ಗ್ರಾಹಕರಂತೆ ಬಂದು ಬೆಲೆಬಾಳುವ ಒಳ ಉಡುಪುಗಳನ್ನು ಕದ್ದು ಪರಾರಿಯಾದ ಮಹಿಳಾ ಗ್ಯಾಂಗ್.

ಒಳ ಉಡುಪುಗಳು ದುಬಾರಿ ಆದರೆ ಕದ್ದು ಬಳಸುವಷ್ಟು ಅಲ್ಲ, ಬೇರೆಲ್ಲಾ ಡ್ರೆಸ್ಗಳಂತೆ ಕೆಲ ಒಳ ಉಡುಪುಗಳ ದರ ಅವುಗಳ ಬ್ರಾಂಡ್ಗಳನ್ನು ಆಧರಿಸಿ ಲಕ್ಷದವರೆಗೂ ಇದೆ. ವಿಕ್ಟೋರಿಯಾ ಸಿಕ್ರೇಟ್ನಂತಹ ದುಬಾರಿ ಮಹಿಳೆಯರ ಒಳ ಉಡುಪು(ಬ್ರಾ)ಗಳ ಆರಂಭಿಕ ದರವೇ 5 ಸಾವಿರ ರೂಪಾಯಿ ಮೇಲ್ಪಟ್ಟಿದೆ. ಹೀಗಾಗಿ ಒಳ ಉಡುಪುಗಳನ್ನು ಮಾತ್ರ ಮಾರಾಟ ಮಾಡುವ ಅಂಗಡಿಗಳಿವೆ. ಹೀಗೆ ಒಳ ಉಡುಪು ಮಾರಾಟ ಮಾಡುವ ಅಂಗಡಿಗೆ ಬಂದ ಮೂವರು ಮಹಿಳೆಯರು ಅಲ್ಲಿಂದ ಸುಮಾರು 10,000 ರೂಪಾಯಿ ಮೌಲ್ಯದ ಒಳ ಉಡುಪುಗಳನ್ನು ಕದ್ದುಕೊಂಡು ಹೋದಂತಹ ಘಟನೆ ನಡೆದಿದೆ. ಈ ನಾಚಿಕೆಗೇಡಿನ ಘಟನೆಯು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ವಾರಾಣಾಸಿಯಲ್ಲಿ. ಇಲ್ಲಿನ ಲಾಹುರಬೀರ್ನಲ್ಲಿರುವ ಗೋರಾಸ್ ಕಟ್ಟಡದ ಕೆಳಗೆ ಇಂಡಿಯನ್ ಬ್ಯಾಂಕ್ ಬಳಿ ಇರುವ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಸುದೀಪ್ ಸಿಂಗ್ ಎಂಬುವವರಿಗೆ ಸೇರಿದ ಅಂಗಡಿಯಿಂದ ಮೂವರು ಮಹಿಳೆಯರು ಸುಮಾರು 10,000 ರೂಪಾಯಿ ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ. ಫೆಬ್ರವರಿ 24ರಂದು ಸಂಜೆ 7:00 ರಿಂದ 7:10 ರ ನಡುವೆ ಘಟನೆ ನಡೆದಿರುವುದು ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯದಿಂದ ತಿಳಿದು ಬಂದಿದೆ.ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಸುದೀಪ್ ಸಿಂಗ್ ಚೇತ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳ್ಳತನದ ಬಗ್ಗೆ ವಿವರ ನೀಡಿದ್ದಾರೆ. ತಾನು ಅಂಗಡಿಯಲ್ಲಿ ಅಂಗಡಿ ನೋಡುತ್ತಿದ್ದಾಗ ಮೂವರು ಅಪರಿಚಿತ ಮಹಿಳೆಯರು ಅಂಗಡಿಗೆ ನುಗ್ಗಿ ವಸ್ತುಗಳನ್ನು ಕದ್ದಿದ್ದಾರೆ ಎಂದು ಅವರು ಹೇಳಿದ್ದಾರೆ. ಇಡೀ ಘಟನೆ ಅವರ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ನಾನು ಮೂರು ವೀಡಿಯೊ ದೃಶ್ಯಗಳನ್ನು ಸಾಕ್ಷಿಯಾಗಿ ಪೊಲೀಸರಿಗೆ ನೀಡಿದ್ದೇನೆ. ಅದರಲ್ಲಿ ಮೂವರು ಮಹಿಳೆಯರ ಕೃತ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಎಂದು ಸುದೀಪ್ ಸಿಂಗ್ ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.ವಿಷಯದ ಗಂಭೀರತೆಯನ್ನು ಮನಗಂಡ ಸ್ಥಳೀಯ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಠಾಣೆಯ ಉಸ್ತುವಾರಿ ಹೇಳಿದ್ದಾರೆ. ಪೊಲೀಸರು ಆರೋಪಿ ಮಹಿಳೆಯರನ್ನು ಗುರುತಿಸಿದ್ದಾರೆ ಮತ್ತು ಶೀಘ್ರದಲ್ಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ. ಒಳ ಉಡುಪು ಕದಿಯುವಷ್ಟು ದುಬಾರಿ ಅಲ್ಲ, ಆದರೂ ಮಹಿಳೆಯರು ಈ ರೀತಿ ನಾಚಿಕೆಗೇಡಿನ ಕೆಲಸ ಮಾಡುವ ಮೂಲಕ ತಮ್ಮ ಖ್ಯಾತಿ ಗಳಿಸುತ್ತಿದ್ದಾರೆ ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ.