ಕೋಳಿ ಸಾಂಬರ್ಗಾಗಿ ನಡೆದ ಜಗಳಕ್ಕೆ ಹೆಂಡತಿಯ ಸಾವು, ಪತಿಯ ಸುಳ್ಳು ನಾಪತ್ತೆ ದೂರು

ಲಕ್ನೋ: ಕೋಳಿ ಸಾಂಬರ್ಗಾಗಿ ಆರಂಭಗೊಂಡ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಉತ್ತರ ಪ್ರದೇಶದ ಅಮ್ರೋಹಾ ಎಂಬಲ್ಲಿ ಆಗಸ್ಟ್ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಸಂಬಂಧ ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. 10 ಹಿಂದೆಯಷ್ಟೇ ರೀನಾ (21) ಮತ್ತು ನಿಗಮ್ ಮದುವೆಯಾಗಿತ್ತು. ಆಗಸ್ಟ್ 21ರಂದು ನಿಗಮ್ ಮನೆಗೆ ಮದ್ಯ ಮತ್ತು ಕೋಳಿ ಮಾಂಸ ತೆಗೆದುಕೊಂಡು ಬಂದಿದ್ದನು. ನಿಗಮ್ ಬರೋಷ್ಟರಲ್ಲಿ ರೀನಾ ವೆಜ್ ಅಡುಗೆ ಮಾಡಿದ್ದಳು. ಚಿಕನ್ ಸಾಂಬಾರ್ ಮಾಡುವ ವಿಚಾರಕ್ಕೆ ರೀನಾ ಮತ್ತು ನಿಗಮ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದರಿಂದ ಕೋಪಗೊಂಡ ರೀನಾ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

ಪತ್ನಿ ಓಡಿ ಹೋಗಿದ್ದಾಳೆ ಎಂದಿದ್ದ ನಿಗಮ್!
ಜಗಳದ ವೇಳೆ ರೀನಾ ಮೇಲೆ ನಿಗಮ್ ಹಲ್ಲೆ ನಡೆಸಿದ್ದನು. ಇದರಿಂದ ಭಯಗೊಂಡ ನಿಗಮ್, ಸಂಬಂಧಿಕರ ಸಹಾಯದಿಂದ ರೀನಾ ಶವವನ್ನ ಗಂಗಾ ನದಿಗೆ ಎಸೆದಿದ್ದನು. ರೀನಾ ದೇಹವನ್ನು ಹಾಳೆಯಲ್ಲಿ ಸುತ್ತಿ, ಸುತ್ತಲೂ ಮಣ್ಣು ಹಚ್ಚಿ ಗಂಗಾನದಿಗೆ ಎಸೆಯಲಾಗಿತ್ತು. ಶವ ನದಿಗೆ ಎಸೆದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಪತ್ನಿ ರೀನಾ ಓಡಿ ಹೋಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದನು. ನಾಪತ್ತೆ ದೂರು ದಾಖಲಿಸುವ ಮೂಲಕ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದನು.
ಪೊಲೀಸರ ಮುಂದೆ ಗಂಡ ನಿಗಮ್ ಹೇಳಿದ್ದೇನು?
ದೂರು ದಾಖಲಿಸಿಕೊಂಡ ಪೊಲೀಸರಿಗೆ ನದಿಯಲ್ಲಿ ರೀನಾ ಬಟ್ಟೆ ಪತ್ತೆಯಾಗಿತ್ತು. ಇತ್ತ ರೀನಾ ಕುಟುಂಬಸ್ಥರು ಅಳಿಯ ನಿಗಮ್ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ನಿಗಮ್ ಚಲನವಲನ ಕಂಡು ಪೊಲೀಸರು ಮೊದಲು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ಜಗಳವಾಗಿದ್ದರಿಂದ ಪತ್ನಿ ನೇಣು ಹಾಕಿಕೊಂಡಳು. ಸಂಬಂಧಿಕರ ಸಹಾಯದಿಂದ ರೀನಾ ಶವ ನದಿಗೆ ಎಸೆದು ಎಂದು ಹೇಳಿದ್ದಾನೆ.
ನಿಗಮ್ ತಂದೆ-ತಾಯಿ ಎಸ್ಕೇಪ್
ನಿಗಮ್ ಹೇಳಿಕೆಯನ್ನಾಧರಿಸಿ ಪೊಲೀಸರು ಆರೋಪಿ ಸಂಬಂಧಿಕರಾದ ಜಿತೇಂದ್ರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನಿಗಮ್ ಪೋಷಕರಾದ ತಂದೆ ಸುರೇಶ್ ಮತ್ತು ತಾಯಿ ಕುಂಟಾ ನಾಪತ್ತೆಯಾಗಿದ್ದಾರೆ. ಇವರಿಬ್ಬರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ನಿಗಮ್ ನೀಡಿರುವ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು, ರೀನಾಳದ್ದು ಕೊ*ಲೆಯಾ ಅಥವಾ ಆತ್ಮ*ಹತ್ಯೆಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದಾರೆ. ಮತ್ತೊಂದೆಡೆ ರೀನಾ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.