Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾವನ್ನು ಕಂಡು ಬಂದವಳಿಂದ ಸಾವಿನ ಲೋಕದ ಅನುಭವದ ಬಗ್ಗೆ ಹೇಳಿಕೆ

Spread the love

ಅಮೇರಿಕಾ:ಬ್ರಿಯಾನ್ನಾ ಲಾಫೆರ್ಟಿ ಎಂಬ ಯುವತಿ ಸಾವಿನ ನಂತರದ ಅನುಭವ ಹೇಗಿರುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾಳೆ. ಇದಕ್ಕೆ ಕಾರಣ ಈಕೆಗಿದ್ದ ಅಪರೂಪದ ನರಸಂಬಂಧಿತ ಖಾಯಿಲೆ. ಈ ಖಾಯಿಲೆಂದ ಮೃತಪಟ್ಟಿದ್ದ ಬ್ರಿಯಾನ್ನಾ ಸತ್ತೇ ಹೋದಳೆಂದು ಘೋಷಿಸಲಾಗಿತ್ತು.

ಆದರೆ ಎಂಟು ನಿಮಿಷಗಳ ಬಳಿಕ ಆಕೆ ಮತ್ತೆ ಜೀವಂತಳಾಗಿ ವೈದ್ಯಕೀಯ ಲೋಕವನ್ನೇ ದಂಗುಪಡಿಸಿದ್ದಾಳೆ.

ಈ ಘಟನೆ ಅಮೆರಿಕದ ಕೊಲೊರಾಡೋನಲ್ಲಿ ನಡೆದಿದೆ. 33 ವರ್ಷದ ಈಕೆ ತೀವ್ರ ಅಸ್ವಸ್ಥಳಾಗಿ ಪ್ರಜ್ಞಾಹೀನಳಾಗಿದ್ದಳು. ವೈದ್ಯರು ಈಕೆ ಸತ್ತಿದ್ದಾಳೆಂದು ಘೋಷಿಸಿದ್ದರು. ಆದರೆ ಆಕೆ ತಾನೊಂದು ಸಮಯದ ಪರಿವೆಯೇ ಇಲ್ಲದ ಲೋಕದೊಳಗೆ ಹೋಗಿದ್ದೆ. ಅಲ್ಲಿ ನನ್ನ ದೇಹ ತೇಲಿದಂಥಾ ಅನುಭವವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾಳೆ. ಅಲ್ಲಿ ಸಂಪೂರ್ಣ ಕತ್ತಲೆ ತುಂಬಿತ್ತು. ಆದರೆ ಆ ಕತ್ತಲೆಯಲ್ಲೂ ನೀನು ಇದಕ್ಕೆ ಸಿದ್ದವಾಗಿದ್ದೀಯಾ ಎಂದು ದನಿಯೊಂದು ಪ್ರಶ್ನಿಸಿದಂತೆ ಅನುಭವವಾಯಿತು. ಆಗ ಇದ್ದಕ್ಕಿದ್ದಂತೆಯೇ ನನ್ನ ಆತ್ಮವು ದೇಹದಿಂದ ಬಿಡುಗಡೆಗೊಂಡಂತಾ ಅನುಭವವಾಯಿತು ಎಂದು ಬ್ರಿಯಾನ್ನಾ ಹೇಳಿಕೊಂಡಿದ್ದಾಳೆ.

ಆ ಅನುಭವದ ಬಳಿಕ ಭೂಮಿಯನ್ನು ತೊರೆದ ಬಳಿಕ ನನ್ನ ಜೀವನ ಅಂತ್ಯವಾಗಬಹುದೆಂದು ನಾನು ಎಣಿಸಿದ್ದು ಸುಳ್ಳಾಯ್ತು. ಅಲ್ಲಿಯೂ ಕೂಡ ಒಂದು ಲೋಕವಿತ್ತು. ಅಲ್ಲಿ ವಾಸ್ತವವಾದ , ಬೌದ್ಧಿಕವಾದ ನಮಗಿಂತ ಉನ್ನತ ಮಟ್ಟದ ಜೀವಿಗಳು ನಮ್ಮನ್ನು ಗಮನಿಸುತ್ತಿದ್ದರು. ನಿರ್ವಾಜ್ಯ ಪ್ರೇಮದಿಂದ ನಮಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಬ್ರಿಯಾನ್ನಾ ಹೇಳಿದ್ದಾಳೆ.

Share:

administrator

Leave a Reply

Your email address will not be published. Required fields are marked *