ರಾನ್ಸಮ್‌ವೇರ್ ದಾಳಿಯಿಂದ ಮುಚ್ಚಲಾಗುತ್ತದಾ 158 ವರ್ಷದ ಯುಕೆ ಕಂಪನಿ?

ಲಂಡನ್ : 158 ವರ್ಷ ಹಳೆಯ ಯುಕೆ (UK) ಸಾರಿಗೆ ಕಂಪನಿಯಾದ ಕೆಎನ್‌ಪಿ ಲಾಜಿಸ್ಟಿಕ್ಸ್‌ಗೆ ರಾನ್ಸಮ್‌ವೇರ್ (ransomware) ಶಾಕ್ ಕೊಟ್ಟಿದೆ. ಇದರಿಂದ 700 ಜನರ ಉದ್ಯೋಗ (Job) ಕಡಿತ ಮಾಡಲಾಗಿದೆ.

ಹ್ಯಾಕರ್‌ಗಳು ಕೆಎನ್‌ಪಿ ಲಾಜಿಸ್ಟಿಕ್ಸ್ನ ಉದ್ಯೋಗಿಗಳ ಪಾಸ್‌ವರ್ಡ್ಗಳನ್ನು ಊಹೆ ಮಾಡುವ ಮೂಲಕ ಕಂಪನಿಯ ಸರ್ವರ್ಗೆ ಎಂಟ್ರಿ ಕೊಟ್ಟಿದ್ದಾರೆ.
ನಂತರ ಡೇಟಾವನ್ನು (Data) ಎನ್‌ಕ್ರಿಪ್ಟ್ ಮಾಡಿ ಇಡೀ ಕಂಪನಿಯ ಎಲ್ಲಾ ಸರ್ವರ್ಗಳು ಲಾಕ್ ಆಗಿವೆ.
ಕೆಎನ್‌ಪಿ ಲಾಜಿಸ್ಟಿಕ್ಸ್ ಸಾರಿಗೆ ಕಂಪನಿಯ ಅಡಿಯಲ್ಲಿ 500ಕ್ಕೂ ಲಾರಿಗಳು ಕಾಐರ್ ನಿರ್ವಹಿಸುತ್ತವೆ. ಈ ಕಂಪನಿ ಐಟಿ ಮಾನದಂಡಗಳನ್ನು ಪಾಲಿಸುತ್ತಿದ್ದರೂ ಮತ್ತು ಸೈಬರ್ ಅಟ್ಯಾಕ್ ಇನ್ಶುರೆನ್ಸ್ ಹೊಂದಿದ್ದರೂ, ಅಕಿರಾ ಎಂಬ ಗ್ಯಾಂಗ್ ಬಳಸಿದ ರಾನ್ಸಮ್‌ವೇರ್ ದಾಳಿಗೊಳಗಾಗಿದೆ.
ನೀವು ಇದನ್ನು ಓದುತ್ತಿದ್ದರೆ, ನಿಮ್ಮ ಕಂಪನಿಯ ಬಹುತೇಕ ಎಲ್ಲಾ ವ್ಯವಸ್ಥೆ ಸತ್ತಿದೆ ಎಂದರ್ಥ. ನಿಮ್ಮ ಎಲ್ಲಾ ಕಣ್ಣೀರಿಗೆ ನೀವೇ ಜವಬ್ದಾರರು’ ಎಂದು ಹ್ಯಾಕರ್ಗಳು ಸಂದೇಶ ರವಾನಿಸಿದ್ದಾರೆ.
ಹ್ಯಾಕರ್ಗಳು ಬರೋಬ್ಬರಿ 5 ಮಿಲಿಯನ್ ಪೌಂಡ್ ಮೊತ್ತ ಕೇಳಿದ್ರಂತೆ. ದುರದೃಷ್ಟವಶಾತ್, ಕೆಎನ್‌ಪಿ ಲಾಜಿಸ್ಟಿಕ್ಸ್ ಕಂಪನಿ ಹಣ ಪಾವತಿಸುವಷ್ಟು ಶಕ್ತವಾಗಿರಲಿಲ್ಲ. ಆದ್ದರಿಂದ ಕಂಪನಿಯನ್ನೇ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ.
UK ಮೂಲದ ಹಲವು ಕಂಪನಿಗಳು ಇದೇ ರೀತಿಯ ಸೈಬರ್ ದಾಳಿಗೆ ಬಲಿಯಾಗಿವೆ. ಹ್ಯಾಕರ್ಗಳು ಬರೋಬ್ಬರಿ 65 ಲಕ್ಷಕ್ಕೂ ಅಧಿಕ ಜನರ ಡೇಟಾವನ್ನು ಕದ್ದಿದ್ದಾರಂತೆ.
ನೀವೂ ಸಹ ಸುಲಭವಾಗಿ ಸಿಗಬಲ್ಲ ಪಾಸ್ವರ್ಡ್ಗಳನ್ನು ಇಡಲೇಬೇಡಿ. ಸಾಧ್ಯವಾದಷ್ಟು ಕಠಿಣ ಪಾಸ್ವರ್ಡ್ಗಳನ್ನು ಇಡಿ. ಇಲ್ಲದಿದ್ದರೆ ಹ್ಯಾಕರ್ಗಳು ದಾಳಿ ಮಾಡಬಹುದು.
