Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮದುವೆಯಾದ ಒಂದು ತಿಂಗಳಲ್ಲೇ 112 ಜನರಿಗೆ ಸ್ಕ್ಯಾಂ ಮಾಡಿದ ನವವಧುವರ

Spread the love

ಕೊಯಮತ್ತೂರು: ಮದುವೆಯಾಗಿ ಇನ್ನೂ ತಿಂಗಳು ಕೂಡ ಕಳೆದಿಲ್ಲ. ಅಷ್ಟರೊಳಗೆ ಬರೋಬ್ಬರಿ 112 ಮಂದಿ ಕಣ್ಣಿಗೆ ಮಣ್ಣೆರಚಿದ ಜೋಡಿ ಕಡೆಗೂ ಖಾಕಿ ಬಲೆಗೆ ಬಿದ್ದಿದೆ.

ನವದಂಪತಿಯ ಮೋಸದ ಜಾಲಕ್ಕೆ ಸಿಲುಕಿದ 112 ಜನರು ಹಣ ಕಳೆದುಕೊಂಡವರೇ ಆಗಿದ್ದಾರೆ. ಪ್ರಕರಣ ಬೇಧಿಸಿದ ಕೊಯಮತ್ತೂರಿನ ಕೌಂಡಂಪಾಲಯಂ ಪೊಲೀಸರು, ಸುಗುಣಪುರಂ ಹಳೆ ಚರ್ಚ್ ಸ್ಟ್ರೀಟ್‌ನ ನಿವಾಸಿ ಮೊಹಮ್ಮದ್ ರಿಜ್ವಾನ್ (21) ಮತ್ತು ಆತನ ಪತ್ನಿ ಶರ್ಮಿಳಾರನ್ನು (20) ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ.

ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಲಕ್ಷಗಟ್ಟಲೇ ಹಣವನ್ನು ಗೂಗಲ್ ಪೇ/ ಫೋನ್​ ಪೇ ಸ್ಕ್ಯಾನರ್ ಸ್ಕ್ರೀನ್​ಶಾಟ್​ ಬಳಸಿಕೊಂಡು ಜನರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಒಂದೂವರೆ ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾದ ಈ ಜೋಡಿ, ಒಟ್ಟಿಗೆ ಕಳ್ಳತನದ ಕೆಲಸದಲ್ಲಿ ತೊಡಗಿದ್ದರು. ಟ್ಯಾಕ್ಸಿ ಚಾಲಕನಾಗಿದ್ದ ರಿಜ್ವಾನ್, ಮದುವೆಯಯಾದ ಬಳಿಕ ತನ್ನ ಹೆಂಡತಿಯೊಂದಿಗೆ ದಿಲ್​ದಾರ್​ ಜೀವನ ನಡೆಸುವ ಸಲುವಾಗಿ ಅಡ್ಡದಾರಿ ಹುಡುಕಿದ್ದ. ಇಬ್ಬರೂ ಸೇರಿಕೊಂಡು ಅಂಗಡಿಗಳಿಗೆ ಹೋಗಿ ಯಾವುದೋ ವಸ್ತು ಖರೀದಿಸುವ ನೆಪದಲ್ಲಿ ಹಣ ಕಳಿಸಿ, ಇದು ಬೇಡ ಹಣ ವಾಪಾಸ್​ ಹಾಕಿಬಿಡಿ ಎಂದು ಹಣ ಪೀಕುವ ಕೆಲಸ ಮಾಡಿದ್ದಾರೆ. ಇದು ಒಂದೆರೆಡು ಕಡೆ ಮಾತ್ರವಲ್ಲದೇ ಹಲವೆಡೆ ಇದೇ ರೀತಿಯಲ್ಲಿ ಮೋಸ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಇದೇ ರೀತಿ ದಂಪತಿಗಳ ಮೋಸದಾಟಕ್ಕೆ ತುತ್ತಾದ ಶಕ್ತಿವೇಲ್ ಎಂಬುವರು, ನಗರ ಪೊಲೀಸರಿಗೆ ದೂರು ನೀಡಿ ಮಾಹಿತಿ ಹಂಚಿಕೊಂಡಿದ್ದರು. ತನಿಖೆಯ ಸಮಯದಲ್ಲಿ, ತಾವು ಇನ್ನೂ ಅನೇಕರಿಗೆ ಮೋಸ ಮಾಡಿರುವುದಾಗಿ ದಂಪತಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಸೈಬರ್ ಕ್ರೈಮ್ ಪೊಲೀಸರ ಸಹಾಯದಿಂದ ಇಬ್ಬರನ್ನು ಬಂಧಿಸಿ, ಅವರ ಮೊಬೈಲ್‌ಗಳನ್ನು ಪರಿಶೀಲಿಸಲಾಗಿದೆ. ಪತ್ನಿಯ ಜತೆಗೂಡಿ ಬರೋಬ್ಬರಿ 112 ಜನರಿಗೆ ವಂಚಿಸಿರುವ ರಿಜ್ವಾನಿ, ಇಲ್ಲಿಯವರೆಗೆ ಸುಮಾರು 2 ಲಕ್ಷ ರೂ.ಗೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *