ಬ್ಯಾನ್ ಆಗತ್ತಾ ₹500 ರ ನೋಟು? ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ‘ದೇಶದಲ್ಲಿ ಶೀಘ್ರದಲ್ಲಿಯೇ 500 ರು. ಮುಖಬೆಲೆಯ ನೋಟುಗಳು ರದ್ದಾಗಲಿದೆ’ ಎಂಬ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ‘ಯಾವುದೇ ಕಾರಣಕ್ಕೂ 500 ರು. ನೋಟು ರದ್ದತಿಯಾಗುವುದಿಲ್ಲ. ನೋಟು ಚಾಲ್ತಿಯಲ್ಲಿಯೇ ಇರಲಿದೆ’ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧೀನದ ಪಿಐಬಿ ಫ್ಯಾಕ್ಟ್ ಚೆಕ್ ಸತ್ಯಾಸತ್ಯತೆ ಪರೀಕ್ಷೆ ನಡೆಸಿದೆ. ‘ವಾಟ್ಸಾಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನೋಟು ರದ್ದತಿಯ ಕುರಿತು ಹರಿದಾಡುತ್ತಿರುವ ಸಂದೇಶ ಸಂಪೂರ್ಣ ಸುಳ್ಳು. ಆರ್‌ಬಿಐ ಅಥವಾ ಕೇಂದ್ರ ಸರ್ಕಾರವಾಗಲಿ ಅಂತಹ ಯಾವುದೇ ಆದೇಶ/ ಸೂಚನೆಗಳನ್ನು ನೀಡಿಲ್ಲ. ಜನರು ಇಂತಹ ಸುಳ್ಳು ಸುದ್ದಿ ಕುರಿತು ಗಮನ ಕೊಡಬಾರದು’ ಎಂದು ತಿಳಿಸಿದೆ.

