ಕದ್ರಿ ದೇವಸ್ಥಾನದಲ್ಲಿ ಯಶವಂತ ಪ್ರಭು ಮತ್ತು ಕಾಂಗ್ರೆಸ್ ನಾಯಕರು – ಸುಳ್ಳು ಕೇಸಿನ ವಿರುದ್ಧ ದೇವರ ಮೊರೆ

ಮಂಗಳೂರು: ಕದ್ರಿ ಮಂಜುನಾಥ ದೇವಾಲಯದ ಸಾನ್ನಿಧ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯ ಯಶವಂತ ಪ್ರಭು ಹಾಗೂ ಅವರ ಬೆಂಬಲಿಗರು, ಪಕ್ಷದ ಕಚೇರಿಯ ಮುಂಭಾಗದಿಂದ ನೇರವಾಗಿ ದೇವಾಲಯಕ್ಕೆ ತೆರಳಿ, ತಾವು ಎದುರಿಸುತ್ತಿರುವ ಅಸಮತೋಲನ ಹಾಗೂ ಸುಳ್ಳು ಕೇಸುಗಳ ಬಗ್ಗೆ ದೇವರಿಗೆ ಮೊರೆಹೋದರು.

ದೇವರ ಮುಂದೆ ದೂರು:
ಯಶವಂತ ಪ್ರಭು ಮತ್ತು ಕಾಂಗ್ರೆಸ್ ನಾಯಕರು, “ನಮ್ಮ ಮೇಲೆ ಸುಳ್ಳು ಕೇಸು ಹಾಕಿದವರ ಮೇಲೆ ಮಂಜುನಾಥನೇ ಬುದ್ಧಿ ಕೊಡಲಿ” ಎಂದು ದೇವರಿಗೆ ಪ್ರಾರ್ಥಿಸಿದರು,ನ್ಯಾಯಕ್ಕಾಗಿ ದೈವಭಕ್ತಿಗೆ ಮೊರೆ ಹೋದರು
ಹಲ್ಲೆ ಆರೋಪ:
ಯಶವಂತ ಪ್ರಭು ಮೇಲೆ ಶಾಸಕ ವೇದವ್ಯಾಸ ಕಾಮತ್ ಮತ್ತು ಅವರ ತಂಡದಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿಸಿದೆ.