Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಶ್ವವಿಜೇತ ಭಾರತ: ನ್ಯೂಜಿಲೆಂಡ್ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ

Spread the love

ಅಹ್ಮದಾಬಾದ್: ನ್ಯೂಝಿಲೆಂಡ್ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿ, ಮೂರನೇ ಬಾರಿಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಫೈನಲ್ನಲ್ಲಿ ಹಲವು ಇತಿಹಾಸಗಳನ್ನು ಸೃಷ್ಟಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರವಿವಾರ ಸೂರ್ಯಕುಮಾ‌ರ್ ಯಾದವ್ ನೇತೃತ್ವದ ತಂಡ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟಾಗ ಸಂಜು ಸ್ಯಾಮ್ಪನ್ ಹಾಗೂ ಅಭಿಷೇಕ್ ಶರ್ಮಾ ಅರ್ಧಶತಕಗಳೊಂದಿಗೆ ಪರಿಪೂರ್ಣ ಆರಂಭ ಒದಗಿಸಿಕೊಟ್ಟರು. ಬಳಿಕ ಕೇವಲ 15 ರನ್ ಗಳಿಗೆ ನಾಲ್ಕು ವಿಕೆಟ್ ಕಿತ್ತ ಜಸ್ಟೀತ್ ಬೂಮ್ರಾ ಎದುರಾಳಿಗಳನ್ನು ನಿಬ್ಬೆರಗುಗೊಳಿಸಿದರು.

ನ್ಯೂಝಿಲೆಂಡ್ ವಿರುದ್ಧ 96 ರನ್ ಅಂತರದ ಭಾರೀ ಜಯ ಸಾಧಿಸುವ ಮೂಲಕ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ದಾಖಲೆಯನ್ನು ಭಾರತ ಸೃಷ್ಟಿಸಿತು. ಅಂತೆಯೇ ತವರಿನಲ್ಲಿ ಟ್ರೋಫಿ ಜಯಿಸಿದ ಮೊಟ್ಟಮೊದಲ ತಂಡ ಎಂಬ ಹೆಗ್ಗಳಿಕೆಯೂ ಭಾರತದ್ದಾಯಿತು. ಅಂತೆಯೇ 2024ರಲ್ಲೂ ಪ್ರಶಸ್ತಿ ಜಯಿಸಿದ್ದ ಭಾರತ ಟ್ರೋಫಿ ಉಳಿಸಿಕೊಂಡ ಮೊಟ್ಟಮೊದಲ ತಂಡ ಎನಿಸಿಕೊಂಡಿತು.
ಈ ಐತಿಹಾಸಿಕ ಜಯದ ಸಂಭ್ರಮದಲ್ಲಿ ಪ್ರತಿಕ್ರಿಯಿಸಿದ ನಾಯಕ ಸೂರ್ಯಕುಮಾರ್ ಯಾದವ್, ವೇಗದ ಬೌಲರ್ ಜಸ್ಟೀತ್ ಬೂಮ್ರಾ ಅವರನ್ನು “ರಾಷ್ಟ್ರದ ಖಜಾನೆ” ಎಂದರು.

“ಸ್ವಲ್ಪಮಟ್ಟಿಗೆ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ನನ್ನ ಭಾವನೆಯಾಗಿತ್ತು. ಆದರೆ ಇಂದಿನ ಫಲಿತಾಂಶದ ಬಗ್ಗೆ ಅತೀವ ಸಂತಸ ಇದೆ. ಇದು ಸುಧೀರ್ಘ ಪಯಣ. 2024ರ ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐ ಕಡೆಯಿಂದ ಜಯ್ ಶಾ, ರೋಹಿತ್ ಶರ್ಮಾ ನಂಬಿಕೆ ಇರಿಸಿ, ಅದ್ಭುತ ತಂಡದ ನಾಯಕತ್ವದ ಹೊಣೆ ವಹಿಸಿದರು. ಅದಾದ ಬಳಿಕ ಸುಧೀರ್ಘ ಪಯಣ; ಇದೀಗ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮತ್ತೆ ಕಪ್ ಗೆದ್ದದ್ದು ವಿಶೇಷ ಅನುಭವ. ನಿರಂತರ ಎರಡು ವರ್ಷ ಕಾಲ ನಾವು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದೇವೆ. ನಿಜವಾಗಿಯೂ ಅದ್ಭುತ” ಎಂದು ಸೂರ್ಯಕುಮಾರ್ ಯಾದವ್ ಬಣ್ಣಿಸಿದರು.
ವಿಶ್ವಕಪ್ ಫೈನಲ್ ನಲ್ಲಿ ಸ್ಯಾಟ್ಸನ್ (46 ಎಸೆತಗಳಲ್ಲಿ 89), ಅಭಿಷೇಕ್ ಶರ್ಮಾ (21 ಎಸೆತಗಳಲ್ಲಿ 52) ಮತ್ತು ಇಶಾನ್ ಕಿಶನ್ (25 ಎಸೆತಗಳಲ್ಲಿ 54) ಹೀಗೆ ಮೂವರು ಅರ್ಧಶತಕ ಗಳಿಸುವ ಮೂಲಕ 255 ರನ್ ಗಳನ್ನು ಭಾರತ ಕಲೆಹಾಕಿತು. ಇದು ವಿಶ್ವಕಪ್ ಟಿ20 ಇತಿಹಾಸದಲ್ಲೇ ಫೈನಲ್ ನಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎನಿಸಿದೆ.


Spread the love
Share:

administrator

Leave a Reply

Your email address will not be published. Required fields are marked *