ಬೆಂಗಳೂರಿನ ಪಿ.ಜಿ.ಗೆ ನುಗ್ಗಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ: ಕಳ್ಳತನದ ಆರೋಪಿ ಬಂಧನ

ಬೆಂಗಳೂರು: ನಗರದ ಸುದ್ದಗುಂಟೆಪಾಳ್ಯದ ಲೇಡಿಸ್ ಪಿ.ಜಿಗೆ ನುಗ್ಗಿ ಯುವತಿ ಲೈಂಗಿಕ ಕಿರುಕಳ ನೀಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ನಂತರ ಸಿಸಿಟಿವಿ ಆದರಿಸಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೆ. ನರೇಶ್ ಪಟ್ಯಂ ಬಂಧಿತ ಆರೋಪಿಯಾಗಿದ್ದಾನೆ. ಈತ ಆಂಧ್ರದ ಮದನ ಪಲ್ಲಿ ಮೂಲದವನೆಂದು ತಿಳಿದುಬಂದಿದೆ. ಈತ ಬೈಕ್ ಟ್ಯಾಕ್ಸಿ ಹಾಗೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ. ಆದರೆ ಕಳ್ಳತನ ಮಾಡುವುದು ಕೂಡ ಆತನ ಕಸುಬಾಗಿತ್ತು. ಹೀಗಾಗಿ ಕಳ್ಳತನ ಮಾಡಲು ಪಿಜಿಗೆ ನುಗ್ಗಿದ್ದ ವೇಳೆ ಯುವತಿಯ ದೇಹವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತನಿಖೆ ವೇಳೆ ಗೊತ್ತಾಗಿದೆ.ಆಂಧ್ರ ಪ್ರದೇಶ ಮೂಲದ ಕೆ. ನರೇಶ್ ಪಟ್ಯಂ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾನೆ.ಡೆಲಿವರಿ ಬಾಯ್ ಮಾತ್ರವಲ್ಲದೇ ಈತ ಕಳ್ಳತನ ಮಾಡುವುದು ಕಾಯಕವಾಗಿ ಮಾಡಿಕೊಂಡಿದ್ದಾನೆ. ಈಗಾಗಲೇ ಆರೋಪಿ ವಿರುದ್ಧ ಮದನಪಲ್ಲಿಯಲ್ಲಿ ಕೂಡ ಎರಡು ಮೊಬೈಲ್ ಕಳ್ಳತನ ಪ್ರಕರಣಗಳಿವೆ. ಸದ್ಯ ಪಿಜಿಗೆ ನುಗ್ಗಿ ಕಳ್ಳತನ ಮಾಡಿ ಯುವತಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ನರೇಶ್ ನನ್ನು ಸಿಸಿಟಿವಿ ಆಧಾರದ ಮೇಲೆ ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಪಿಜಿಯಲ್ಲಿ ವಾಸಿಸುತ್ತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಳಿಕ ಆರೋಪಿ ಹಣ ಕದ್ದು ಪರಾರಿಯಾಗಿದ್ದ. ಘಟನೆ ದುರ್ಗಾ ಲೇಡೀಸ್ ಪಿಜಿಯಲ್ಲಿ ಆಗಸ್ಟ್ 29ರಂದು ಬೆಳಗ್ಗೆ ಸುಮಾರು 3 ಗಂಟೆ ವೇಳೆಗೆ ನಡೆದಿತ್ತು. ಪಿಜಿಯಲ್ಲಿ ಮಲಗಿದ್ದ ಯುವತಿಯ ರೂಮಿಗೆ ಆರೋಪಿ ನುಗ್ಗಿದ್ದ. ಆದ್ರೆ, ಯುವತಿ ಮೊದಲು ತನ್ನ ರೂಮ್‌ಮೇಟ್ ಎಂದು ಭಾವಿಸಿ ಸುಮ್ಮನೆ ಮಲಗಿದ್ದಳು. ಬಳಿಕ ಪಿಜಿಯಲ್ಲಿನ ಎಲ್ಲಾ ರೂಮ್‌ಗಳ ಬಾಗಿಲುಗಳನ್ನು ಲಾಕ್ ಮಾಡಿದ ನಂತರ ನೇರವಾಗಿ ಯುವತಿಯ ಬಳಿ ಹೋಗಿ ಅವಳ ಮೈಮೇಲೆ ಕೈ ಹಾಕಿದ್ದಾನೆ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದಾಗ, ಆರೋಪಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಯುವತಿ ಕೂಗಾಡಿದ್ದಾಳೆ. ಆಗ ಆರೋಪಿ ಯುವತಿಯನ್ನು ಬಿಟ್ಟು, ರೂಮಿನಲ್ಲಿ ಇಟ್ಟುಕೊಂಡಿದ್ದ 2,500 ನಗದು ಕದ್ದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ.
ಇನ್ನು ಯುವತಿಯ ಕೂಗಾಟದಿಂದ ನೆರೆಯವರು ಎಚ್ಚರಗೊಂಡು ಓಡೋಡಿ ಬಂದಿದ್ದಾರೆ. ನಂತರ ಈ ಘಟನೆ ಸಂಬಂಧ ಯುವತಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು,ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚುವ ಯಶಸ್ವಿಯಾಗಿದ್ದಾರೆ.
