‘ನಾನು ಇನ್ಮುಂದೆ ಬರೋದಿಲ್ಲ’ ಎಂದು ರಾಜೀನಾಮೆ ಪತ್ರ ನೀಡಿದ ಮಹಿಳೆ

ಕಾರ್ಪೊರೇಟ್ ಕೆಲಸದಂತೆ, ಮನೆಕೆಲಸಗಾರ ರಾಜೀನಾಮೆ ಪತ್ರವನ್ನು ನೀಡುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಇದು ಹಾಸ್ಯಮಯವಾಗಿ ತೋರಬಹುದು. ಆದರೆ, ಹರಿಯಾಣದ ಗುರುಗ್ರಾಮದಲ್ಲಿ ಮನೆಕೆಲಸದ ಮಹಿಳೆಯೊಬ್ಬರು ರಾಜೀನಾಮೆ ಪತ್ರ (Resignation Letter) ನೀಡಿದ್ದಾರೆ.

ಇಂದು ನಾನು ಈ ಮಾತುಗಳನ್ನು ಹೇಳಲು ಸಾಧ್ಯವಾಗದಿದ್ದರೆ, ನನಗೆ ಎಂದಿಗೂ ಸಾಧ್ಯವಾಗದಿರಬಹುದು. ಆದ್ದರಿಂದ, ಬಹಳ ಕಷ್ಟದಿಂದ ನನ್ನ ಹೃದಯವನ್ನು ಗಟ್ಟಿ ಮಾಡಿಕೊಂಡು ನಾನು ಹೇಳುತ್ತಿದ್ದೇನೆ. ನಾನು, ಇನ್ನು ಮುಂದೆ ಬರುವುದಿಲ್ಲ ಎಂದು ಬರೆದಿದ್ದಾಳೆ. ಅಷ್ಟೇ ಅಲ್ಲದೆ, ಮನೆಯ ಕೆಲಸದಾಕೆ ಅವನಿಗೆ ತನಗಿಂತ ಉತ್ತಮ ವ್ಯಕ್ತಿ ಸಿಗಬೇಕು, ಸೋಫಾದ ಹಿಂದೆ ಕಸವನ್ನು ಮುಚ್ಚಿಡದವನು ಸಿಗಬೇಕು ಎಂದು ಹೇಳಿದ್ದಾಳೆ. ಮನೆ ಮಾಲೀಕನಿಗೆ ಈ ಪತ್ರವನ್ನು ಓದಿ ನಂಬಲು ಕಷ್ಟವಾಗಿದೆ. ಮೊದಲಿಗೆ ಅಚ್ಚರಿ ಎನಿಸಿದರೂ ಆಮೇಲೆ ನಗು ತರಿಸಿದೆ.
ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ತಕ್ಷಣ, ಅದು ನೆಟ್ಟಿಗರ ಗಮನ ಸೆಳೆಯಿತು. ಅವರಿಗೆ ಈ ಹಾಸ್ಯಾಸ್ಪದ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಒಬ್ಬ ಬಳಕೆದಾರರು, ನಾನು ಇಲ್ಲಿಯವರೆಗೆ ಅನಾರೋಗ್ಯ ರಜೆ ಪತ್ರವನ್ನು ಸಹ ಬರೆದಿಲ್ಲ ಎಂದು ಹೇಳಿದರು. ಸರ್, ನಾನು ಯಾವಾಗ ಹಾಗೆ ಹೇಳಿದೆ? ಎಂದು ಮರುದಿನ ಬೆಳಗ್ಗೆ ಕೆಲಸದಾಕೆ ಹೀಗೆ ಹೇಳಬಹುದು ಎಂದು ಮತ್ತೊಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ.
ನಿಮ್ಮ ನೆರೆಹೊರೆಯವರು ಈ ಪತ್ರವನ್ನು ಬರೆದು ಕಳುಹಿಸಿದ್ದಾರೆ ಎಂದು ಮಗದೊಬ್ಬರು ಕಿಚಾಯಿಸಿದ್ದಾರೆ. ಕೆಲವು ಬಳಕೆದಾರರು ಚಾಟ್ ಜಿಪಿಟಿ ಮಹಿಮೆ ಎಂದಿದ್ದಾರೆ. ಇನ್ನು ಕೆಲವರು, ಇದು ಪ್ರಾಂಟೊ ಅವರ ಬುದ್ಧಿವಂತ ಜಾಹೀರಾತು ಅಭಿಯಾನ ಎಂದು ಹೇಳಿದ್ದಾರೆ. ಇಡೀ ಘಟನೆಯನ್ನು ಸ್ಕ್ರಿಪ್ಟ್ ಎಂದು ಉಲ್ಲೇಖಿಸಿದ್ದಾರೆ.