Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಂಬರ್‌ಪ್ಲೇಟ್ ಯಂತ್ರದಲ್ಲಿ ಸಿಲುಕಿದ ಯುವತಿಯ ಕೈ -ಅಗ್ನಿಶಾಮಕ ತಂತ್ರದಲ್ಲಿ ಸಾಹಸ

Spread the love

ತೈಕಾಡ್ ಜಂಕ್ಷನ್‌ನಲ್ಲಿರುವ ನಂಬರ್‌ಪ್ಲೇಟ್ ಡಿಸೈನಿಂಗ್ ಅಂಗಡಿಯಲ್ಲಿ 24 ವರ್ಷದ ಯುವತಿಯ ಬೆರಳು ಕೆಲಸದ ವೇಳೆ ಡಿಸೈನಿಂಗ್ ಯಂತ್ರದಲ್ಲಿ ಸಿಲುಕಿಕೊಂಡಿತ್ತು.ತಿರುವನಂತಪುರಂ: ನಂಬರ್ ಪ್ಲೇಟ್ ತಯಾರಿಸುವಾಗ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಬೆರಳು ಯಂತ್ರದಲ್ಲಿ ಸಿಲುಕಿಕೊಂಡಂತಹ ಘಟನೆ ನಡೆದಿದೆ. ಬಳಿಕ. ಅಗ್ನಿಶಾಮಕ ದಳದವರು ಬಂದು ಯಂತ್ರದಲ್ಲಿ ಸಿಲುಕಿದ್ದ ಮಹಿಳೆಯ ಕೈಯನ್ನು ಹೊರತೆಗೆದಿದ್ದಾರೆ. ನಿನ್ನೆ ಸಂಜೆ ಕೇರಳದ ತೈಕಾಡ್ ಜಂಕ್ಷನ್‌ನಲ್ಲಿರುವ ನಂಬರ್‌ಪ್ಲೇಟ್ ಡಿಸೈನಿಂಗ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಸಂಸ್ಥೆಯ ಉದ್ಯೋಗಿ ಅನೀಷಾ (24) ಅವರ ಬೆರಳು ಡಿಸೈನಿಂಗ್ ಯಂತ್ರದಲ್ಲಿ ಸಿಲುಕಿಕೊಂಡಿತ್ತು.
ಅನೀಷಾ ಅವರ ಬಲಗೈ ಬೆರಳು ಯಂತ್ರದಲ್ಲಿ ಸಿಲುಕಿಕೊಂಡಿದ್ದರಿಂದ ಹೊರತೆಗೆಯಲು ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ನಂತರ ತಿರುವನಂತಪುರಂ ಘಟಕದಿಂದ ಗ್ರೇಡ್ ಎಎಸ್‌ಟಿಒ ಉಲ್ಲಾಸ್ ನೇತೃತ್ವದಲ್ಲಿ ಸಜಿಕುಮಾರ್, ಶಹೀರ್, ಹರಿಲಾಲ್, ಮನು, ಸನು, ಶ್ರೀಜಿತ್, ಪ್ರಶಾಂತ್, ಬೈಜು ಅವರು ಹೈಡ್ರಾಲಿಕ್ ಕಟ್ಟರ್, ಆಂಗಲ್ ಕಟ್ಟರ್ ಬಳಸಿ ಅರ್ಧ ಗಂಟೆಗಳ ಕಾಲ ಪ್ರಯತ್ನಿಸಿ ಯಂತ್ರದಲ್ಲಿ ಸಿಲುಕಿದ್ದ ಬೆರಳನ್ನು ಹೊರತೆಗೆದರು. ಬೆರಳಿಗೆ ಗಾಯವಾಗಿ ಊತ ಬಂದಿದ್ದರಿಂದ ಅನೀಷಾ ಅವರನ್ನು ಅಗ್ನಿಶಾಮಕ ದಳದ ಆಂಬ್ಯುಲೆನ್ಸ್‌ನಲ್ಲಿ ತಿರುವನಂತಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಅನೀಷಾ ಗುಣಮುಖರಾಗುತ್ತಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *