ಮನೆಯ ಅಡುಗೆಗೆ ಗುಡ್‌ಬೈ ಹೇಳಿದ ಮಹಿಳೆ: ವರ್ಷಗಳಿಂದ ಹೋಟೆಲ್ ತಿಂಡಿ ಜೀವನಶೈಲಿ

ಇಂಗ್ಲೆಂಡ್ : ಹಲವರಿಗೆ ಇಷ್ಟವಿರಲಿ, ಇಲ್ಲದಿರಲಿ ತಮ್ಮ ಮನೆಯಲ್ಲಿ ತಯಾರಿಸಿದ ಊಟವೇ ನಿತ್ಯದ ಪ್ರಸಾದ. ಆದರೆ 26 ವರ್ಷದ ಸ್ಯಾಫ್ರನ್ ಬೋಸ್ವೆಲ್ ಎಂಬ ಮಹಿಳೆ ತಾನು ದಶಕದ ಹಿಂದೆಯೇ ಅಡುಗೆ ಮಾಡುವುದನ್ನು ಬಿಟ್ಟವರು ಮತ್ತೆ ಕಿಚನ್ ಕಡೆ ಹಿಂತಿರುಗಿ ನೋಡಿಲ್ಲವಂತೆ.

ಇಂಗ್ಲೆಂಡ್ ನ ಕಂಟೆಂಟ್ ಕ್ರಿಯೇಟರ್ ಸ್ಯಾಫ್ರನ್, ಆಗಾಗ್ಗೆ ತನ್ನ ದೈನಂದಿನ ಜೀವನದ ಗ್ಲಿಂಪ್‌ಗಳನ್ನು ತನ್ನ ಫಾಲೋವರ್ಸ್ ಜೊತೆಗೆ ಹಂಚಿಕೊಳ್ಳುತ್ತಾಳೆ. ಆದ್ರೆ ಇದುವರೆಗೂ ಒಂದೇ ಒಂದು ದಿನವೂ ಈಕೆ ಮನೆಯಲ್ಲಿ ಅಡುಗೆ ಮಾಡಿಲ್ಲವಂತೆ. ಈಕೆಯ ಪ್ರಕಾರ ಅಡುಗೆ ಮಾಡುವುದೆಂದರೆ ಸಮಯ ವ್ಯರ್ಥವಂತೆ.
ಹೀಗಾಗಿ ಈಕೆ ತಿಂಗಳ ಪೂರ್ತಿ ಯಾವಾಗಲೂ ಬೇರೆ ಬೇರೆ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಂದ ಊಟ-ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕಾಗಿ ಸಂಪೂರ್ಣವಾಗಿ ಅವಲಂಬಿಸಿದ್ದಾಳೆ ಎನ್ನಲಾಗಿದೆ. ಇದನ್ನು ಕಂಡ ನೆಟ್ಟಿಗರು ಅಯ್ಯೋ ದೇವರೇ, ಹೀಗೂ ಇರ್ತರಾ ಅಂತ ಆಶ್ಚರ್ಯ ಪಟ್ಟಿದ್ದಾರೆ.
