Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

1.5 ಕೋಟಿಗೆ ಪತಿಯನ್ನು ಪ್ರೇಯಸಿಗೆ ‘ಮಾರಿದ’ ಹೆಂಡತಿ!

Spread the love

ಭೋಪಾಲ್: ಶ್ರೀ ದೇವಿ, ಅನಿಲ್ ಕಪೂರ್ ಮತ್ತು ಊರ್ಮಿಳಾ ಮಾತೋಂಡ್ಕರ್ ಅಭಿನಯದ 90 ರ ದಶಕದ ಪ್ರಸಿದ್ಧ ಚಲನಚಿತ್ರ ಜುದಾಯಿ ಸಿನಿಮಾವನ್ನು ನೀವು ನೋಡಿದ್ದೀರಾ? ಇದೇ ಸಿನಿಮಾದ ಕತೆಯನ್ನೇ ಹೋಲುವ ಘಟನೆಯೊಂದು ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಹೌದು ಇಲ್ಲಿ ನಿರಂತರ ಕೌಟುಂಬಿಕ ಕಲಹದ ನಂತರ ಇಬ್ಬರು ಹೆಣ್ಣು ಮಕ್ಕಳ ತಾಯಿ, ತನ್ನ ಗಂಡನ ಪ್ರೇಯಸಿಯಿಂದ 1.5 ಕೋಟಿ ಹಣ ಪಡೆದು ಗಂಡನನ್ನು ಆಕೆಗೆ ಒಪ್ಪಿಸಿದ ಘಟನೆ ನಡೆಯಿತು. ಈ ಸಿನಿಮಾದ ಕನ್ನಡ ರಿಮೇಕ್‌ನಲ್ಲಿ ಶಿವರಾಜ್‌ಕುಮಾರ್ ಮಾಲಾಶ್ರೀ, ರವೀಂದರ್ ಮನ್ ನಟಿಸಿದ್ದಾರೆ. ಮೂಲತಃ ಈ ಸಿನಿಮಾವೂ ತೆಲುಗಿನ 1994ರ ಶುಭಲಗ್ನಂ ಸಿನಿಮಾದಾಗಿದ್ದು, ಇದು ಮುಂದೆ ಭಾರತದ ಹಲವು ಭಾಷೆಗಳಿಗೆ ರಿಮೇಕ್ ಆಯ್ತು.


54 ವರ್ಷದ ಮಹಿಳೆಗೆ 42 ವರ್ಷದ ವಿವಾಹಿತನ ಮೇಲೆ ಪ್ರೀತಿ
ಹೌದು ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಿತ್ರ ಡಿವೋರ್ಸ್ ಪ್ರಕರಣವೊಂದು ನಡೆದಿದೆ. ಹಾಗಿದ್ರೆ ಏನಿದು ಪ್ರಕರಣ ನೋಡೋಣ ಬನ್ನಿ 54 ವರ್ಷದ ಕೇಂದ್ರ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಅದೇ ಇಲಾಖೆಯಲ್ಲಿದ್ದ ತಮಗಿಂತ ಕಿರಿಯ 42 ವರ್ಷದ ವಿವಾಹಿತ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದರು. ಕಾಲಾನಂತರದಲ್ಲಿ, ಅವರ ಸಂಬಂಧವು ಮತ್ತಷ್ಟು ಆತ್ಮೀಯತೆಗೆ ತಿರುಗಿದ್ದು, ಇದು ಈಗಾಗಲೇ ಮದುವೆಯಾಗಿದ್ದ 42 ವರ್ಷದ ವ್ಯಕ್ತಿಯ ದಾಂಪತ್ಯದ ಮೇಲೆ ತೀವ್ರ ಪರಿಣಾಮ ಬೀರಿತ್ತು.ನ್ಯಾಯಾಲಯದ ಮೆಟ್ಟಿಲೇರಿದ್ದ ಪುತ್ರಿ
ಆ 42 ವರ್ಷದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, 16 ಹಾಗೂ 12 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಅಪ್ಪನ ಈ ಪ್ರೇಮ ಸಂಬಂಧದಿಂದ ಪೋಷಕರ ದಾಂಪತ್ಯದಲ್ಲಿ ಉಂಟಾಗುತ್ತಿದ್ದ ಕಲಹದಿಂದ ಆ ಮಕ್ಕಳ ಮೇಲೂ ಅದು ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿತು. ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಹಿರಿಯ ಮಗಳು ಬಗ್ಗೆ ಯಾವುದಾದರು ಒಂದು ನಿರ್ಧಾರಕ್ಕೆ ಬರುವುದಕ್ಕೆ ಒತ್ತಾಯಿಸಿ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದಳು. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಭೋಪಾಲ್ ಕುಟುಂಬ ನ್ಯಾಯಾಲಯವೂ ಕೌನ್ಸೆಲಿಂಗ್ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ.ಗೆಳತಿ ಜೊತೆ ವಾಸಿಸುವುದಾಗಿ ಹೇಳಿದ ವ್ಯಕ್ತಿ
ವಿಚಾರಣೆಯ ಸಮಯದಲ್ಲಿ, ತಾನು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಿದ್ದೇನೆ. ಆದರೂ ತಾನು ಇನ್ನು ಮುಂದೆ ತನ್ನ ಗೆಳತಿಯೊಂದಿಗೆ ವಾಸಿಸಲು ಬಯಸುವುದಾಗಿ ಮತ್ತು ತನ್ನ ಹೆಂಡತಿಯೊಂದಿಗೆ ದಾಂಪತ್ಯ ಮುಂದುವರಿಸಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿದನು. ವರ್ಷಗಳ ಭಿನ್ನಾಭಿಪ್ರಾಯ ಮತ್ತು ವಿಫಲವಾದ ಮಾತುಕತೆಯಿಂದಾಗಿ 42 ವರ್ಷದ ವ್ಯಕ್ತಿಯ ಸಂಸಾರ ಅಂತಿಮವಾಗಿ ವಿಚ್ಛೇದನದತ್ತ ಸಾಗಿತು.

ಗಂಡನ ಬದಲು ಗರ್ಲ್‌ಫ್ರೆಂಡ್ ನೀಡಿದಳು ಪರಿಹಾರ
ವಿಚ್ಛೇದನದ ವೇಳೆ ಹೆಂಡತಿ ತನ್ನ ಮಕ್ಕಳ ಸುರಕ್ಷತೆಗಾಗಿ ಡ್ಯೂಪ್ಲೆಕ್ಸ್ ಫ್ಲಾಟ್ ಮತ್ತು 27 ಲಕ್ಷ ನಗದು ಬೇಡಿದಳು. ಆದರೆ ಪತಿಯ ಗೆಳತಿ ತಕ್ಷಣ ಈ ಇಡೀ ಬೇಡಿಕೆಗೆ ಒಪ್ಪಿಕೊಂಡರು ಮತ್ತು ಫ್ಲಾಟ್ ಮತ್ತು ನಗದು ನೀಡಲು ಒಪ್ಪಿಕೊಂಡರು. ಅದರ ಒಟ್ಟು ಮೊತ್ತ ₹1.5 ಕೋಟಿಯಷ್ಟಿತ್ತು. ನಿಜವಾಗಿ 42 ವರ್ಷದ ವ್ಯಕ್ತಿಯ ಪತ್ನಿ ತನ್ನ ಪತಿಯಿಂದ ವಿಚ್ಛೇದನದ ವೇಳೆ ಈ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಪತಿಯ ಗೆಳತಿಯೇ ಈ ಮೊತ್ತವನ್ನು ಪಾವತಿಸಲು ಒಪ್ಪಿದ್ದರಿಂದ ಪ್ರಕರಣ ಸುಖಾಂತ್ಯವಾಯ್ತು. ಎಲ್ಲರೂ ಕಾಗದಪತ್ರಗಳಿಗೆ ಸಹಿ ಹಾಕಿ ಇಬ್ಬರು ಇಷ್ಟದಂತೆ ದೂರಾದರು.

ಇಂತಹ ಗರ್ಲ್‌ಫ್ರೆಂಡ್ ಎಲ್ಲರಿಗೂ ಸಿಗಲಿ ಎಂದ ನೆಟ್ಟಿಗರು
ಈ ದುಬಾರಿ ವಿಚ್ಛೇದನ ಪ್ರಕರಣವೂ ಈಗ ಊರಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, 1997 ರ ಬಾಲಿವುಡ್ ಚಿತ್ರ ಜುದಾಯಿಗೆ ಹೋಲಿಸಲಾಗುತ್ತಿದೆ. ಈ ಚಿತ್ರದಲ್ಲಿ ಶ್ರೀ ದೇವಿ ತನ್ನ ಪತಿ ಅನಿಲ್ ಕಪೂರ್ ರನ್ನು ಮತ್ತೊಬ್ಬ ಮಹಿಳೆ ಊರ್ಮಿಳಾ ಮಾತೋಂಡ್ಕರ್‌ಗೆ ಹಣ ತುಂಬಿದ ದೊಡ್ಡ ಸೂಟ್‌ಕೇಸ್‌ಗಾಗಿ ನೀಡುವ ದೃಶ್ಯವಿದೆ.


Spread the love
Share:

administrator

Leave a Reply

Your email address will not be published. Required fields are marked *