18 ತಿಂಗಳ ಮದುವೆ ವಿಚ್ಚೆದನಕ್ಕೆ 12 ಕೋಟಿ ರೂ,ಬಿಎಂಡಬ್ಲ್ಯೂ ಕೇಳಿದ ಮಹಿಳೆ

ಅರ್ಹ ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಸಂಪಾದಿಸಬೇಕು. ಜೀವನಾಂಶ ರೂಪದಲ್ಲಿ ಗಂಡನಿಂದ ಮಧ್ಯಂತರ ಜೀವನಾಂಶವನ್ನು ಪಡೆಯಬಾರದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ

ಮದುವೆಯಾದ 18 ತಿಂಗಳೊಳಗೆ ಪತಿಯಿಂದ ಬೇರ್ಪಟ್ಟ ನಂತರ ಮಹಿಳೆಯೊಬ್ಬಳು ಮುಂಬೈನಲ್ಲಿ ಮನೆ ಮತ್ತು ಜೀವನಾಂಶವಾಗಿ 12 ಕೋಟಿ ರೂ.ಗೆ ಬೇಡಿಕೆ ಇಟ್ಟ ವೇಳೆ, ಸಿಜೆಐ ಗವಾಯಿ ಇದ್ದ ಪೀಠ, ಆಕೆಯನ್ನು ತರಾಟೆಗೆ ತಗೆದುಕೊಂಡು, ನೀವು ವಿದ್ಯಾವಂತರು ಇದ್ದೀರಾ, ನೀವು ನಿಮಗಾಗಿ ಸಂಪಾದಿಸಬೇಕು. ಜೀವನಾಂಶ ಕೇಳಬಾರದು ಎಂದು ಹೇಳಿದ್ದಾರೆ.
‘ನೀವು ಐಟಿ ವ್ಯಕ್ತಿ. ನೀವು ಎಂಬಿಎ ಮಾಡಿದ್ದೀರಿ. ನಿಮಗೆ ಬೇಡಿಕೆ ಇದೆ.ಬೆಂಗಳೂರು, ಹೈದರಾಬಾದ್… ಬೇರೆ ಎಲ್ಲದರೂ ನೀವು ಯಾಕೆ ಕೆಲಸ ಮಾಡಬಾರದು?’ ಎಂದು ಕೇಳಿದರು.
ನೀವು ಮದುವೆಯಾಗಿ ಕೇವಲ 18 ತಿಂಗಳ ಕಾಲ ಮಾತ್ರವಾಗಿದೆ. ಈಗ ನೀವು ಬಿಎಂಡಬ್ಲ್ಯೂ ಕೂಡ ಬಯಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ತನ್ನ ಬೇಡಿಕೆಯನ್ನು ಮಹಿಳೆ ಸಮರ್ಥಿಸಿಕೊಳ್ಳುತ್ತಾ.. ನನ್ನ ವಿಚ್ಛೇದಿತ ಗಂಡ ‘ಬಹಳ ಶ್ರೀಮಂತ’ ಎಂದು ಹೀಗಾಗಿ, ಜೀವನಾಂಶ ಕೇಳಿದ್ದೇನೆ ಎಂದು ಬಾರ್ & ಬೆಂಜ್ ವರದಿ ಮಾಡಿದೆ.
ಈ ವರ್ಷ ಮಾರ್ಚ್‌ನಲ್ಲಿ ಇದೇ ರೀತಿಯ ಪ್ರಕರಣವೊಂದರಲ್ಲಿ, ದೆಹಲಿ ಹೈಕೋರ್ಟ್, ‘ಗಳಿಸುವ ಸಾಮರ್ಥ್ಯವಿರುವ ಅರ್ಹ ಮಹಿಳೆಯರು ತಮ್ಮ ಗಂಡಂದಿರಿಂದ ಮಧ್ಯಂತರ ಜೀವನಾಂಶವನ್ನು ಪಡೆಯಬಾರದು’ ಎಂದು ಹೇಳಿದೆ.
