ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವತಿ ಅಸ್ಥಿಪಂಜರವಾಗಿ ಪತ್ತೆ!

ಬಿಜ್ನೋರ್: ಗಂಡನಿಗೆ ವಿಚ್ಛೇದನ ಕೊಟ್ಟು ಗಂಡನ ಅಣ್ಣನನ್ನೇ ಮದುವೆ(Marriage)ಯಾಗಿದ್ದ ಮಹಿಳೆ ಕೆಲವೇ ದಿನಗಳಲ್ಲಿ ಅವರಿಬ್ಬರ ಹತ್ಯೆಯಾಗಿದ್ದಾಳೆ. ಹಾಲಿ-ಮಾಜಿ ಗಂಡ ಇಬ್ಬರೂ ಸೇರಿ ಆಕೆಯನ್ನು ಕೊಂದು ಹೂತು ಹಾಕಿದ್ದರು. ಕಳೆದ ಒಂದೂವರೆ ವರ್ಷದಿಂದ ತಮ್ಮ ಮಗಳು ಆಶಿಫಾಳನ್ನು ಭೇಟಿಯಾಗಿಲ್ಲ ಅಥವಾ ಫೋನ್ನಲ್ಲಿ ಮಾತನಾಡಿಲ್ಲ. ಆಕೆಯನ್ನು ಎಲ್ಲೋ ಮಾರಿರಬಹುದು ಎಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಮಾಜಿ ಗಂಡನ ಸಹೋದರನನ್ನು ಮದುವೆಯಾಗಿದ್ದ ಮಹಿಳೆಯನ್ನು ಮಾಜಿ, ಹಾಲಿ ಗಂಡಂದಿರು ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಸಮಾಧಿ ಮಾಡಿ ಒಂದೂವರೆ ವರ್ಷಗಳ ಬಳಿಕ ಇದೀಗ ಪ್ರಕರಣ ಬೆಳಕಿಗೆ ಬಂದಿದೆ. 2023ರ ಕೊನೆಯಲ್ಲಿ ಆಕೆಯ ಅವಶೇಷಗಳನ್ನು ಪೊಲೀಸರು ಪತ್ತೆ ಮಾಡಿದ್ದರು.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಮೃತಳನ್ನು ಆಶಿಫಾ ಎಂದು ಗುರುತಿಸಲಾಗಿದ್ದು, ಆಕೆಯ ಮಾಜಿ ಪತಿ ಕಾಮಿಲ್ ಮತ್ತು ಆತನ ಅಣ್ಣ ಆದಿಲ್ ಸೇರಿಕೊಂಡು ಆಕೆಯನ್ನು ಕೊಂದಿದ್ದಾರೆ, ನಂತರ ಆಕೆ ಅವರನ್ನು ಮದುವೆಯಾದರು.ಆಶಿಫಾ ಅವರ ತಾಯಿ ಅಸ್ಮಾ ಅವರು ಮಾರ್ಚ್ 25, 2025 ರಂದು ಹೀಂಪುರ್ ದೀಪಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.