎಸ್​​​ಟಿ ಸಂಗ್ರಹವಾದ ರಾಜ್ಯಗಳ ಪಟ್ಟಿ

ಒಟ್ಟು ಜಿಎಸ್​​ಟಿ ಸಂಗ್ರಹ: 2.37 ಲಕ್ಷ ಕೋಟಿ ರೂ

  1. ಮಹಾರಾಷ್ಟ್ರ: 41,645 ಕೋಟಿ ರೂ
  2. ಕರ್ನಾಟಕ: 17,815 ಕೋಟಿ ರೂ
  3. ಗುಜರಾತ್: 14,970 ಕೋಟಿ ರೂ
  4. ಹರ್ಯಾಣ: 14,057 ಕೋಟಿ ರೂ
  5. ತಮಿಳುನಾಡು: 13,831 ಕೋಟಿ ರೂ
  6. ಉತ್ತರಪ್ರದೇಶ: 13,600 ಕೋಟಿ ರೂ
  7. ದೆಹಲಿ: 8,260 ಕೋಟಿ ರೂ
  8. ಪಶ್ಚಿಮ ಬಂಗಾಳ: 8,188 ಕೋಟಿ ರೂ
  9. ತೆಲಂಗಾಣ: 6,983 ಕೋಟಿ ರೂ
  10. ರಾಜಸ್ಥಾನ್: 6,228 ಕೋಟಿ ರೂ
  11. ಒಡಿಶಾ: 6,174 ಕೋಟಿ ರೂ
  12. ಮಧ್ಯಪ್ರದೇಶ: 5,302 ಕೋಟಿ ರೂ
  13. ಆಂಧ್ರಪ್ರದೇಶ: 4,686 ಕೋಟಿ ರೂ
  14. ಜಾರ್ಖಂಡ್: 4,167 ಕೋಟಿ ರೂ
  15. ಛತ್ತೀಸ್​​​ಗಡ: 4,135 ಕೋಟಿ ರೂ
  16. ಕೇರಳ: 3,436 ಕೋಟಿ ರೂ
  17. ಪಂಜಾಬ್: 3,104 ಕೋಟಿ ರೂ

ಏಪ್ರಿಲ್ ತಿಂಗಳಲ್ಲಿ ಒಟ್ಟು ಜಿಎಸ್​​ಟಿ ಸಂಗ್ರಹ 2.37 ಲಕ್ಷ ಕೋಟಿ ರೂ ಇದ್ದರೂ, ರೀಫಂಡ್​​​ಗಳನ್ನು ಕಳೆದು ಉಳಿಯುವ ನಿವ್ವಳ ಜಿಎಸ್​​ಟಿ ಸಂಗ್ರಹ 2.09 ಲಕ್ಷ ಕೋಟಿ ರೂ.ಮೇ ತಿಂಗಳಲ್ಲಿ ಕಡಿಮೆ ಜಿಎಸ್​​ಟಿ ಸಂಗ್ರಹ ಸಾಧ್ಯತೆ

ಏಪ್ರಿಲ್​​ನಲ್ಲಿ ದಾಖಲೆಯ ಜಿಎಸ್​​ಟಿ ಸಂಗ್ರಹ ಆಗಿರುವುದು ಭಾರತದ ಆರ್ಥಿಕತೆಯ ಆರೋಗ್ಯದ ಸಂಕೇತವಾಗಿದೆ ಎಂಬುದು ಇವೈ ಇಂಡಿಯಾದ ಟ್ಯಾಕ್ಸ್ ಪಾರ್ಟ್ನರ್ ಸೌರಭ್ ಅಗರ್ವಾಲ್ ಹೇಳುತ್ತಾರೆ. ಅವರ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕ ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ಮೇ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ತುಸು ತಗ್ಗಬಹುದು. ಒಟ್ಟಾರೆ ಭಾರತದ ಆರ್ಥಿಕತೆ ಆಶಾಭಾವನೆ ಮೂಡಿಸುತ್ತದೆ ಎನ್ನುತ್ತಾರೆ.


Spread the love
Share:

administrator

Leave a Reply

Your email address will not be published. Required fields are marked *