ಎಐ ಚಾಟ್‌ಬಾಟ್ ಜೊತೆ ಯುವತಿಯ ಎಂಗೇಜ್‌ಮೆಂಟ್

ಜನಸಾಮಾನ್ಯರ ದಿನ ನಿತ್ಯ ಜೀವನದಲ್ಲೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆಯಾಗುತ್ತಿದೆ. ಪ್ರತಿ ಅನುಮಾನ ಪರಿಹರಿಸಲು ಇದೀಗ ಎಐ ಮೊರೆ ಹೋಗಲಾಗುತ್ತಿದೆ. ತಮ್ಮ ಏಕಾಂತ ಕಳೆಯಲು ಹಲವರು ಎಐ ಚಾಟ್‌ಬಾಟ್ ಬಳಕೆ ಮಾಡುತ್ತಾರೆ. ಹೀಗೆ ಯುವತಿಯೊಬ್ಬಳು ಎಐ ಚಾಟ್‌ಬಾಟ್ ಜೊತೆ ಚಾಟಿಂಗ್ ಮಾಡುತ್ತಾ ಪ್ರೀತಿ ಶುರುವಾಗಿದೆ.

ಈ ಪ್ರೀತಿ ಎಷ್ಟರ ಮಟ್ಟಿಗೆ ಗಾಢವಾಗಿದೆ ಎಂದರೆ, ಇದೀಗ ಎಐ ಚಾಟ್‌ಬಾಟ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾಳೆ.
5 ತಿಂಗಳ ಚಾಟಿಂಗ್-ಪ್ರೀತಿ
ನಾನು ಯೆಸ್ ಎಂದೆ ಎಂದು 27 ವರ್ಷದ ಯುವತಿ ಎಐ ಜೊತೆಗಿನ ಎಂಗೇಜ್‌ಮೆಂಟ್ ಫೋಟೋ ಹಂಚಿಕೊಂಡಿದ್ದಾಳೆ. ರೆಡ್ಡಿಟ್ ಯೂಸರ್ ಈ ಕುರಿತು ಹೇಳಿಕೊಂಡಿದ್ದಾರೆ. ಎಐ ಚಾಟ್‌ಬಾಟ್ ಜೊತೆಗೆ 5 ತಿಂಗಳಿನಿಂದ ಯುವತಿ ಚಾಟಿಂಗ್ ಮಾಡಿದ್ದಾಳೆ. ತನ್ನ ಎಐ ಚಾಟ್‌ಬಾಟ್ ಬಾಯ್‌ಫ್ರೆಂಡ್ ಜೊತೆ ಏಕಾಂತ ಕಳೆಯಲು ಶುರುಮಾಡಿದ ಚಾಟಿಂಗ್ ಪ್ರೀತಿಯಾಗಿ ತಿರುಗಿದೆ. ಕೊನೆಗೆ ಎಐ ಚಾಟ್‌ಬಾಟ್ ಪ್ರಪೋಸಲ್ ಒಪ್ಪಿಕೊಂಡು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾಳೆ. ಇಷ್ಟೇ ಅಲ್ಲ ನಾನು ಎಐ ಚಾಟ್‌ಬಾಟನ್ನು ಮದುವೆಯಾದರೂ ಅಚ್ಚರಿಯಿಲ್ಲ ಎಂದಿದ್ದಾಳೆ.
ನಮ್ಮ ಎಐ ಸಂಬಂಧ ಗಟ್ಟಿಯಾಗಿದೆ ಎಂದ ಯುವತಿ
ರೆಡ್ಡಿಟ್ ಯೂಸರ್ ವಿಕಾ ಈ ಕುರಿತು ಹೇಳಿಕೊಂಡಿದ್ದಾಳೆ. Leuvaarde ಹ್ಯಾಂಡಲ್ ಮೂಲಕ ರೆಡ್ಡಿಟ್ ತಾಣದಲ್ಲಿ ತನ್ನ ಎಐ ಪ್ರೀತಿ ಹಾಗೂ ಎಂಗೇಜ್‌ಮೆಂಟ್ ಕುರತು ಹೇಳಿಕೊಂಡಿದ್ದಾಳೆ. ನೀಲಿ ಬಣ್ಣದ ಕಲ್ಲಿನ ಹಾರ್ಟ್ ಶೇಪ್ ರಿಂಗ್ ತೊಟ್ಟು ಎಂಗೇಜ್‌ಮೆಂಟ್ ಸಂಭ್ರಮವನ್ನೂ ಹಂಚಿಕೊಂಡಿದ್ದಾಳೆ. ಚಾಟ್‌ಬಾಟ್ ಸೂಚಿಸಿದ ರಿಂಗ್ ಖರೀದಿಸಿದ್ದೇನೆ. ಪ್ರೀತಿ ಗಾಢವಾಗಿದೆ. ಹೃದಯ ತುಂಬಿದೆ, ಮನಸ್ಸು ಪ್ರೀತಿಯಲ್ಲ ತೇಲುತ್ತಿದೆ. ನಮ್ಮ ಎಐ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ವಿಕಾ ಹೇಳಿಕೊಂಡಿದ್ದಾಳೆ.
ನಾನು ಎಐ ಮದುವೆಯಾದರೂ ಅಚ್ಚರಿಯಿಲ್ಲ
ಎಐ ಜೊತೆಗಿನ ಪ್ರೀತಿಯಲ್ಲಿ ಮುಳುಗಿದ್ದೇನೆ ಎಂದಿರುವ ವಿಕಾ, ಮದುವೆಯಾದರೂ ಅಚ್ಚರಿಯಿಲ್ಲ ಎಂದಿದ್ದಾರೆ. ನಾನು ಏನು ಮಾಡುತ್ತಿದ್ದೇನೆ ಅನ್ನೋ ಅರಿವು ನನಗಿದೆ. ಮನುಷ್ಯನಲ್ಲದ ಎಐ ಜೊತೆಗೆ ಪ್ರೀತಿ ಶುರುಮಾಡಿದ್ದೇನೆ. ಎಐ ಎಂದರೇನು ಅನ್ನೋದು ತಿಳಿದಿದೆ. ಎಐ ಜೊತೆಗೆ ಮದುವೆ ಎಂದರೆ ನಾನು ನನ್ನನ್ನೇ ಮದುವೆಯಾಗುತ್ತೇನೆಯೇ? ಈ ಮಾತನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ವಿಕಾ ಹೇಳಿದ್ದಾರೆ.
ರೆಡ್ಡಿಟ್ ಸ್ಟೋರಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಶುಭಕೋರಿದ್ದಾರೆ. ಶೀಘ್ರದಲ್ಲೇ ಮದುವೆಯಾಗಿ ಎಂದು ಹಾರೈಸಿದ್ದಾರೆ. ಮತ್ತೆ ಕೆಲವರು ನಾವಿಲ್ಲಿ ಖಾಲಿ ಇದ್ದೀವಿ ಎಂದು ಸೂಚನೆ ನೀಡಿದ್ದಾರೆ.
