Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಕ್ಷಣೆ ನೀಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ, ಲಕ್ಷಾಂತರ ರೂ. ವಂಚನೆ:ಪೊಲೀಸ್ ಚಾಲಕ ಎಸ್ಕೇಪ್!

Spread the love

ಬೆಂಗಳೂರು: ಸಮಾಜದಲ್ಲಿ ರಕ್ಷಣೆ ನೀಡಬೇಕಾದ ವ್ಯಕ್ತಿಯೇ ಅತ್ಯಾಚಾರ ನಡೆಸಿದ್ದಾರೆ. ಈತ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕಿದ್ದ ವ್ಯಕ್ತಿ. ನೊಂದ ಮಹಿಳೆಯೊಬ್ಬರು ರಕ್ಷಣೆ ಕೊಡುವಂತೆ ಕರೆ ಮಾಡಿದರೆ ಆಕೆಯನ್ನೇ ಪುಸಲಾಯಿಸಿ ಅವಳಿಂದ ಹಣವನ್ನು ಪೀಕಿದ್ದಲ್ಲದೇ, ಅತ್ಯಾಚಾರ ನಡೆಸಿದ್ದಾನೆ ಎಂದು ನೊಂದ ಮಹಿಳೆ ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ.

ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸಪ್ಪ ಎಸ್ಕೇಪ್ ಆಗಿದ್ದಾನೆ.

ಪುಟ್ಟಸ್ವಾಮಿ ಎನ್ನುವ ವ್ಯಕ್ತಿ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಎಂಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ 112 ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈ ಡಿಎಆರ್ ಪೊಲೀಸ್ ಅಪ್ಪ ನಿಗೆ ಕಳೆದ ತಿಂಗಳ ಹಿಂದೆ ಮಹಿಳೆಯೊಬ್ಬರು 112 ಗೆ ಕರೆ ಮಾಡಿ ಜಗಳದ ವಿಷಯಕ್ಕೆ ರಕ್ಷಣೆ ನೀಡುವಂತೆ ಕೋರುತ್ತಾರೆ. ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಈ ಪೊಲೀಸ್ ಮಹಿಳೆಯ ನಂಬರ್ ಇಟ್ಟುಕೊಂಡು ಸಲಿಗೆಯನ್ನು ಬೆಳೆಸಿಕೊಳ್ಳುತ್ತಾನೆ. ಆಕೆಯಿಂದ ಲಕ್ಷ ಲಕ್ಷ ಹಣವನ್ನು ಪೀಕಿ, ಆಕೆಯ ಮೇಲೆ ನಾಲ್ಕು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಈಗ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿ ಡಿಎಆರ್ ಪೊಲೀಸ್ ಪುಟ್ಟಸ್ವಾಮಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ‌ಈ ಕುರಿತಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆ ಕಾನೂನು‌ ಕಾಪಾಡಬೇಕಿದ್ದ ಪೊಲೀಸ್ ಅಧಿಕಾರಿಯೇ, ರಕ್ಷಣೆ ನೀಡುವ ನೆಪದಲ್ಲಿ ಅತ್ಯಾಚಾರ ನಡೆಸಿ, ಆಕೆಯಿಂದ ಲಕ್ಷ ಲಕ್ಷ ಹಣವನ್ನು ವಂಚನೆ ಮಾಡಿ ಈಗ ಎಸ್ಕೇಪ್ ಆಗಿದ್ದಾನೆ.


Spread the love
Share:

administrator

Leave a Reply

Your email address will not be published. Required fields are marked *