ರೀಲ್ಸ್ ಮಾಡುತ್ತಿರುವಾಗ ಗಂಗೆಯ ಪಾಲಾದ ಮಹಿಳೆ: “ಅಮ್ಮಾ”ಎಂದು ಕೂಗಿ ನಿಂತ ಮಗಳು

ಉತ್ತರಾಖಂಡ್: ರೀಲ್ಸ್ ಹುಚ್ಚಿಗೆ ಮಹಿಳೆಯೊಬ್ಬರು ಗಂಗೆಯ ಪಾಲಾದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಏಪ್ರಿಲ್ 16 ರಂದು ಉತ್ತರಾಖಂಡದ ಉತ್ತರಕಾಶಿ ಬಳಿಯ ಗಂಗಾನದಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ನೇಪಾಳದ ಕುಟುಂಬವೊಂದಕ್ಕೆ ಮೋಜಿನ ರಜೆ ದುರಂತವಾಗಿ ಪರಿವರ್ತಿಸಿದೆ. ಗಂಗಾನದಿಯ ಉಪನದಿ ಭಾಗಿರಥಿ ನದಿಯ ತಟದ ಉತ್ತರಕಾಶಿಯಲ್ಲಿ ಮಹಿಳೆ ತನ್ನ ಮಗಳ ಕೈಯಲ್ಲಿ ಮೊಬೈಲ್ ಕೊಟ್ಟು ರೀಲ್ಸ್ ಮಾಡಲು ನದಿಗೆ ಇಳಿದಿದ್ದಾಳೆ. ಈ ವೇಳೆ ಆಯತಪ್ಪಿ ಸೀದಾ ನದಿಗೆ ಮಹಿಳೆ ಬಿದ್ದಿದ್ದು, ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಈ ವೇಳೆ ಮಗಳು ಅಮ್ಮಾ ಎಂದು ಕೂಗಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮಹಿಳೆಯ ಪತ್ತೆಗಾಗಿ ವಿಪತ್ತು ನಿರ್ವಹಣಾ ತಂಡದವರು ಹುಡುಕಾಟ ನಡೆಸಿದ್ದಾರೆ.