ಸೊಶಿಯಲ್ ಮೀಡಿಯಾ ಮೂಲಕ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಮಹಿಳೆಯ ಬಂಧನ

ಬೆಂಗಳೂರು: ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಶಂಕಿತ ಮಹಿಳೆ ಪರ್ವಿನ್ ಎಂದು ಗುರುತಿಸಲಾಗಿದ್ದು, ಭಯೋತ್ಪಾದಕರ ಜೊತೆ ನಿರಂತ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ.
ಬೆಂಗಳೂರಿನ ಹೆಬ್ಬಾಳದ ಮನೋರಮಾ ಪಾಳ್ಯದಲ್ಲಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ ಪೊಲೀಸರು ಶಂಕಿತ ಮಹಿಳೆಯನ್ನ ಬಂಧಿಸಲಾಗಿದೆ.
ಸೋಷಿಯಲ್ ಮೀಡಿಯಾ ಮೂಲಕ ಉಗ್ರರ ಸಂಪರ್ಕ:
ಬಂಧಿತ ಮಹಿಳೆ ಪರ್ವಿನ್ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮೂಲಕ ಶಂಕಿತ ಉಗ್ರರ ಜೊತೆ ಸಂಪರ್ಕದಲ್ಲಿದ್ದು, ಮೆಸೇಜ್, ಕರೆಗಳ ಮೂಲಕವೂ ಮಾತನಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗುಜರಾತ್ ಪೊಲೀಸರು ಆಕೆಯ ಚಟುವಟಿಕೆಗಳನ್ನು ದೀರ್ಘಕಾಲದಿಂದ ಮೇಲ್ವಿಚಾರಣೆ ಮಾಡುತ್ತಿದ್ದರು. ವಿಚಾರಣೆ ಬಳಿಕ ಆಕೆಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.
ಕಳೆದ ವಾರ ಗುಜರಾತ್ ಎಟಿಎಸ್ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್-ಖೈದಾ ಜೊತೆ ಸಂಪರ್ಕ ಹೊಂದಿದ್ದ ಜೀಶನ್, ಫರ್ದೀನ್, ಸೈಫುಲ್ಲಾ ಮತ್ತು ಫಾರಿಕ್ ಎಂಬ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಈ ಬಂಧನದ ಹಿನ್ನೆಲೆಯಲ್ಲಿ ಪರ್ವಿನ್ ಕೂಡ ಉಗ್ರ ಚಟುವಟಿಕೆಗಳ ಜಾಲದ ಭಾಗವಾಗಿರುವ ಶಂಕೆ ವ್ಯಕ್ತವಾಗಿದೆ. ಗುಜರಾತ್ ಎಟಿಎಸ್ ಡಿಐಜಿ ಸುನಿಲ್ ಜೋಶ್ ಪ್ರಕಾರ, ಬಂಧಿತ ಶಂಕಿತರು ದೀರ್ಘಕಾಲದಿಂದ ಸಕ್ರಿಯವಾಗಿದ್ದರು. ಈ ಕಾರ್ಯಾಚರಣೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ