ಹೋಟೆಲ್ ಮಹಡಿಯಿಂದ ಜಿಗಿದು, ಗ್ಯಾಂಗ್ ರೇಪ್ ನಿಂದ ಪಾರಾದ ಮಹಿಳೆ..!

ಕಲ್ಲಿಕೋಟೆ: ತನ್ನ ಮೇಲಾಗುತ್ತಿದ್ದ ಗ್ಯಾಂಗ್ ರೇಪ್ ಯತ್ನವನ್ನುವಿರೋಧಿಸಿ ಹೋಟೆಲೊಂದರಲ್ಲಿ ಮಹಿಳಾ ಉದ್ಯೋಗಿ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಜಿಗಿದ ಘಟನೆ ಆಘಾತಕಾರಿ ನಡೆದಿದೆ. ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಉದ್ಯಮಿಯೊಬ್ಬರನ್ನು ತ್ರಿಶೂರ್ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ದೇವದಾಸ್ ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುನ್ನಂಕುಲಂನಲ್ಲಿ ಮುಕ್ಕಂ ಪೊಲೀಸರು ಬಂಧಿಸಿ ಬುಧವಾರ ಬೆಳಗ್ಗೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಪೊಲೀಸರ ಪ್ರಕಾರ, ಜಿಲ್ಲೆಯಲ್ಲಿ ಹೋಟೆಲ್ ನಡೆಸುತ್ತಿದ್ದ ದೇವದಾಸ್, ಶನಿವಾರ ರಾತ್ರಿ ಇಲ್ಲಿನ ಬಾಡಿಗೆ ಮನೆಯಲ್ಲಿದ್ದ ಮಹಿಳಾ ಉದ್ಯೋಗಿಯ ಕೊಠಡಿಗೆ ನುಗ್ಗಿದ ಆರೋಪ ಹೊತ್ತಿದ್ದಾನೆ. ಆಪಾದಿತ ಲೈಂಗಿಕ ದೌರ್ಜನ್ಯದ ಯತ್ನದ ಸಮಯದಲ್ಲಿ ಆತನ ಜತೆಗೆ ಸಹಚರರಾದ ರಿಯಾಸ್ ಮತ್ತು ಸುರೇಶ್ ಇದ್ದಿದ್ದು ಸದ್ಯ ತಲೆಮರೆಸಿಕೊಂಡಿದ್ದು, ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮಾಂಧರಿಂದ ಪಾರಾಗಲು ಕಟ್ಟಡದ ಮೊದಲ ಮಹಡಿಯಿಂದ ಜಿಗಿದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಮಹಿಳೆ ಪೊಲೀಸರೊಂದಿಗೆ ತನಗಾದ ಅನುಭವ ಹಂಚಿಕೊಂಡ ಬಳಿಕ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತಾನು ಫೋನ್‌ನಲ್ಲಿ ವಿಡಿಯೋ ಗೇಮ್ ನೋಡುತ್ತಿದ್ದಾಗ ಮೂವರು ಅವಳ ಕೋಣೆಗೆ ನುಗ್ಗಿದರು ಮತ್ತು ಆಕ್ರಮಣದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಜಿಗಿಯುವುದನ್ನು ಬಿಟ್ಟು ಆಕೆಗೆ ಬೇರೆ ದಾರಿ ಇರಲಿಲ್ಲ.
ಕೆಲ ಬಿದ್ದು ಬೊಬ್ಬಿಟ್ಟಾಗ ನೆರೆಹೊರೆಯವರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸಂತ್ರಸ್ತೆಯ ಸೊಂಟ ಮತ್ತು ಕೈಯ ಮೂಳೆ ಮುರಿತವಾಗಿದ್ದು, ಸದ್ಯಕ್ಕೆ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.