ಪತ್ನಿಯ ಅನೈತಿಕ ಸಂಬಂಧ: ತಂದೆಯ ಕೊಲೆ, ತಾಯಿಯ ದುಷ್ಕೃತ್ಯವನ್ನು ಪೊಲೀಸರ ಬಳಿ ಹೇಳಿದ ಮಗಳು

ಹರಿಯಾಣ : ಪ್ರಿಯಕರ ಜೊತೆಗೂಡಿ ಗಂಡನನ್ನೇ ಕೊಂದ ಪತ್ನಿ ನಂತರ ತನ್ನ ಮೇಲೆ ಅತ್ಯಾಚಾರ ಎಸಗಿ ಗಂಡನನ್ನು ಕೊಂದಿದ್ದೇ ಈತ ಎಂದು ಪ್ರಿಯಕರನ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದು, ಮಗಳೇ ತಾಯಿಯ ಬಂಡವಾಳ ಹೊರಹಾಕಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಹರಿಯಾಣ ಗುರ್ಗಾಂವ್ ನಲ್ಲಿ ನೆರೆಮನೆಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗ ಮಗಳು ನೋಡಿದ್ದಾಳೆ.
ಗಂಡನಿಗೆ ಗೊತ್ತಾದರೆ ಕಷ್ಟ ಎಂದು ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆ ಮಾಡಿದ್ದಾಳೆ. ಆದರೆ ಪೊಲೀಸರು ವಿಚಾರಣೆಗೆ ಬಂದಾಗ ಪ್ರಿಯಕರನೇ ಗಂಡನ ಕೊಂದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಉಲ್ಟಾ ಹೊಡೆದು ಪ್ರಿಯಕರನನ್ನು ಜೈಲಿಗೆ ಕಳುಹಿಸಲು ಯತ್ನಿಸಿದ್ದಾಳೆ.
ಬಿಹಾರದ ನಾವಡಾ ಜಿಲ್ಲೆಯ 37 ವರ್ಷದ ವಿಕ್ರಮ್ ಪತ್ನಿ ಸೋನಿ ದೇವಿ (35) ಹಾಗೂ ಮಗಳ ಜೊತೆ ಕೆಲಸ ಹುಡುಕಿಕೊಂಡು ಬಂದು ಹರಿಯಾಣದ ಗುರ್ವಾಂವ್ ನ ಡುಂಡೆಹ್ರಾದ ಉದ್ಯೋಗ್ ವಿಹಾರದಲ್ಲಿ ವಾಸವಿದ್ದರು.
ಜುಲೈ ೨೮ರಂದು ಪೊಲೀಸ್ ಠಾಣೆಗೆ ಆಗಮಿಸಿದ ಸೋನಿ ದೇವಿ ನನ್ನ ಪತಿ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದಳು. ಮೂರು ದಿನಗಳ ನಂತರ ಮತ್ತೆ ಠಾಣೆಗೆ ಬಂದು ರವೀಂದ್ರ (34) ಎಂಬಾತ ನನ್ನ ಮೇಲೆ ಗಂಡ ಮನೆಯಲ್ಲಿ ಇಲ್ಲದೇ ಇದ್ದಾಗ ಮಾರ್ಚ್ ತಿಂಗಳಲ್ಲಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅತ್ಯಾಚಾರ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಹೊರಗೆ ಬಾಯಿ ಬಿಟ್ಟರೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮತ್ತೊಂದು ದೂರು ನೀಡಿದ್ದಳು.
ರವೀಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಗೆ ನೀಡಿದ್ದು, ವಿಕ್ರಂನನ್ನು ಕೊಲೆ ಮಾಡಿದ್ದು ನಾನೆ. ಆತನ ಪತ್ನಿ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಒಪ್ಪಿಕೊಂಡಿದ್ದಾನೆ ಎಂದು ಸ್ಥಳೀಯ ಎಸಿಪಿ ವಿವರಿಸಿದ್ದಾರೆ.
ಸೋನಿ ಹಾಗೂ ರವೀಂದ್ರ ಒಂದು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದು, ತಮ್ಮದೇ ಅನೈತಿಕ ಸಂಬಂಧದ ವೀಡಿಯೋ ಮಾಡಿದ್ದರು.
ವಿಕ್ರಂ ಪುತ್ರಿ ಆಕಸ್ಮಿಕವಾಗಿ ರವೀಂದ್ರ ಮೊಬೈಲ್ ನಲ್ಲಿ ತಾಯಿಯ ಅಶ್ಲೀಲ ವೀಡಿಯೋ ನೋಡಿ ತಂದೆಯ ಬಳಿ ಹೇಳಿದ್ದಾಳೆ. ಈ ವಿಷಯ ಗಂಡನಿಗೆ ಗೊತ್ತಾಗಿದೆ ಎಂದು ತಿಳಿದ ಕೂಡಲೇ ಇಬ್ಬರೂ ಯೂಟ್ಯೂಬ್ ನಲ್ಲಿ ಕೊಲೆ ಮಾಡಿ ಶವವನ್ನು ಗೊತ್ತಾಗದಂತೆ ಸಾಗಿಸುವುದು ಹೇಗೆ ಎಂದು ಹಲವಾರು ರೀತಿಯ ಮಾದರಿಗಳನ್ನು ನೋಡಿದ್ದಾರೆ.
ಜುಲೈ 26ರಂದು ಕೆಲಸದಿಂದ ಬಂದ ವಿಕ್ರಮ್ ನಲ್ಲಿ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರವೀಂದ್ರ ಹಾಗೂ ಅತನ ಸ್ನೇಹಿತರು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಯೋಜನೆಯಂತೆ ರವೀಂದ್ರ ತನ್ನ ಜಾರ್ಸಾ ಜಿಲ್ಲೆಯ ಮೊಹಮದ್ ನಗರದಲ್ಲಿ ಗೋಶಾಲೆ ನಡೆಸುತ್ತಿದ್ದ ಸಂಬಂಧಿ ಮನೆಗೆ ಹೋಗಿದ್ದು, ಅಲ್ಲಿ ಶವವನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಹೂತು ಹಾಕಿದ್ದಾರೆ. ಶವ ಹೂತು ಹಾಕಲು ಅಂಕಲ್ ನೆರವು ನೀಡಿದ್ದಾರೆ.
ಕೊಲೆ ನಡೆದು ಶವ ಹೂತು ಹಾಕುವವರೆಗೂ ಸೋನಿ, ರವೀಂದ್ರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಜುಲೈ 28ರಂದು ಗಂಡ ನಾಪತ್ತೆ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ಬೆನ್ನು ಹತ್ತಿದ ಪೊಲೀಸರು ಕೊಲೆಗೆ ಸಹಕರಿಸಿದ ಮನೀಷ್ (19), ಫರಿಯಾದ್ (20 ಅಂಕಲ್ ಸಂತ್ರಪಾಲ್ (60) ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಈ ವೇಳೆ ಪುತ್ರಿ ಈ ಎಲ್ಲಾ ಘಟನೆಗಳ ಹಿಂದೆ ತಾಯಿ ಇದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮತ್ತೊಮ್ಮೆ ವಿಚಾರಣೆ ನಡೆಸಿ ೫ ದಿನಗಳ ನಂತರ ಸೋನಿಯನ್ನು ಬಂಧಿಸಿದ್ದಾರೆ.
