ಚೀನಾದಿಂದ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವದಾಖಲೆ: 5000 ಕಿ.ಮೀ. ದೂರದಿಂದ ರೋಬೋಟಿಕ್ ಲಿವರ್ ಶಸ್ತ್ರಚಿಕಿತ್ಸೆ ಯಶಸ್ವಿ!

ಬೀಜಿಂಗ್: ಹೊಸ ತಂತ್ರಜ್ಞಾನ ಆವಿಷ್ಕಾರದಲ್ಲಿ ಚೀನಾ ಯಾವಾಗಲೂ ಮೇಲು ಗೈ. ವಿಶ್ವಕ್ಕೆ ಹೊಸ ಹೊಸ ವಿಚಾರಗಳನ್ನು ಪರಿಚಯಿಸುವ ಚೀನಾ ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದೆ.

ಚೀನಾದ ವೈದ್ಯರು ಲಾಸಾದಿಂದ ಬೀಜಿಂಗ್ಗೆ ಉಪಗ್ರಹ ಸಂವಹನವನ್ನು ಬಳಸಿಕೊಂಡು 5,000 ಕಿಲೋಮೀಟರ್ಗಿಂತ ಹೆಚ್ಚು ದೂರದಲ್ಲಿರುವ ಇಬ್ಬರು ರೋಗಿಗಳ ಮೇಲೆ ರೋಬೋಟಿಕ್ ಲಿವರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು.

ಇದು ವಿಶ್ವದಲ್ಲೇ ಮೊದಲ ಪ್ರಯೋಗವಾಗಿದೆ. ಹಾಗೂ ಮೊದಲ ಪ್ರಯೋಗದಲ್ಲೇ ಚೀನಾ ಗೆಲುವು ಕಂಡಿದೆ.
ಅಪ್ಸ್ಟಾರ್-6D ಉಪಗ್ರಹದ ಮೂಲಕ ನಡೆಸಲಾದ ಈ ಶಸ್ತ್ರಚಿಕಿತ್ಸೆಯಲ್ಲಿ ಇಬ್ಬರಿಗೂ ಕೇವಲ 20 ಮಿಲಿ ರಕ್ತದ ನಷ್ಟವಾಗಿದ್ದು, ಬೇರೆ ಯಾವುದೇ ತೊಂದರೆಗಳಾಗಿಲ್ಲ. ಇಬ್ಬರೂ ರೋಗಿಗಳು ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದು, ಕೇವಲ ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
