Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಡಿಶಾದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಕೊಂದು ಸುಟ್ಟ ಮಹಿಳೆಯರು; 10 ಜನರ ಬಂಧನ

Spread the love

How to Become a Crime Scene Investigator (CSI): Education and Training

ಭುವನೇಶ್ವರ -ಲೈಂಗಿಕ ದೌರ್ಜನ್ಯ ನಡುತ್ತಿದ್ದ ವ್ಯಕ್ತಿಯನ್ನು ಮಹಿಳೆಯರ ಗುಂಪೊಂದು ದಾಳ ಮಾಡಿ ಕೊಂದು ಆತನ ದೇಹವನ್ನು ಸುಟ್ಟುಹಾಕಿದ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ.

ಸುಮಾರು 60 ವರ್ಷದ ವ್ಯಕ್ತಿಯಿಂದ ದೀರ್ಘಕಾಲದವರೆಗೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಹೇಳಲಾದ ಮಹಿಳೆಯರ ಗುಂಪು ಭೀಕರವಾಗಿ ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ಎಂಟು ಮಹಿಳೆಯರು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ.

ಮೃತನ ಕುಟುಂಬವು ನಾಪತ್ತೆ ದೂರು ದಾಖಲಿಸಿದ ನಂತರ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾಗ ಕೊಲೆ ಬೆಳಗಿಗೆ ಬಂದಿದೆ. ಆತನನ್ನು ಕಡಿದು ಕೊಂದು, ನಂತರ ಆತನ ದೇಹವನ್ನು ಸುಟ್ಟುಹಾಕಲಾಗಿದೆ ಎಂದು ಮೋಹನ ಪೊಲೀಸ್ ಠಾಣಾಧಿಕಾರಿ ಬಸಂತ್ ಸೇಥಿ ತಿಳಿಸಿದ್ದಾರೆ.ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಅರಣ್ಯ ಪ್ರದೇಶದ ಬಳಿಯ ಗುಡ್ಡದಿಂದ ಮೃತನ ಮೂಳೆಗಳು ಮತ್ತು ಚಿತಾಭಸ್ಮವನ್ನು ವಶಪಡಿಸಿಕೊಳ್ಳಲಾಗಿದೆ.

ಗ್ರಾಮದ ಪಂಚಯ್ತಿ ಸದಸ್ಯ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಜೂನ್ 3 ರ ರಾತ್ರಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ 52 ವರ್ಷದ ವಿಧವೆಯ ಮೇಲೆ ಮೃತ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ಹೇಳಿದರು.

ಇದೇ ರೀತಿ ಈ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕೆಲವು ಮಹಿಳೆಯರು ನಂತರ ಸಭೆ ನಡೆಸಿ ಆತನನ್ನು ಕೊಲ್ಲಲು ನಿರ್ಧರಿಸಿದರು. ಆರೋಪಿ ನಾಲ್ಕು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಮಡಿದ್ದ ಅಂದಿನಿಂದ ಗ್ರಾಮದ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅವರು ಹೇಳಿದರು. ಬಂಧಿತ ಮಹಿಳೆಯರಲ್ಲಿ ಕನಿಷ್ಠ ಆರು ಮಂದಿ ತಾವು ಆ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಸೇಥಿ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *