Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಂಡ, ಮಗಳನ್ನು ತಿರಸ್ಕರಿಸಿ ಸೋದರಳಿಯನ್ನು ಮದುವೆಯಾದ ಮಹಿಳೆ

Spread the love

ಬಿಹಾರ: ಪತಿ, ಮಗಳನ್ನು ತಿರಸ್ಕರಿಸಿ ಅವರ ಎದುರೇ ಮಹಿಳೆಯೊಬ್ಬಳ ತನ್ನ ಸೋದರಳಿಯನನ್ನು ಮದುವೆಯಾದ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿರುವುದು ವರದಿಯಾಗಿದೆ.

ಜಮುಯಿ ಜಿಲ್ಲೆಯ ಸಿಖೇರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿವಾಹವಾದ ಮಹಿಳೆಯನ್ನು ಆಯುಷಿ ಕುಮಾರಿ ಎಂದು ಗುರುತಿಸಲಾಗಿದೆ.

ಶುಕ್ರವಾರ (ಜೂನ್ 20) ಸಂಜೆ ವಿವಾಹ ನಡೆದಿದೆ ಎಂದು ವರದಿ ತಿಳಿಸಿದೆ.

ಆಯುಷಿ 2021ರಲ್ಲಿ ಅದೇ ಗ್ರಾಮದಲ್ಲಿ ವಿಶಾಲ್ ದುಬೆ ಅವರನ್ನು ವಿವಾಹವಾಗಿದ್ದರು. ಅವರಿಗೆ ಮೂರು ವರ್ಷದ ಮಗಳು ಕೂಡ ಇದ್ದಾಳೆ. ಆದರೆ ಆಯುಷಿ ಕದ್ದುಮುಚ್ಚಿ ಅದೇ ಗ್ರಾಮದ ಸಚಿನ್‌ ದುಬೆ ಎನ್ನುವವನ ಜತೆ ಸಂಬಂಧವನ್ನು ಇಟ್ಟುಕೊಂಡಿದ್ದಳು. ಸಚಿನ್‌ ದುಬೆ ಆಯುಷಿ ಅವರ ಸಂಬಂಧಿಯಾಗಿದ್ದಾನೆ. (ಸೋದರಳಿಯ).

ಸಚಿನ್‌ – ಆಯುಷಿ ಸೋಶಿಯಲ್‌ ಮೀಡಿಯಾದಲ್ಲಿ ಪರಿಚಿತರಾಗಿದ್ದರು. ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿದ್ದು, ಪ್ರೀತಿಗೆ ತಿರುಗಿದೆ. ಆಗಾಗ ಯಾರಿಗೂ ಗೊತ್ತಾಗದ ರೀತಿಯಲ್ಲಿ ಭೇಟಿ ಆಗುತ್ತಿದ್ದರು.

ಜೂನ್‌ 15 ರಂದು ಸಚಿನ್‌ – ಆಯುಷಿ ಇಬ್ಬರು ಓಡಿ ಹೋಗಿದ್ದಾರೆ. ಇತ್ತ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ವಿಶಾಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ನಂತ್ರ ಆಯುಷಿ ಜಮುಯಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಗಳನ್ನು ತನ್ನ ಜತೆ ಇರಿಸಲು ಆಯುಷಿ ನಿರಾಕರಿಸಿದ್ದಾಳೆ ಎಂದು ವರದಿ ತಿಳಿಸಿದೆ.

ಆಯುಷಿ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹಳ್ಳಿಯ ದೇವಾಲಯದಲ್ಲಿ ಸಚಿನ್ ಅವರನ್ನು ವಿವಾಹವಾದರು. ಈ ವೇಳೆ ಅವರ ಮಗಳು ಹಾಗೂ ಪತಿಯೂ ಅಲ್ಲಿದ್ದರು.

‘ನಾವು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಈಗ ನಮ್ಮ ಸಂಬಂಧಕ್ಕೆ ಒಂದು ಹೆಸರಿದೆ. ನಾನು ಆಯುಷಿಯನ್ನು ಶಾಶ್ವತವಾಗಿ ಸಂತೋಷವಾಗಿರಿಸುತ್ತೇನೆ’ ಎಂದು ವಿಶಾಲ್ ಹೇಳಿದ್ದಾರೆ.

‘ಇದು ಅವಳನ್ನು ಸಂತೋಷಪಡಿಸುವುದಾದರೆ, ನಾನು ಅವಳನ್ನು ತಡೆಯುವುದಿಲ್ಲ. ಆದರೆ ಅವಳು ನನ್ನ ವಿರುದ್ಧ ಮಾಡಿದ ಆರೋಪಗಳು ಸುಳ್ಳು. ವಾಸ್ತವವಾಗಿ, ಅವಳು ನನ್ನ ತಾಯಿ ಮತ್ತು ಮಗಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಳು. ಇಂದಿನಿಂದ, ಅವಳು ಸಚಿನ್ ಜವಾಬ್ದಾರಿ” ಎಂದು ವಿಶಾಲ್‌ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *