ಎಂಜಲು ಉಗುಳಿ ಆಹಾರ ತಯಾರಿಸಿದ ಯುವಕ

ಗಾಜಿಯಾಬಾದ್: ಬೀದಿ ಬದಿಗಳಲ್ಲಿ ಸಿಗುವ ಆಹಾರವನ್ನು (food) ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಈ ಆಹಾರವು ಶುಚಿಯಾಗಿ ಹಾಗೂ ನೈರ್ಮಲ್ಯತೆಯಿಂದ ಕೂಡಿದೆಯೇ ಎಂದು ಯಾರು ಯೋಚನೆ ಮಾಡಲ್ಲ. ಆದರೆ ಕೆಲವೊಮ್ಮೆ ಆಹಾರ ತಯಾರಿಸುವವರ ಅಸಭ್ಯಕರ ವರ್ತನೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಬ್ಬ ಯುವಕನು ರೊಟ್ಟಿಯನ್ನು ಕೈಯಲ್ಲಿ ತಯಾರಿಸಿ ಎಂಜಲು ಉಗುಳಿ ಬೇಯಿಸುತ್ತಿರುವ ದೃಶ್ಯವು ವೈರಲ್ ಆಗಿದೆ. ಈ ಘಟನೆಯೂ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ (Ghaziabad of Uttara Pradesh) ನಡೆದಿದೆ ಎನ್ನಲಾಗಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವೈರಲ್ ವಿಡಿಯೋದಲ್ಲಿ ನಾಲ್ವರು ಯುವಕರು ಇರುವುದನ್ನು ಕಾಣಬಹುದು. ಒಬ್ಬ ಯುವಕನು ಬೆಂದ ರೊಟ್ಟಿಯನ್ನು ತೆಗೆಯುತ್ತಿದ್ದರೆ, ಮತ್ತೊಬ್ಬ ಯುವಕನು ರೊಟ್ಟಿಯನ್ನು ತಟ್ಟಿ ಅದಕ್ಕೆ ಎಂಜಲು ಉಗುಳಿ ಬೇಯಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಈ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಮಾಡಿ ಆಹಾರ ನೈರ್ಮಲ್ಯತೆಯನ್ನು ಪ್ರಶ್ನೆ ಮಾಡಿದ್ದಾರೆ. ಕೆಲವರು ಈ ರೀತಿಯಾಗಿ ಆಹಾರ ತಯಾರಿಸಿರುವುದನ್ನು ನೋಡುತ್ತಿದ್ರೆ ತಿನ್ನಲು ಮನಸ್ಸಾಗುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಈ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.
