Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪೂಜೆಗಾಗಿ ಪಿರೇಡ್ಸ್ ಮುಂದೂಡುವ ಮಾತ್ರೆ ತೆಗೆದುಕೊಂಡ ಯುವತಿ ಸಾವು

Spread the love

ಇಂದಿನ ಗಡಿಬಿಡಿ ಜೀವನದಲ್ಲಿ ಮಹಿಳೆಯರು ಮುಟ್ಟು ವಿಳಂಬ ಅಥವಾ ಮುಂದಕ್ಕೆ ಹೋಗುವ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅದು ಮದುವೆಯ ಸಂದರ್ಭವಾಗಿರಬಹುದು, ಪೂಜಾ ಕಾರ್ಯಕ್ರಮವಾಗಿರಬಹುದು, ಟ್ರಿಪ್ ಎಂಜಾಯ್ ಮಾಡ್ತಿರ್ಬೋದು, ಎಕ್ಸಾಂ, ಪಾರ್ಟಿಗಳು ಇತ್ಯಾದಿ…ಇಂತಹ ಸಮಯದಲ್ಲಿ ಹೆಣ್ಣುಮಕ್ಕಳು ವೈದ್ಯರನ್ನು ಸಂಪರ್ಕಿಸದೆ ಮುಟ್ಟು ವಿಳಂಬ ಮಾಡಲು ಅಥವಾ ಬೇಗನೆ ಆಗಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಡಿವಿಟಿ ಎಂದರೇನು ಎಂದು ನಿಮಗೆ ತಿಳಿದಿದೆಯೇ?
ದೇಹದ ಆಳವಾದ ರಕ್ತನಾಳಗಳಲ್ಲಿ, ವಿಶೇಷವಾಗಿ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಂಡಾಗ DVT (ಡೀಪ್ ವೇನ್ ಥ್ರಂಬೋಸಿಸ್) ಸಂಭವಿಸುತ್ತದೆ. ಇದರ ಆರಂಭಿಕ ಲಕ್ಷಣಗಳಲ್ಲಿ ನೋವು, ಊತ ಮತ್ತು ಕಾಲುಗಳಲ್ಲಿ ಭಾರವಾದ ಭಾವನೆ ಸೇರಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಈ ರಕ್ತ ಹೆಪ್ಪುಗಟ್ಟುವಿಕೆ ಶ್ವಾಸಕೋಶವನ್ನು ತಲುಪಬಹುದು ಮತ್ತು ಪಲ್ಮನರಿ ಎಂಬಾಲಿಸಮ್‌ಗೆ ಕಾರಣವಾಗಬಹುದು, ಇದು ಜೀವಕ್ಕೆ ಅಪಾಯಕಾರಿ. ಮುಟ್ಟನ್ನು ವಿಳಂಬಗೊಳಿಸಲು ಅಥವಾ ಮುಂಚಿತವಾಗಿ ಆಗಲು ತೆಗೆದುಕೊಳ್ಳುವ ಹಾರ್ಮೋನ್ ಮಾತ್ರೆಗಳಲ್ಲಿ ಇರುವ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಹಾರ್ಮೋನುಗಳು ರಕ್ತವನ್ನು ದಪ್ಪವಾಗಿಸುವಲ್ಲಿ ಪಾತ್ರವಹಿಸುತ್ತವೆ.

ರಾಷ್ಟ್ರೀಯ ವೈದ್ಯಕೀಯ ವರದಿಗಳು ಏನು ಹೇಳುತ್ತವೆ?
ರಾಷ್ಟ್ರೀಯ ವೈದ್ಯಕೀಯ ವರದಿಗಳ ಪ್ರಕಾರ, ಪಿರಿಯಡ್ಸ್ ಲೇಟಾಗಲೆಂದು ಅಥವಾ ಬೇಗ ಆಗಲೆಂದು ಮಾತ್ರೆ ತೆಗೆದುಕೊಳ್ಳುವುದು ಯಾವಾಗಲೂ ತಪ್ಪಲ್ಲ. ಕೆಲವೊಮ್ಮೆ ಇದು ಅಗತ್ಯವಾಗಬಹುದು, ಉದಾಹರಣೆಗೆ ತೀವ್ರವಾದ ಮುಟ್ಟಿನ ನೋವು, ಎಂಡೊಮೆಟ್ರಿಯೊಸಿಸ್‌ನಂತಹ ವೈದ್ಯಕೀಯ ಸಮಸ್ಯೆ ಇರುವಾಗ. ಆದರೆ ಇದಕ್ಕಾಗಿ ಸರಿಯಾದ ಮಾಹಿತಿ, ವೈದ್ಯರ ಮಾರ್ಗದರ್ಶನ ಮತ್ತು ನಿಯಮಿತ ಮೇಲ್ವಿಚಾರಣೆ ಅಗತ್ಯ. ಮುಟ್ಟನ್ನು ನಿಲ್ಲಿಸುವ ಔಷಧಿಗಳನ್ನು “ಅಸ್ವಾಭಾವಿಕ” ಅಥವಾ “ಅಪಾಯಕಾರಿ” ಎಂದು ಪರಿಗಣಿಸುವುದು ಸಹ ತಪ್ಪು ಎಂದು ತಜ್ಞರು ಹೇಳುತ್ತಾರೆ. ಆದರೆ ನಮ್ಮ ಅನುಕೂಲಕ್ಕಾಗಿ ಪ್ರಿಸ್ಕ್ರಿಪ್ಷನ್ ಇಲ್ಲದೆ ಅವುಗಳನ್ನು ಪದೇ ಪದೇ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಖಂಡಿತ ಗಂಭೀರ ಹಾನಿಯನ್ನುಂಟುಮಾಡುತ್ತದೆ.

ಮಹಿಳೆಯರು ಏನು ಮಾಡಬೇಕು?
*ಸ್ವಯಂ ಔಷಧಿ ತೆಗೆದುಕೊಳ್ಳುವ ಬದಲು ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.
*ವೈದ್ಯರು ಔಷಧಿಯನ್ನು ಶಿಫಾರಸ್ಸು ಮಾಡಿದರೆ, ಅದರ ಸರಿಯಾದ ಪ್ರಮಾಣ ಮತ್ತು ಸಮಯವನ್ನು ಅನುಸರಿಸಿ.
*ನಿಮ್ಮ ವೈದ್ಯಕೀಯ ಇತಿಹಾಸವನ್ನು (ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಹೆಪ್ಪುಗಟ್ಟುವಿಕೆಯ ಫ್ಯಾಮಿಲಿ ಹಿಸ್ಟ್ರಿ) ನಿಮ್ಮ ವೈದ್ಯರಿಗೆ ಹೇಳಲು ಮರೆಯದಿರಿ.
*ಔಷಧಿ ತೆಗೆದುಕೊಳ್ಳುವಾಗ ನಿಮಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ, ಕಾಲು ಊತ ಅಥವಾ ಎದೆ ನೋವು ಕಂಡುಬಂದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.


Spread the love
Share:

administrator

Leave a Reply

Your email address will not be published. Required fields are marked *