Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಕೊಲೆ ಪ್ರಕರಣ: ಅಳಿಯ ದಂತ ವೈದ್ಯನೇ ಮಾಡಿದ ಅಪರಾಧ ಬೆಳಕಿಗೆ

Spread the love

ತುಮಕೂರು: ಜಿಲ್ಲೆಯ ಕೊರಟಗೆರೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ ತುಂಡರಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಲಕ್ಷ್ಮೀದೇವಮ್ಮಳ ಅಳಿಯನೇ ಈ ಕೃತ್ಯ ನಡೆಸಿರೋದು ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ದಂತ ವೈದ್ಯನಾಗಿರುವ ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ಮೃತ ಲಕ್ಷ್ಮೀದೇವಮ್ಮ ತನ್ನ ಮಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುತಿದ್ದಳು ಎಂಬ ಆರೋಪ ಇದೆ. ಇದನ್ನು ಸಹಿಸದ ಅಳಿಯ ಡಾ.ರಾಮಚಂದ್ರ ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಕೋಳಾಲದಲ್ಲಿ ಇರುವ ಸ್ನೇಹಿತ ಸತೀಶ್ ಎಂಬಾತನ ಫಾರ್ಮ್ ಹೌಸ್‌ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ ಎಸೆಯಲಾಗಿತ್ತು. ಬಳಿಕ ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು.

ಅತ್ತೆಯ ಕೊಲೆ ಆದರೂ ಅಳಿಯ ಸ್ಥಳದಲ್ಲಿ ಇಲ್ಲದಿರುವುದಕ್ಕೆ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *