ಟ್ರಂಪ್-ಮೆಲಾನಿಯಾ ಹತ್ತುವಾಗ ನಿಂತ ವಿಶ್ವಸಂಸ್ಥೆ ಎಸ್ಕಲೇಟರ್

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಎಸ್ಕಲೇಟರ್ ಹತ್ತುತ್ತಿರುವಾಗ ಅದು ಏಕಾಏಕಿ ನಿಂತಿರುವ ಘಟನೆ ನಡೆದಿದೆ. ಶ್ವೇತಭವನವು ತನಿಖೆಗೆ ಆಗ್ರಹಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇಬ್ಬರು ಎಸ್ಕಲೇಟರ್ ಹತ್ತಿದ ಮರುಕ್ಷಣದಲ್ಲೇ ಅದು ನಿಂತಿತ್ತು. ಟ್ರಂಪ್ ಮತ್ತು ಮೆಲಾನಿಯಾ ಗಾಬರಿಗೊಂಡಿದ್ದರು. ಬಳಿಕ ಮೆಟ್ಟಿಲುಗಳ ಮೇಲೆಯೇ ನಡೆದು ಹೋಗುವಂತಾಯಿತು. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತನಿಖೆಗೆ ಒತ್ತಾಯಿಸಿದ್ದಾರೆ ಮತ್ತು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರೆ, ಇದರ ಹಿಂದಿರುವವರನ್ನು ವಜಾಗೊಳಿಸಬೇಕು ಎಂದು ಹೇಳಿದ್ದಾರೆ.
