ತೋಡಿಯಲ್ಲಿ ಮಹಿಳೆ ಶವ ಪತ್ತೆ: ಪತಿಯ ಸಹೋದರ ನಾಪತ್ತೆ ಹಿನ್ನೆಲೆ ಶಂಕೆಗೆ ದಾರಿ

ಪುತ್ತೂರು : ಮಹಿಳೆಯೊಬ್ಬರ ಶವ ತೋಡಿನಲ್ಲಿ ಪತ್ತೆಯಾದ ಘಟನೆ ಕೆದಿಲ ಕಾಂತಕೋಡಿ ಎಂಬಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕಾಂತಕೋಡಿಯ ರಾಮಣ್ಣ ಗೌಡ ಅವರ ಪತ್ನಿ ಮಮತಾ (35) ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಬಟ್ಟೆ ಒಗೆಯಲೆಂದು ತೋಡಿಗೆ ತೆರಳಿದ್ದರು. ಅಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ಇನ್ನು ತಿಳಿದು ಬಂದಿಲ್ಲ. ಈ ನಡುವೆ ಮೃತ ಮಹಿಳೆಯ ಪತಿಯ ಸಹೋದರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು. ನಾಪತ್ತೆಯಾಗಿದ್ದಾರೆ. ಈ ಹಿನ್ನಲೆ ಇದೀಗ ಮಮತಾ ಅವರ ಸಾವಿನ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
