ಸಗಣಿದೇ ವಿಭೂತಿ ಯಾಕೆ ಮಾಡ್ಕೋಬೇಕು ಅಂತಾನೆ ಆ ಸ್ವಾಮಿ! ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯ

ಹುಬ್ಬಳ್ಳಿ: ಜಾತಿ ಗಣತಿಯಲ್ಲಿ ಹಿಂದೂ ಅಂತ ಬರೆಸಿಕೊಳ್ಳಲು ಒಪ್ಪಿದರೆ ಹುಬ್ಬಳ್ಳಿಯ ವೀರಶೈವ ಲಿಂಗಾಯತ ಏಕತಾ ಸಮಾವೇಶದ ನಿರ್ಣಯವನ್ನು ಒಪ್ಪಿಕೊಳ್ಳುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಾರೋ ಆ ಸಭೆಗೆ ನಾನು ಹೋಗುವುದಿಲ್ಲ ಎಂದರು. ನೀವು ಹಿಂದೂ ಧರ್ಮವನ್ನು ವಿರೋಧಿಸುವುದಾದರೆ ಮೊದಲು ಕೇಸರಿ, ಖಾವಿ ಬಟ್ಟೆ ತೆಗೆದು ಬಿಸಾಡಿ. ಅದು ಸನಾತನ ಹಿಂದೂ ಧರ್ಮದ ಸಂಸ್ಕೃತಿ ಎಂದು ಯತ್ನಾಳ್ ಹೇಳಿದರು.

ನಿಜಗುಣಾನಂದ ಸ್ವಾಮೀಜಿಗೆ ಹಿಗ್ಗಾಮುಗ್ಗಾ ಬೈದ ಯತ್ನಾಳ್
‘ಇಸ್ಲಾಂ ಮತ್ತು ಲಿಂಗಾಯತ ಧರ್ಮಕ್ಕೆ ಬಹಳಷ್ಟು ಸಾಮ್ಯತೆಗಳಿವೆ ಎಂದು ನಿಜಗುಣಾನಂದ ಸ್ವಾಮಿ ಹೇಳುತ್ತಾರೆ. ಲಕ್ಷ್ಮೀ ಪೂಜೆ ಯಾಕೆ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ನೀವ್ಯಾಕೆ ವಿಭೂತಿ ಹಚ್ಚಿಕೊಳ್ಳಬೇಕು? ಗೋವಿನ ಸಗಣಿಯಿಂದಲೇ ಯಾಕೆ ವಿಭೂತಿ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ನಾಯಿದೋ ಹಂದಿದೋ ಮಾಡಿಕೊಂಡು ಹಚ್ಚಲಿ’ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು