ವಿಶ್ವ ತಂಬಾಕು ರಹಿತ ದಿನ:20 ನಿಮಿಷ ತ್ಯಜಿಸಿದರೆ, 20 ವರ್ಷದ ಆರೋಗ್ಯ ಲಾಭ

ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಆಚರಣೆ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಾಗಿದೆ. ಆದರೆ ಅದರಿಂದ ಜಾರಿಗೆ ಬರಬೇಕಾದ ಕ್ರಮವೇನು? ಹಾಗೂ ಇದರಿಂದ ಆರೋಗ್ಯ ಪ್ರಯೋಜನಗಳೇನು ಎಂಬ ಬಗ್ಗೆ ಯಾವುದೇ ಕಾರಣವನ್ನು ನೀಡುವುದಿಲ್ಲ. ತಂಬಾಕು ಸೇವನೆಯು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದ್ದರೂ, ಕೆಲವು ಜೀವನಶೈಲಿಯ ಪ್ರವೃತ್ತಿಗಳು ಧೂಮಪಾನವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿವೆ. ಆದ್ದರಿಂದ, ತಂಬಾಕು ತ್ಯಜಿಸುವುದರಿಂದ ನಮ್ಮ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಅಲೈವ್ ಹೆಲ್ತ್ ಪೌಷ್ಟಿಕತಜ್ಞ ಮತ್ತು ಯೋಗ ತರಬೇತುದಾರರಾದ ತಾನ್ಯಾ ಖನ್ನಾ ಅವರು HT ಲೈಫ್ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ ತಂಬಾಕು 20 ನಿಮಿಷ ತ್ಯಜಿಸುವುದರಿಂದ 20 ವರ್ಷಗಳಿಗೆ ಆಗುವ ಆರೋಗ್ಯವನ್ನು ನೀಡುತ್ತದೆ. ಇಡೀ ವಿಶ್ವದಲ್ಲಿ ಹೆಚ್ಚು ಸಾವು ತಂಬಾಕು ಸೇವನೆಯಿಂದ ಆಗುತ್ತಿದೆ. ಬ್ಬ ವ್ಯಕ್ತಿಯು ಧೂಮಪಾನವನ್ನು ತ್ಯಜಿಸಲು ನಿರ್ಧರಿಸಿದ ಕ್ಷಣ, ದೇಹವು ಕೆಲವೇ ನಿಮಿಷಗಳಲ್ಲಿ ಗುಣವಾಗಲು ಪ್ರಾರಂಭಿಸುತ್ತದೆ ಮತ್ತು ದಶಕಗಳವರೆಗೆ ಇದನ್ನು ಮಾಡಿದ್ರೆ ಇನ್ನು ದೇಹ ಆರೋಗ್ಯವಾಗಿರುತ್ತದೆ. 20 ನಿಮಿಷ, 12 ಗಂಟೆ, 9 ತಿಂಗಳು, 10 ವರ್ಷ ಅಥವಾ 20 ವರ್ಷಗಳ ನಂತರ ಧೂಮಪಾನ ತ್ಯಜಿಸುವುದರಿಂದ ನಮ್ಮ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂಬುದನ್ನು ಕೂಡ ತಾನ್ಯಾ ಖನ್ನಾ ಹೇಳಿದ್ದಾರೆ.
ಇದರಿಂದ ನಮ್ಮ ದೇಹದೊಳಗೆ ಆಗುವ ಬದಲಾವಣೆಗಳು, ಮುಂದೆ ಧೂಮಪಾನ ತ್ಯಜಿಸುವಂತೆ ಪೋತ್ಸಾಹ ಮಾಡುತ್ತದೆ. ತ್ಯಜಿಸಿದ 20 ನಿಮಿಷಗಳ ನಂತರ, ಹೃದಯ ಬಡಿತ ಮತ್ತು ರಕ್ತದೊತ್ತಡವು ಆರೋಗ್ಯಕರ ಮಟ್ಟಕ್ಕೆ ಇಳಿಯಲು ಪ್ರಾರಂಭಿಸುತ್ತದೆ. ಹಾಗೂ ರಕ್ತ ಪರಿಚಲನೆ ಸುಧಾರಿಸಲು ಪ್ರಾರಂಭಿಸುತ್ತದೆ. ಇನ್ನು ತ್ಯಜಿಸಿದ 12 ಗಂಟೆಗಳ ನಂತರ ಸಿಗರೇಟಿನ ಹೊಗೆಯಲ್ಲಿ ಕಂಡುಬರುವ ಹಾನಿಕಾರಕ ಅನಿಲವಾದ ಕಾರ್ಬನ್ ಮಾನಾಕ್ಸೈಡ್ ರಕ್ತಪ್ರವಾಹವನ್ನು ಬಿಡಲು ಪ್ರಾರಂಭಿಸುತ್ತದೆ. ದೇಹದಲ್ಲಿನ ಆಮ್ಲಜನಕದ ಮಟ್ಟವು ಸಾಮಾನ್ಯ ಸ್ಥಿತಿಗೆ ತರುತ್ತದೆ. ಹೃದಯ ಮತ್ತು ಶ್ವಾಸಕೋಶದ ಮೇಲಿನ ಹೊರೆ ಕಡಿಮೆ ಮಾಡುತ್ತದೆ.
ಧೂಮಪಾನ ತ್ಯಜಿಸಿದ 24 ಗಂಟೆಗಳ ನಂತರ ಹೃದಯಾಘಾತದ ಅಪಾಯ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ದೇಹವು ತಂಬಾಕಿನಿಂದ ಪರಿಚಯಿಸಲ್ಪಟ್ಟ ವಿಷವನ್ನು ತನ್ನಿಂದ ತಾನೇ ಶುದ್ಧೀಕರಿಸಿತ್ತದೆ. ಇನ್ನು ತ್ಯಜಿಸಿದ 48 ಗಂಟೆಗಳ ನಂತರ ನರ ತುದಿಗಳು ಪುನರುತ್ಪಾದನೆಗೊಳ್ಳಲು ಪ್ರಾರಂಭಿಸುತ್ತವೆ, ಇದು ರುಚಿ ಮತ್ತು ವಾಸನೆಯ ಇಂದ್ರಿಯಗಳಲ್ಲಿ ಸುಧಾರಣೆಗೆ ಕಾರಣವಾಗುತ್ತದೆ. ಈ ಹಂತದ ಹೊತ್ತಿಗೆ, ಎಲ್ಲಾ ನಿಕೋಟಿನ್ ದೇಹವನ್ನು ತೊರೆದಿರುತ್ತದೆ. ಧೂಮಪಾನ ತ್ಯಜಿಸಿದ 1 ರಿಂದ 3 ತಿಂಗಳ ನಂತರ ಶ್ವಾಸಕೋಶದ ಕಾರ್ಯವು ಗಮನಾರ್ಹವಾಗಿ ಸುಧಾರಿಸಲು ಪ್ರಾರಂಭಿಸುತ್ತದೆ. ಉಸಿರಾಟವು ಸುಲಭವಾಗುತ್ತದೆ, ದೈಹಿಕ ಸಹಿಷ್ಣುತೆ ಹೆಚ್ಚಾಗುತ್ತದೆ ಮತ್ತು ರಕ್ತ ಪರಿಚಲನೆ ಸ್ಥಿರಗೊಂಡು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತದೆ.
ಧೂಮಪಾನ ತ್ಯಜಿಸಿದ 9 ತಿಂಗಳ ನಂತರ ಶ್ವಾಸಕೋಶದಲ್ಲಿ ಸಿಲಿಯಾ ಎಂದು ಕರೆಯಲ್ಪಡುವ ಸಣ್ಣ ಕೂದಲಿನಂತಹ ರಚನೆಗಳು ಮತ್ತೆ ಬೆಳೆಯಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಕೆಮ್ಮು ಮತ್ತು ಉಸಿರಾಟದ ಕಾಯಿಲೆಗಳು ಕಡಿಮೆಯಾಗುತ್ತವೆ. ತ್ಯಜಿಸಿದ 1 ವರ್ಷದ ನಂತರ ಧೂಮಪಾನಿಗಳಿಗಿಂತ ಹೃದಯ ಸಂಬಂಧಿ ಕಾಯಿಲೆ ಬರುವ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತದೆ. ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಗಳು ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತಲೇ ಇರುತ್ತವೆ. ತ್ಯಜಿಸಿದ 5 ವರ್ಷಗಳ ನಂತರ ಪಾರ್ಶ್ವವಾಯು ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬಾಯಿ, ಗಂಟಲು, ಅನ್ನನಾಳ ಮತ್ತು ಮೂತ್ರಕೋಶದ ಕ್ಯಾನ್ಸರ್ಗಳ ಅಪಾಯಗಳು ಸಹ ಬಹಳವಾಗಿ ಕಡಿಮೆಯಾಗುತ್ತವೆ. ಇನ್ನು ಇದನ್ನು ತ್ಯಜಿಸಿದ 10 ವರ್ಷಗಳ ನಂತರ ಧೂಮಪಾನ ಮಾಡುವವರಿಗಿಂತ ಶ್ವಾಸಕೋಶದ ಕ್ಯಾನ್ಸರ್ ನಿಂದ ಸಾಯುವ ಅಪಾಯ ಅರ್ಧದಷ್ಟು.ಧ್ವನಿಪೆಟ್ಟಿಗೆ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಬರುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ತ್ಯಜಿಸಿದ 15 ರಿಂದ 20 ವರ್ಷಗಳ ನಂತರ ಈ ಹಂತದಲ್ಲಿ, ಪರಿಧಮನಿಯ ಹೃದಯ ಕಾಯಿಲೆಯ ಅಪಾಯವು ಎಂದಿಗೂ ಬರುವುದಿಲ್ಲ, ಸಾಮಾನ್ಯವಾಗಿರುತ್ತದ.ಪಾರ್ಶ್ವವಾಯು ಮತ್ತು ಅನೇಕ ರೀತಿಯ ಕ್ಯಾನ್ಸರ್ಗಳ ದೀರ್ಘಕಾಲೀನ ಅಪಾಯಗಳು ಕಡಿಮೆಯಾಗುತ್ತಲೇ ಇರುತ್ತವೆ.
