“ಭಾರತಕ್ಕೆ ಅನುದಾನ ಯಾಕೆ? ಸಾಕಷ್ಟು ಹಣವಿದೆ!” – ಟ್ರಂಪ್ ಪ್ರಶ್ನೆ


ವಾಷಿಂಗ್ಟನ್: ಭಾರತ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ಅವರಿಗೆ ದುಡ್ಡು ನೀಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ.
ಫ್ಲೋರಿಡಾದಲ್ಲಿರುವ ತನ್ನ ನಿವಾಸ ಮಾರ್-ಎ-ಲಾಗೊದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ.
ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಒಂದು. ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಮ್ಮ ವಸ್ತುಗಳು ಅಲ್ಲಿಗೆ ಹೋಗುವುದು ಕಷ್ಟ ಎಂದು ಹೇಳಿದ್ದಾರೆ.ನನಗೆ ಭಾರತ ಮತ್ತು ಪ್ರಧಾನ ಮಂತ್ರಿಯ ಬಗ್ಗೆ ತುಂಬಾ ಗೌರವವಿದೆ. ಆದರೆ ಮತದಾರರ ಮತದಾನಕ್ಕಾಗಿ 21 ಮಿಲಿಯನ್ ಡಾಲರ್ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.ಭಾರತದಲ್ಲಿ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅಮೆರಿಕ ನೀಡುತ್ತಿದ್ದ 182 ಕೋಟಿ (21 ಮಿಲಿಯನ್ ಡಾಲರ್) ಅನುದಾನವನ್ನು ಟ್ರಂಪ್ ಸರ್ಕಾರ ಕಳೆದ ವಾರ ಕಡಿತಗೊಳಿಸಿತ್ತು.