ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕುಸಿದು ಬಿದ್ದು ಯುವಕ ಸಾವು: ಹೆಚ್ಚುತ್ತಿರುವ ಹಠಾತ್ ಸಾವುಗಳ ಬಗ್ಗೆ ಆತಂಕ!

ಕೊಚ್ಚಿ: ಆರೋಗ್ಯ ಕುರಿತು ಆತಂಕ ಹಾಗೂ ಚರ್ಚೆಗಳು ತೀವ್ರಗೊಳ್ಳುತ್ತಿದೆ. ನಡೆದು ಸಾಗುತ್ತಿರುವಾಗ, ವ್ಯಾಯಾಮ ಮಾಡುತ್ತಿರುವಾಗ, ಶಾಲೆಗೆ ತೆರಳುವಾಗ ಹೀಗೆ ಹಲವು ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ಮೃತಪಟ್ಟ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿದೆ.

ಇದೀಗ ಯುವಕನೊಬ್ಬ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಮೃತಪಟ್ಟ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. 42ರ ಹರೆಯದ ಪೆರುಂಬಿಳ್ಳಿ ನಿವಾಸಿ ರಾಜ್ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ
ಎದೆನೋವಿನಿಂದ ಕುಳಿತುಕೊಂಡ ರಾಜ್
ಇಂದು (ಜು.30) ಬೆಳಿಗ್ಗೆ5.30 ರ ಸುಮಾರಿಗೆ ಪ್ಯಾಲೇಸ್ ಸ್ಕ್ವೇರ್‌ನಲ್ಲಿರುವ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ಈ ಸಮಯದಲ್ಲಿ ಜಿಮ್‌ನಲ್ಲಿ ಯಾರೂ ಇರಲಿಲ್ಲ. ಸಾಂದರ್ಭಿಕವಾಗಿ ವ್ಯಾಯಾಮ ಮಾಡಲು ಜಿಮ್‌ಗೆ ಬರುತ್ತಿದ್ದ ರಾಜ್, ಸಾಮಾನ್ಯವಾಗಿ ಬೆಳಿಗ್ಗೆ 6 ಗಂಟೆಗೆ ಜಿಮ್‌ಗೆ ಬರುತ್ತಿದ್ದರು. ಆದರೆ ಇಂದು ಬೆಳಿಗ್ಗೆ 5 ಗಂಟೆಗೆ ಬಂದು ಜಿಮ್ ತೆರೆದು ವ್ಯಾಯಾಮ ಆರಂಭಿಸಿದ್ದರು. 5.26 ಕ್ಕೆ ರಾಜ್ ಕುಸಿದು ಬೀಳುವುದು ಜಿಮ್‌ನ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ವ್ಯಾಯಾಮದ ವೇಳೆ ರಾಜ್‌ಗೆ ಎದನೋವು ಕಾಣಿಸಿಕೊಂಡಿದೆ. ಹೀಗಾಗಿ ರಾಜ್ ಎದೆಗೆ ಕೈಗಳನ್ನು ಒತ್ತಿಕೊಂಡು ಕೆಲವು ಸೆಕೆಂಡುಗಳ ಕಾಲ ನಡೆದಿದ್ದಾರೆ. ಬಳಿಕ ನೋವು ತೀವ್ರಗೊಳ್ಳುತ್ತಿದ್ದಂತೆ ಕುಳಿತುಕೊಂಡಿದ್ದಾರೆ. ಆದರೆ ಒಂದು ನಿಮಿಷಗಳ ಕಾಲ ಕುಳಿತುಕೊಂಡಿದ್ದ ರಾಜ್, ಬಳಿಕ ಹಠಾತ್ ಕುಸಿದು ಬಿದ್ದಿದ್ದಾರೆ.
ರಾಜ್‌ಗೆ ನೆರವು ನೀಡಲು ಯಾರು ಇರಲಿಲ್ಲ
ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಜಿಮ್‌ಗೆ ತೆರಳಿದ್ದ ರಾಜ್ ವ್ಯಾಯಾಮ ಆರಂಭಿಸಿದ್ದರು. ಜಿಮ್‌ನಲ್ಲಿ ಇತರರು ಯಾರೂ ಇರದ ಕಾರಣ ರಾಜ್ ಅಸ್ವಸ್ಥಗೊಳ್ಳುತ್ತಿದ್ದಂತೆ ಯಾವುದೇ ನೆರವು ಸಿಗಲಿಲ್ಲ. ಕೆಲ ಸಮಯದ ಬಳಿಕ ಇತರರು ಜಿಮ್‌ಗೆ ಆಗಮಿಸಿದ ವೇಳೆ ರಾಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ರಾಜ್ ಜಿಮ್ ಫ್ಲೋರ್ ಮೇಲೆ ಬಿದ್ದಿದ್ದರು. ಬೆಳಗ್ಗೆ 5.45ರ ಸುಮಾರಿಗೆ ಜಿಮ್‌ಗೆ ಆಗಮಿಸಿದ ಇತರರು ರಾಜ್‌ಗೆ ಸಿಪಿಆರ್ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೇ ಸ್ಪಂದನೆ ವ್ಯಕ್ತವಾದ ಕಾರಣ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಪಾಸಣೆ ನಡೆಸಿ ನಿಧನ ಖಚಿತಪಡಿಸಿದ ರಾಜ್
ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ವೈದ್ಯರು ರಾಜ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ರಾಜ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಕಳಮಶೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
