‘ನೀವು ಈ ರಸ್ತೆ ಮೇಲೆ ನಡೆಯಬಾರದು’ ಎಂದು ಮಹಿಳೆಗೆ ಜೀವ ಬೆದರಿಕೆ ಒಡ್ಡಿದ ಪಾತ್ರಿ

ಪಡುಬಿದ್ರಿ :ನಡ್ಸಾಲು ಗ್ರಾಮದ ಬೊಗ್ಗರ್‌ಲಚ್ಚಿಲ್ ನಿವಾಸಿ ಸೀತಾ (69) ಅವರಿಗೆ ಮೇ 2ರಂದು ವಿಟ್ಟು ಪಾತ್ರಿ ಅವರು ಕೈಯಿಂದ ಹಲ್ಲೆ ನಡೆಸಿ, ತನ್ನ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ನಡೆಯಬಾರದೆಂದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀತಾ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಮನೆಯಿಂದ ಹೊರ ಬಂದ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಸೀತಾ ಅವರ ಸೀರೆ ಹಿಡಿದೆಳೆದಿದ್ದರು. ನಿಯಂತ್ರಣವನ್ನು ಕಳೆದುಕೊಂಡು ಸೀತಾ ಅವರು ರಸ್ತೆಗೆ ಬಿದ್ದಾಗ ಅವರ ಬೆನ್ನ ಮೇಲೆ ಕೈಯಿಂದ ಹಲ್ಲೆ ನಡೆಸಿದ ಆರೋಪಿ ವಿಟ್ಟು ಪಾತ್ರಿಯು ತನ್ನ ಮನೆಯೆದುರಿನ ರಸ್ತೆಯಲ್ಲಿ ನಡೆಯಬಾರದು. ಮುಂದೆ ನೋಡಿದರೆ ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಕಬ್ಬಿಣದ ರಾಡ್ ಹಿಡಿದು ಜೀವ ಬೆದರಿಕೆ ಒಡ್ಡಿದ್ದರೆಂದು ಪೊಲೀಸರಿಗಿತ್ತ ದೂರಲ್ಲಿ ತಿಳಿಸಲಾಗಿದೆ.
