Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲೇಡಿ ಡಾನ್ ಆಗಿ ಹೊರಹೊಮ್ಮಿದ ಝಿಖ್ರಾ: 17ರ ಹರೆಯದ ಹುಡುಗನ ಹತ್ಯೆಗೆ ಸೇಡು ಕಾರಣವಾಯಿತೇ ?

Spread the love

ನವದೆಹಲಿ:ಲೇಡಿ ಡಾನ್ ಝಿಖ್ರಾ ಮೇಲೆ ಪೊಲೀಸರ ರೆಡಾರ್ ಬಿದ್ದಿದೆ. ದೆಹಲಿಯ ಸೀಲಾಂಪುರದಲ್ಲಿ ಕಳೆದ ವಾರದ ನಡೆದ 17ರ ಹರೆಯದ ಬಾಲಕನ ಹತ್ಯೆಯಲ್ಲಿ ಲೇಡಿ ಡಾನ್ ಝಿಖ್ರಾ ಶಂಕಿತ ಆರೋಪಿಯಾಗಿದ್ದಾಳೆ. ಈಕೆ ಸೋಶಿಯಲ್ ಮೀಡಿಯಾದಲ್ಲಿ ತಾನು ಲೇಡಿ ಡಾನ್ ಎಂದು ಬರೆದುಕೊಂಡಿದ್ದಾಳೆ.

ಇಷ್ಟೇ ಅಲ್ಲ ಈಕೆಯ ಎಲ್ಲಾ ಪೋಸ್ಟ್‌ಗಳು ಅದೇ ರೀತಿ ಇದೆ. ಪಿಸ್ತೂಲ್ ಹಿಡಿದು ಡ್ಯಾನ್ಸ್ ಮಾಡುತ್ತಿರುವ ಸೇರಿದಂತೆ ಹಲವು ಫೋಟೋಗಳನ್ನು ಈಕೆ ಪೋಸ್ಟ್ ಮಾಡಿದ್ದಾಳೆ. ಇದೀಗ ಈಕೆಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.

ಸೀಲಂಪುರದ 17 ವರ್ಷದ ಹುಡುಗ ಕುನಾಲ್ ಕಳೆದ ವಾರ ಹಾಲು ತರಲು ಶಾಪ್‌ಗೆ ತೆರಳಿದ್ದ. ಮನೆಯಿಂದ ಕೆಲ ದೂರದಲ್ಲಿದ್ದ ಅಂಗಡಿಗೆ ಹಾಲು ತರಲು ಹೋದ ಕುನಾಲ್ ಮರಳಿ ಬರಲೇ ಇಲ್ಲ. ಕುನಾರ್ ಹತ್ಯೆಯಾಗಿದ್ದ. ಈ ಹತ್ಯೆಯ ಹಿಂದೆ ಝಿಖ್ರಾ ಹಾಗೂ ಆಕೆಯ ಗ್ಯಾಂಗ್ ಪ್ರವರ್ತಿಸಿದೆ ಅನ್ನೋದು ಪೊಲೀಸರ ಬಲವಾದ ಅನುಮಾನ. ಈ ಕೊಲೆಗೂ ಕೆಲ ದಿನಗಳ ಮೊದಲು ಇದೇ ಝಿಖ್ರಾ ಜೈಲಿನಿಂದ ಬಿಡುಗೆಯಾಗಿದ್ದಳು.

ಯಾರು ಈ ಲೇಡಿ ಡಾನ್ ಝಿಖ್ರಾ?
ಲೇಡಿ ಡಾನ್ ಝಿಖ್ರಾ ಜೈಲು ಸೇರಿಕೊಂಡಿರುವ ಗ್ಯಾಂಗ್‌ಸ್ಟರ್ ಹಶೀಮ್ ಬಾಬಾ ಆಪ್ತೆಯಾಗಿದ್ದಾಳೆ. ಹಶೀಮ್ ಬಾಬಾ ಪತ್ನಿ ಝೋಯಾಗೆ ಬೌನ್ಸರ್ ಆಗೆ ಕೆಲಸ ಮಾಡುತ್ತಿದ್ದ ಈಕೆ ಸದಾ ಕಾಲ ಪಿಸ್ತೂಲ್ ಹಿಡಿದುಕೊಂಡೇ ತಿರುಗಾಡುತ್ತಾಳೆ. ಗ್ಯಾಂಗ್‌ಸ್ಟರ್ ಹಶೀಮ್ ಬಾಬಾ ಜೈಲಿನಲ್ಲಿದ್ದರೆ, ಇತ್ತ ಆತನ ಪತ್ನಿ ಝೋಯಾ ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾಳೆ. ಇಬ್ಬರು ಗ್ಯಾಂಗ್‌ಸ್ಟರ್ ಜೈಲು ಸೇರಿದ ಬಳಿಕ ಇದೇ ಝಿಖ್ರಾ ತಾನು ಲೇಡಿ ಡಾನ್ ಎಂದು ಘೋಷಿಸಿಕೊಂಡು ಗ್ಯಾಂಗ್ ಕಟ್ಟಿದ್ದಾಳೆ.

ಸಹೋದರನ ಮೇಲಿನ ದಾಳಿಗೆ ರಿವೇಂಜ್
ದೆಹಲಿಯ 17ರ ಹುಡುಗನ ಹತ್ಯೆ ಪ್ರಕರಣದ ಶಂಕಿತ ಆರೋಪಿ ಝಿಖ್ರಾ ಇತ್ತೀಚೆಗೆ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜೈಲು ಸೇರಿದ್ದಳು. ಇದಕ್ಕೂ ಮುನ್ನ ಝಿಖ್ರಾ ಸೋಹದರನ ಮೇಲೆ ದಾಳಿ ನಡೆದಿತ್ತು. ಈ ದಾಳಿಗೆ ಸೇಡು ತೀರಿಸಲು ಹುಡುಗ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಝಿಖ್ರಾ ಸಹೋದರನ ಮೇಲೆ ದಾಳಿದ ಆರೋಪಿ ಕುರಿತು ಸುಳಿವು ನೀಡಲು ಝಿಖ್ರಾ ಕುನಾಲ್‌ಗೆ ಬೆದರಿಸಿದ್ದಾಳೆ. ಆದರೆ ಕುನಾಲ್ ಮಾಹಿತಿ ನೀಡದ ಕಾರಣ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *