ಪ್ರಿಯ ಬೈಕ್ ನ ಜೊತೆಗೆ ಸಮಾಧಿಯಾದ ಯುವಕ

ಗಾಂಧಿನಗರ್:ಕೆಲವರು ತಮ್ಮ ವಾಹನವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇಷ್ಟಪಡುವ ಬೈಕ್, ಕಾರನ್ನು ಜೀವನದ ಒಂದು ಭಾಗದಂತೆ ಪ್ರೀತಿಸುತ್ತಾರೆ. ಇಲ್ಲೊಬ್ಬ ಯುವಕ ತಾನು ಹೆಚ್ಚಾಗಿ ಇಷ್ಟಪಡುತ್ತಿದ್ದ ವಾಹನದಲ್ಲಿ ತೆರಳುವಾಗ ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನನ್ನು ಆತನ ಇಷ್ಟದ ಬೈಕ್ ಜತೆಯೇ ಸಮಾಧಿ ಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್ನ ಖೇಡಾದಲ್ಲಿ ನಡೆದಿದೆ.
ನಾಡಿಯಾಡ್ನ ಉತ್ತರಸಂದ ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿ ಕ್ರಿಶ್ ಪರ್ಮಾರ್ (18) ಮೃ*ತ ಯುವಕ.
ಇತ್ತೀಚೆಗೆ ಕ್ರಿಶ್ ಪರ್ಮಾರ್ ತನ್ನ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗ್ರಾಮದ ಬಳಿ ಅವರ ಬೈಕ್ ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ ಹೊಡೆದಿದೆ. ಪರಿಣಾಮಕ್ರಿಶ್ ಗಂಭೀರ ಗಾಯಗೊಂಡಿದ್ದರು. ಹನ್ನೆರಡು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಕ್ರಿಶ್ ಸಾವನ್ನಪ್ಪಿದ್ದಾರೆ.
ಕ್ರಿಶ್ ತನ್ನ ಬೈಕ್ನ್ನು ಹೆಚ್ಚು ಇಷ್ಟಪಡುತ್ತಿದ್ದರು. ಅದೇ ಬೈಕ್ನಲ್ಲಿ ತೆರಳುವಾಗ ಭೀಕರ ಅಪಘಾತ ಸಂಭವಿಸಿದೆ. ಕ್ರಿಶ್ನನ್ನು ಅವನ ಕುಟುಂಬಸ್ಥರು ಅವನು ಹೆಚ್ಚು ಇಷ್ಟಪಡುತ್ತಿದ್ದ ಬೈಕ್ನ ಜತೆಯೇ ಹೂಳಲಾಗಿದೆ.
ಈ ಭಾವನಾತ್ಮಕ ಕ್ಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.