ವಿಶ್ವಕಪ್ ಗೆಲುವಿನ ಸಂಭ್ರಮ: ಕೋಚ್ ಅಮೋಲ್ ಮುಜುಂದಾರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಾಯಕಿ ಹರ್ಮನ್‌ಪ್ರೀತ್ ಕೌರ್; ಫೋಟೋ ವೈರಲ್

ಮುಂಬೈ: ಏಕದಿನ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಟೀಂ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಕೋಚ್ ಅಮೋಲ್ ಮುಜುಂದಾರ್(Amol Muzumdar) ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾರಿದು ಅಮೋಲ್ ಮುಜುಂದಾರ್?
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದ ಇವರು ಮಹಾರಾಷ್ಟ್ರದವರು. 1994 ರಲ್ಲಿ ಮುಂಬೈ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಅವರು ಮೊದಲ ಪಂದ್ಯದಲ್ಲೇ ಗರಿಷ್ಟ 260 ರನ್ ಹೊಡೆದಿದ್ದರು. ʼಹೊಸ ತೆಂಡೂಲ್ಕರ್ ಎಂದು ಅಡ್ಡ ಹೆಸರು ಪಡೆದ ಅವರನ್ನು ಭಾರತೀಯ ಕ್ರಿಕೆಟ್‌ನಲ್ಲಿ ಮುಂದೆ ದೊಡ್ಡ ಆಟಗಾರನಾಗುತ್ತಾನೆ ಎಂದೇ ವಿಶ್ಲೇಷಿಸಲಾಗಿತ್ತು
21 ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡಿದ್ದ ಇವರು 48.13 ಸರಾಸರಿಯಲ್ಲಿ 11,167 ರನ್ ಹೊಡೆದಿದ್ದಾರೆ. ಕೆಲವು ಕಾರಣಗಳಿಂದಾಗಿ ಅವರಿಗೆ ಭಾರತಕ್ಕಾಗಿ ಆಡಲು ಒಂದೇ ಒಂದು ಅವಕಾಶ ಸಿಗಲಿಲ್ಲ.
ಕ್ರಿಕೆಟಿಗೆ 2012 ರಲ್ಲಿ ಗುಡ್‌ಬೈ ಹೇಳಿದ ನಂತರ ಕ್ರಿಕೆಟ್ ಕೋಚಿಂಗ್ ಮಾಡಲು ಆರಂಭಿಸಿದರು. ಮಹಿಳಾ ಕ್ರಿಕೆಟ್ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದ ಕಾರಣ ಅಕ್ಟೋಬರ್ 2023 ರಲ್ಲಿ ಬಿಸಿಸಿಐ ಅಮೋಲ್ ಮುಜುಂದಾರ್ ಅವರನ್ನು ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿತು. ಈ ನೇಮಕ ಪರಿಣಾಮ ಬೀರಿದ್ದು 8 ವರ್ಷಗಳ ನಂತರ ಭಾರತ ಫೈನಲ್ ಪ್ರವೇಶಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.