ಬೈಕ್ಗೆ ಮಿನಿ ಕೂಪರ್ ಗುದ್ದಿ ಯುವತಿ ಸಾ*ವು; ಕೆಲಸ ಮುಗಿಸಿ ಮನೆಗೆ ತೆರಳುವಾಗ ಸಂಭವಿಸಿದ ಭೀಕರ ಅಪಘಾ*ತ

ಪಣಜಿ: ಬೈಕ್ಗೆ ಮಿನಿ ಕೂಪರ್ (Mini Cooper) ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ಗೋವಾದ (Goa) ಬಂಬೋಲಿಮ್-ಡೋನಾ ಪೌಲಾ ರಸ್ತೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ದಿಕ್ಷಾ ಪರ್ವಾಡ್ಕರ್ (23) ಎಂದು ಗುರುತಿಸಲಾಗಿದೆ. ಸಹೋದ್ಯೋಗಿ ಡಿ.ಅರುಣ್ಕುಮಾರ್ (26) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಗೋವಾದ ಪಂಚತಾರಾ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಕಾರು ಚಾಲಕ ಡೇರಿಯಸ್ ಡಯಾಸ್ನನ್ನು ಬಂಧಿಸಲಾಗಿದ್ದು, ಗೋವಾದಲ್ಲಿ ಬೇಕರಿ, ಹೋಟೆಲ್ಗಳನ್ನು ಹೊಂದಿರುವ ಉದ್ಯಮಿ ಆಂಡ್ರ್ಯೂ ಡಯಾಸ್ ಅವರ ಪುತ್ರ ಎಂದು ತಿಳಿದುಬಂದಿದೆಭಾನುವಾರ (ಏ.5) ರಾತ್ರಿ ಕೆಲಸ ಮುಗಿಸಿಕೊಂಡು ಇಬ್ಬರು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಇದೇ ಸಮಯದಲ್ಲಿ ಮಿನಿ ಕೂಪರ್ ಚಲಾಯಿಸಿಕೊಂಡು ಡೇರಿಯಸ್ ಡಯಾಸ್ ಅದೇ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಬೈಕ್ಗೆ ಡಿಕ್ಕಿಯಾಗಿದ್ದು, ಬೈಕ್ನಲ್ಲಿದ್ದ ಇಬ್ಬರು ನೆಲಕ್ಕೆ ಬಿದ್ದಿದ್ದಾರೆ. ಬೈಕ್ ಸುಮಾರು 50 ಮೀ. ದೂರಕ್ಕೆ ಹೋಗಿ ಬಿದ್ದಿದೆ.
ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ದೀಕ್ಷಾ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಇನ್ನೂ ಅರುಣ್ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಈ ಸಂಬಂಧ ಬಿಎನ್ಎಸ್ ಸೆಕ್ಷನ್ 106ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಮಿನಿ ಕೂಪರ್ ತಾತ್ಕಾಲಿಕ ನಂಬರ್ ಪ್ಲೇಟ್ ಹೊಂದಿದ್ದು, ಈವರೆಗೆ ಗೋವಾದಲ್ಲಿ ನೋಂದಣಿಯಾಗಿಲ್ಲ. ಇತ್ತೀಚೆಗೆ ಖರೀದಿಸಲಾಗಿದ್ದು, ಸಾಮಾನ್ಯವಾಗಿ ಹೊಸ ಕಾರುಗಳ ಮೇಲೆ ಕಾಣುವ ರಿಬ್ಬನ್ಗಳು ಕಂಡುಬಂದಿದೆ ಎನ್ನಲಾಗಿದೆ