Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಿಳಾ ಶೂಟರ್ ಅಟ್ಟಹಾಸಕ್ಕೆ 10 ಮಂದಿ ಬಲಿ, 25 ಜನರಿಗೆ ಗಾಯ!

Spread the love

ಕೆನಡಾದ ಬ್ರಿಟಿಷ್ ಕೊಲಂಬಿಯಾದ ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಮಹಿಳೆಯೊಬ್ಬಳು ನಡೆಸಿದ ಗುಂಡಿನ ದಾಳಿಯಲ್ಲಿ ಆಕೆ ಸೇರಿದಂತೆ ಹತ್ತು ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕೊಲಂಬಿಯಾದ ಶಾಲೆಯಲ್ಲಿ ರಕ್ತಪಾತ

ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಪ್ರಕಾರ ಗುಂಡಿನ ದಾಳಿ ಆರೋಪಿ ಮಹಿಳೆ ಆಗಿದ್ದು, ಆಕೆ ಕಂದು ಬಣ್ಣದ ಕೂದಲನ್ನು ಹೊಂದಿದ್ದಳು. ಘಟನೆಯ ಬಳಿಕ ಆಕೆಯೂ ಗುಂಡು ಹಾರಿಸಿಕೊಂಡಿದ್ದು, ಶವವಾಗಿ ಪತ್ತೆಯಾಗಿದ್ದಾಳೆ.

ಗುಂಡಿನ ದಾಳಿಗೆ 10 ಜನ ಬಲಿ

ಘಟನೆ ನಡೆದ ಶಾಲೆಯಲ್ಲಿ ಆರು ಜನರು ಮೃತಪಟ್ಟರೆ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಶಾಲೆಗೆ ಸೇರಿದ ವಸತಿ ನಿವಾಸದಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ ಹಾಗೆಯೇ ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಅಲ್ಲಿನ ಸ್ಥಳೀಯ ಸಮಯ ಮಂಗಳವಾರ ಮಧ್ಯಾಹ್ನ 1.20 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ನಂತರ ಟಂಬ್ಲರ್ ರಿಡ್ಜ್ ಪೊಲೀಸರು ಮಧ್ಯಾಹ್ನ 2 ಗಂಟೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

175 ಜನರಿದ್ದ ಶಾಲೆ

ಸರ್ಕಾರಿ ವೆಬ್‌ಸೈಟ್‌ನ ಪ್ರಕಾರ, ಘಟನೆ ನಡೆದ ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ 7 ರಿಂದ 12 ನೇ ತರಗತಿಯವರೆಗೆ ಒಟ್ಟು 175 ವಿದ್ಯಾರ್ಥಿಗಳು ಇದ್ದರು. ಪೊಲೀಸರ ಪ್ರಕಾರ, 10 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಯಾರಾದರೂ ವಿದ್ಯಾರ್ಥಿಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುನ್ನೆಚ್ಚರಿಕೆಯಾಗಿ ಶಾಲೆಯನ್ನು ಮುಚ್ಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯ ಪೊಲೀಸ್ ಮತ್ತು ಆಂಬ್ಯುಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯ ಶಾಸಕ ಲ್ಯಾರಿ ನ್ಯೂಫೀಲ್ಡ್ ಹೇಳಿದ್ದಾರೆ. ತಮ್ಮ ಕುಟುಂಬ ಸದಸ್ಯರನ್ನು ಹುಡುಕುತ್ತಾ ಬಂದ ಜನರು ಮನೆಗೆ ಮರಳಬೇಕು ಮತ್ತು ಸುರಕ್ಷಿತವಾಗಿ ಅಲ್ಲಿಯೇ ಇರಬೇಕೆಂದು ಅವರು ಮನವಿ ಮಾಡಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು

ಶಂಕಿತ ಮಹಿಳೆ ಕಂದು ಕೂದಲನ್ನು ಹೊಂದಿದ್ದಾಳೆ. ಹೀಗಾಗಿ ಆ ಸ್ಥಳದಲ್ಲಿ ನಿವಾಸಿಗಳು ಇದ್ದಲ್ಲಿಯೇ ಆಶ್ರಯ ಪಡೆಯಲು, ಬಾಗಿಲು ಮುಚ್ಚಲು ಮತ್ತು ಹೊರಗೆ ಹೋಗದೇ ಇರುವಂತೆ ಕೇಳಿಕೊಳ್ಳಲಾಯಿತು. ಹೀಗಾಗಿ ಸುಮಾರು ಐದು ಗಂಟೆಗಳ ನಂತರ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಲು ಅವಕಾಶ ನೀಡಲಾಯಿತು. ಈ ಪ್ರಕರಣದಲ್ಲಿ ಎರಡನೇ ಶಂಕಿತ ವ್ಯಕ್ತಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಮಾರು 2,400 ಜನರಿರುವ ಟಂಬ್ಲರ್ ರಿಡ್ಜ್ ಪಟ್ಟಣಕ್ಕೆ ನೆರೆಯ ಪ್ರದೇಶಗಳಿಂದ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಘಟನೆ ನಡೆದ ಶಾಲೆಯನ್ನು ವಾರದ ಮಟ್ಟಿಗೆ ಮುಚ್ಚಲಾಗಿದೆ.

ಘಟನೆಯ ಬಳಿಕ ಶಾಲೆಯಲ್ಲಿದ್ದವರ ಸ್ಥಳಾಂತರ

ಘಟನೆಯ ಬಳಿ ಆರ್‌ಸಿಎಂಪಿಯ ಉತ್ತರ ಜಿಲ್ಲಾ ಮುಖ್ಯ ಸೂಪರಿಂಟೆಂಡೆಂಟ್ ಕೆನ್ ಫ್ಲಾಯ್ಡ್ ಮಾತನಾಡಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಜನರನ್ನು ಶಾಲೆಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಗುಂಡಿನ ದಾಳಿಗೆ ಕಾರಣವೇನು ಎಂಬುದನ್ನು ಪೊಲೀಸರು ಇನ್ನೂ ತನಿಖೆ ಮಾಡುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು, ನಮ್ಮ ಶಿಕ್ಷಕರು, ನಮ್ಮ ಟಂಬ್ಲರ್ ರಿಡ್ಜ್ ಸಮುದಾಯಕ್ಕೆ ನಮಗೆ ಬಹು ಹಂತದ ಬೆಂಬಲ ಬರುತ್ತಿದೆ ಎಂದು ಅವರು ಹೇಳಿದರು.

ಜೀವ ಉಳಿಸಿಕೊಳ್ಳಲು ಬೆಂಚ್‌ಗಳಡಿ ಅಡಗಿದ ಮಕ್ಕಳು

ಘಟನೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ 8ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ, ಘಟನೆ ಸಮಯದಲ್ಲಿ ಜೀವ ಉಳಿಸಿಕೊಳ್ಳಲು ತರಗತಿಯ ಬೆಂಚ್‌ಗಳಡಿ ಅಡಗಬೇಕಾಯಿತು ಎಂದು ಹೇಳಿದ್ದಾನೆ. ಈ ಘಟನೆಯಿಂದ ತೀವ್ರ ಆಘಾತವಾಗಿದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ ಅವರು ಘಟನೆಯಿಂದ ಸರಿಪಡಿಸಲಾಗದಷ್ಟು ಕೆಲವರ ಜೀವನ ದುರಂತಮಯವಾಗಿದೆ. ಅವರ ದುಃಖದ ಜೊತೆ ನಾವಿದ್ದೇವೆ. ಈ ಸಮಯದಲ್ಲಿ ಸಹವರ್ತಿ ನಾಗರಿಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಮೊದಲ ಪ್ರತಿಸ್ಪಂದಕರ ಧೈರ್ಯ ಮತ್ತು ನಿಸ್ವಾರ್ಥತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಬರೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *