ಬೆಂಗಳೂರು ಕೆಲಸಕ್ಕೆ ಹೊರಟ ಯುವಕ ನಾಪತ್ತೆ: ಪತ್ನಿಗೆ ಕೊನೆ ಕರೆ ಬಳಿಕ ಸಂಪರ್ಕ ಕಡಿತ

ಮಂಗಳೂರು : ಬೆಂಗಳೂರಿನಲ್ಲಿ ಕೆಲಸ ಇದೆ ಎಂದು ಹೇಳಿ ಮನೆಯಿಂದ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಟಿದ್ದ ಯುವಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾಗಿದ್ದ ಯುವಕ ಮೊಹಮ್ಮದ್ ನಿಯಾಜ್ (33), ಯುವಕ ದೇರಳಕಟ್ಟೆಯ ಎಸ್ ಎನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಗಸ್ಟ್ 2 ತನ್ನ ತಾಯಿ ಹಾಜಿರರವರಲ್ಲಿ ಬೆಂಗಳೂರಿನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆಂದು ಹೇಳಿ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದು, ಅದೇ ದಿನ ಮಧ್ಯಾಹ್ನ ಪತ್ನಿಗೆ ಕರೆ ಮಾಡಿ ಮಾಡಿ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ತಂಗಿ ಮಗುವನ್ನು ನೋಡಲು ಹೋಗೋಣ ನೀನು ರೆಡಿಯಾಗಿರು ಎಂದು ತಿಳಿಸಿರುವುದಾಗಿ ಹೇಳಿರುತ್ತಾರೆ.
ನಂತರ ಪತ್ನಿ ಮೊಹಮ್ಮದ್ ನಿಯಾಜ್ ನಿಗೆ ಫೋನ್ ಕರೆ ಮಾಡಿದಾಗ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಬಳಿಕ ಯುವಕನ ಕುಟುಂಬದವರು ಆತನ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಆದರೆ ಆತನ ಸುಳಿವು ಸಿಗದ ಕಾರಣ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಸದ್ರಿ ಮೊಹಮ್ಮದ್ ನಿಯಾಜ್ (33 ವರ್ಷ) ರವರು ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು, ಕೊಣಜೆ ಪೊಲೀಸ್ ಠಾಣೆ, ಮಂಗಳೂರು ನಗರ ಮೊಬೈಲ್ ನಂಬರ್ 9480802315, 9019873901 ಅಥವಾ ದೂರವಾಣಿ ಸಂಖ್ಯೆ 0824-2220536, 0824-2220800 e-mail address:- konajemgc@ksp.gov.in ಗೆ ಸಂಪರ್ಕಿಸಲು ಕೋರಲಾಗಿದೆ
